/newsfirstlive-kannada/media/post_attachments/wp-content/uploads/2025/06/thug-life-Kamal-Hassan.jpg)
ಬೆಂಗಳೂರು: ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ ಕ್ಷಮೆ ಕೇಳಲು ನಿರಾಕರಿಸಿರುವ ನಟ ಕಮಲ್ ಹಾಸನ್‌ಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಥಗ್ ಲೈಫ್ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ.
ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೀತು. ಈ ವೇಳೆ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಫಿಲ್ಮ್ ಚೇಂಬರ್ ಜೊತೆ ಮಾತುಕತೆ ನಡೆಸಲು ಒಂದು ವಾರಗಳ ಸಮಯ ಕೋರಿದರು.
/newsfirstlive-kannada/media/post_attachments/wp-content/uploads/2025/06/Karnataka-highcourt-kamal-hassan.jpg)
ಇದನ್ನೂ ಓದಿ: ಕಮಲ್ ಹಾಸನ್‌ಗೆ ಕರ್ನಾಟಕ ಹೈಕೋರ್ಟ್ ಫುಲ್ ಕ್ಲಾಸ್.. ನ್ಯಾ. ನಾಗಪ್ರಸನ್ನ ಹೇಳಿದ್ದೇನು?
ಅರ್ಜಿದಾರರ ಪರ ವಕೀಲರೇ 1 ವಾರಗಳ ಸಮಯ ಕೇಳಿದರಿಂದ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿಕೆ.
ಕಮಲ್ ಹಾಸನ್ ಅವರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲೂ ಕ್ಷಮೆ ಕೇಳಿರಲಿಲ್ಲ. ಹೀಗಾಗಿ ಫಿಲ್ಮ್ ಚೇಂಬರ್ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಹೇಳಿದೆ.
ವಕೀಲರು ಕಮಲ್ ಹಾಸನ್ ಅವರು ಫಿಲಂ ಚೇಂಬರ್‌ಗೆ ಬರೆದ ಪತ್ರವನ್ನು ಹೈಕೋರ್ಟ್‌ಗೆ ನೀಡಿದ್ದು, ನಿರ್ಮಾಪಕರು, ಈಗ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶಿಸಲು ಬಯಸಿಲ್ಲ. ಹೀಗಾಗಿ ಈ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಹೈಕೋರ್ಟ್ ಮುಂದೂಡಿದ್ದು, ಪ್ರತಿವಾದಿಗಳಿಗೆ ನೋಟೀಸ್ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us