ಹನಿಟ್ರ್ಯಾಪ್ ಗುಟ್ಟು ರಟ್ಟು.. K.N ರಾಜಣ್ಣ ಹೇಳಿಕೆ ಬೆನ್ನಲ್ಲೇ ಸ್ಫೋಟಕ ಟ್ವಿಸ್ಟ್‌; ಕಾಂಗ್ರೆಸ್‌ ಪಕ್ಷದಲ್ಲಿ ಏನಾಗ್ತಿದೆ?

author-image
admin
Updated On
ಹನಿಟ್ರ್ಯಾಪ್ ಗುಟ್ಟು ರಟ್ಟು.. K.N ರಾಜಣ್ಣ ಹೇಳಿಕೆ ಬೆನ್ನಲ್ಲೇ ಸ್ಫೋಟಕ ಟ್ವಿಸ್ಟ್‌; ಕಾಂಗ್ರೆಸ್‌ ಪಕ್ಷದಲ್ಲಿ ಏನಾಗ್ತಿದೆ?
Advertisment
  • ಸಚಿವರ ಮೇಲಿನ ಹನಿಟ್ರ್ಯಾಪ್​ ಸುಳಿವು ಬಿಚ್ಚಿಟ್ಟ ಮತ್ತೊಬ್ಬ ಸಚಿವರು!
  • ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಯಲಾಗಲು ಕಾರಣವೇನು?
  • ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರಾ?

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಮತ್ತೆ ಸದ್ದು ಮಾಡತೊಡಗಿದೆ. ಸಚಿವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇಷ್ಟು ದಿನ ರೆಕ್ಕೆಪುಕ್ಕ ಕಟ್ಟಿಕೊಂಡು ಹರಿದಾಡ್ತಿದ್ದ ಈ ಸುದ್ದಿಗೆ ಮೊದಲು ಸಚಿವ ಸತೀಶ್​ ಜಾರಕಿಹೊಳಿ ಅವರೇ ಬಿಗ್ ​ಟ್ವಿಸ್ಟ್ ಕೊಟ್ಟರು. ಇದಾದ ಮೇಲೆ ಆ ಸಚಿವರು ರಹಸ್ಯವಾಗಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ.

ಕರ್ನಾಟಕ ರಾಜಕಾರಣದಲ್ಲಿ ಮತ್ತೆ ​ಹನಿಟ್ರ್ಯಾಪ್​ ಸದ್ದು
ಸಚಿವರ ಮೇಲಿನ ಹನಿಟ್ರ್ಯಾಪ್​ ಸುಳಿವು ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ
ರಾಜಕೀಯ ಅನ್ನೋದು ಒಂದು ರೀತಿ ಚಕ್ರವ್ಯೂಹ.. ಇಲ್ಲಿ ಯಾರು.. ಯಾರನ್ನೂ ನಂಬೋದು ಕಷ್ಟ. ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಅದರಲ್ಲೂ ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ನೀಚ ರಾಜಕಾರಣ ಶುರುವಾಗಿ ಹಲವು ಮಾತುಗಳು ಕೇಳಿ ಬರ್ತಿವೆ. ತಮ್ಮ ಎದುರಾಳಿಗಳ ಸದ್ದು ಅಡಗಿಸಲು ಹನಿಟ್ರ್ಯಾಪ್​ ಎಂಬ ಅಸ್ತ್ರವನ್ನು ಪ್ರಯೋಗಿಸ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್​ ಭಾರೀ ಸದ್ದು ಮಾಡ್ತಿದೆ.

publive-image

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ಬಹಿರಂಗಗೊಂಡಿದೆ. ರಾಜ್ಯದ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ಯತ್ನಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇಷ್ಟು ದಿನ ಅದು ಕೇವಲ ಊಹಾಪೋಹ ಎನ್ನಲಾಗ್ತಿತ್ತು. ಆದ್ರೀಗ ಸಚಿವ ಸತೀಶ್​ ಜಾರಕಿಹೊಳಿ ಹನಿಟ್ರ್ಯಾಪ್​ಗೆ ವಿಫಲ ಯತ್ನ ನಡೆದಿದೆ. ಅದು ಒಂದಲ್ಲ.. ಎರಡು ಬಾರಿ ಎಂದು ಬಾಂಬ್​ ಸಿಡಿಸಿದ್ದಾರೆ. ಸಚಿವರ ಹನಿಟ್ರ್ಯಾಪ್​ ಸುದ್ದಿ ಬಗ್ಗೆ ರಿಯಾಕ್ಟ್​ ಮಾಡಿದ ಡಿಸಿಎಂ ಡಿಕೆಶಿ, ಯಾರಿಗೆ ಏನಾಗಿದೆ ಎಂದು ಮೊದಲು ದೂರು ಕೊಡಲಿ. ಅದರ ಬಗ್ಗೆ ತನಿಖೆ ಮಾಡಿಸೋಣ ಎಂದಿದ್ದಾರೆ.

publive-image

ರಹಸ್ಯವಾಗಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಸಚಿವ
ಹನಿಟ್ರ್ಯಾಪ್​ ಯತ್ನದ ಬಗ್ಗೆ ಸಚಿವರು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದಾರೆ. ತುಮಕೂರು ಭಾಗದ ಸಚಿವರೊಬ್ಬರು ಸಿಎಂ ಸರ್ಕಾರ ನಿವಾಸ ಕಾವೇರಿಗೆ ತೆರಳಿ ರಹಸ್ಯವಾಗಿ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಒಬ್ಬ ಸಚಿವರಿಗಷ್ಟೇ ಅಲ್ಲ, ಮೂವರಿಗೆ ಹನಿಟ್ರ್ಯಾಪ್ ಖೆಡ್ಡಾ
ಆಪ್ತ ಸಚಿವರ ಬಳಿ ಮಾಹಿತಿ ಹಂಚಿಕೊಂಡ ಪ್ರಭಾವಿ ಸಚಿವ

ಸದ್ಯ ಕಾವು ಪಡೆದುಕೊಂಡಿರುವ ಹನಿಟ್ರ್ಯಾಪ್ ವಿಚಾರ ವಿಧಾನಸಭೆ ಅಧಿವೇಶನ ಮುಕ್ತಾಯಗೊಂಡ ಬಳಿಕ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಒಬ್ಬ ಸಚಿವರಿಗಷ್ಟೇ ಅಲ್ಲ, ಮೂವರಿಗೆ ಹನಿಟ್ರ್ಯಾಪ್ ಖೆಡ್ಡಾ ತೊಡಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಆಪ್ತ ಸಚಿವರ ಬಳಿ ಪ್ರಭಾವಿ ಸಚಿವರ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಹೀಗಾಗಿ ಹನಿಟ್ರಾಪ್ ಯತ್ನಕ್ಕೆ ಒಳಗಾಗಿರುವ ಪ್ರಮುಖ ಸಚಿವ ಸೇರಿದಂತೆ ಅವರ ಆಪ್ತ ಸಚಿವರು ಹೈಕಮಾಂಡ್‌ಗೆ ದೂರು ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

publive-image

ಕಾಂಗ್ರೆಸ್‌ ಹೈಕಮಾಂಡ್​ಗೆ ದೂರು!
ಹನಿಟ್ರ್ಯಾಪ್ ಯತ್ನಕ್ಕೆ ಒಳಗಾಗಿರುವ ಸಚಿವರು ಹೈಕಮಾಂಡ್​ಗೆ ದೂರು ನೀಡಲು ಮುಂದಾಗಿದ್ದು, ಹನಿಟ್ರ್ಯಾಪ್ ಯತ್ನದ​ ವಿಷ್ಯವನ್ನು ಹೈಕಮಾಂಡ್​ ಗಮನಕ್ಕೆ ತರಲು ಚಿಂತನೆ ನಡೆಸಿದ್ದಾರೆ. ಇದರ ಜೊತೆಗೆ ಹನಿಟ್ರ್ಯಾಪ್ ಯತ್ನಕ್ಕೆ ಒಳಗಾದ ಸಚಿವರು ಖುದ್ದು ಸುದ್ಧಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಈ ಮೂಲಕ ತಮ್ಮನ್ನ ರಾಜಕೀಯವಾಗಿ ಹಣಿಯಲು ಹನಿ ಖೆಡ್ಡಾಕ್ಕೆ ಕೆಡವಲು ಯತ್ನ ಮಾಡಿದ್ದಾರೆಂದು ಬಿಂಬಿಸಲು ಮಾಧ್ಯಮಗಳ ಮುಂದೆ ಮಾತನಾಡಲಿದ್ದಾರೆ ಎಂಬ ಗುಸುಗುಸು ಕೇಳಿ ಬರ್ತಿದೆ.

ಇದನ್ನೂ ಓದಿ: ಹನಿಟ್ರ್ಯಾಪ್ ಮಧ್ಯೆ ಡಿ.ಕೆ ಶಿವಕುಮಾರ್ ಮೇಲೆ ಶಾಸಕ ಮುನಿರತ್ನ ಹೊಸ ಬಾಂಬ್‌; ಹೇಳಿದ್ದೇನು? 

ಅದೇನೆ ಇರಲಿ.. ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯ ಬಾಯಿ ಮತ್ತು ಕಚ್ಛೆ ಎರಡೂ ಸರಿಯಾಗಿರಬೇಕು. ಕರ್ನಾಟಕದ ರಾಜಕೀಯದಲ್ಲಿ ಹನಿಟ್ರ್ಯಾಪ್​ ಸುದ್ದು ಬಿರುಗಾಳಿಯನ್ನೇ ಎಬ್ಬಿಸಿದೆ. ಮುಂದಿನ ದಿನಗಳ ಇದು ಇನ್ಯಾವ ಸ್ವರೂಪ ಪಡೆದುಕೊಳ್ಳುತ್ತೋ ಅನ್ನೋದೇ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment