ರಾಜ್ಯದಲ್ಲಿ ಮುಂಗಾರು ಚುರುಕು.. ರೈತರ ಮೊಗದಲ್ಲಿ ಮಂದಹಾಸ.. ಮಳೆಯ ಅಬ್ಬರ ಹೆಂಗಿದೆ..?

author-image
Ganesh
Updated On
ರಾಜ್ಯದಲ್ಲಿ ಮುಂಗಾರು ಚುರುಕು.. ರೈತರ ಮೊಗದಲ್ಲಿ ಮಂದಹಾಸ.. ಮಳೆಯ ಅಬ್ಬರ ಹೆಂಗಿದೆ..?
Advertisment
  • ಮರವಂತೆ ಸಮುದ್ರ ತೀರದಲ್ಲಿ ತಪ್ಪಿದ ಭಾರೀ ದುರಂತ
  • ಮಳೆ ಅಬ್ಬರ.. ಏಕಾಏಕಿ ನುಗ್ಗಿದ ಮಳೆ ನೀರು.. ಪರದಾಟ!
  • ಭಾರೀ ಮಳೆ ಮುನ್ಸೂಚನೆ.. ಹವಾಮಾನ ಇಲಾಖೆ ಹೇಳಿದ್ದೇನು..?

ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ ಇದೀಗ ಮತ್ತೆ ಅಬ್ಬರಿಸೋದಕ್ಕೆ ಶುರು ಮಾಡಿದ್ದಾರೆ. ರಾಜ್ಯದ ಜಿಲ್ಲೆಯ ಕೆಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಆದ್ರೆ ವಿವಿಧ ಬೆಳೆಗಳ ಬಿತ್ತನೆ ಮಾಡಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮರವಂತೆ ಸಮುದ್ರ ತೀರದಲ್ಲಿ ತಪ್ಪಿದ ಭಾರೀ ದುರಂತ

ಸೆಲ್ಫಿ ಹುಚ್ಚಿಗೆ ಸಮುದ್ರ ಪಾಲಾಗ್ತಿದ್ದ ಐವರನ್ನ ರಕ್ಷಣೆ ಮಾಡಿದ ಘಟನೆ ಉಡುಪಿಯ ಮರವಂತೆ ಸಮುದ್ರ ತೀರದಲ್ಲಿ ನಡೆದಿದೆ. ಸೆಲ್ಫಿಗೆ ಮರವಂತೆ ಸಮುದ್ರ ತೀರದ ಕಲ್ಲು ಬಂಡೆಗಳ ಮೇಲೆ ಹೋದಾಗ ರಕ್ಕಸ ಅಲೆಗಳ ಹೊಡೆತಕ್ಕೆ ಐವರು ಸಮುದ್ರ ಪಾಲಾಗಿದ್ದರು. ಕೂಡಲೇ ಎಚ್ಚೆತ್ತ ಲೈಫ್ ಗಾರ್ಡ್ ಹಾಗೂ ಸ್ಥಳೀಯರು ಐವರನ್ನ ರಕ್ಷಿಸಿ ಜೀವ ಉಳಿಸಿದ್ದಾರೆ.

ಇದನ್ನೂ ಓದಿ: ಜಸ್ಟ್ 5 ನಿಮಿಷ ತಬ್ಬಿಕೊಳ್ಳಲು 600 ರೂಪಾಯಿ ಚಾರ್ಜ್‌; ಏನಿದು ‘man mum’ ಟ್ರೆಂಡ್‌?

ಮಳೆ ಅಬ್ಬರ.. ಏಕಾಏಕಿ ನುಗ್ಗಿದ ಮಳೆ ನೀರು.. ಪರದಾಟ!

ಧಾರವಾಡದಲ್ಲಿ ಮಳೆ ಅಬ್ಬರಕ್ಕೆ ಅಪಾರ ಪ್ರಮಾಣದ ನೀರು ಹಾವೇರಿಪೇಟ ಬಡಾವಣೆ.. ಕೆಎಂಎಫ್​.. ಬಿಆರ್​ಟಿಎಸ್ ಕಾರಿಡಾರ್ ನುಗ್ಗಿದೆ. ಪರಿಣಾಮ ವಾಹನ ಚಲಾಯಿಸಲಾಗಿದೆ ಕೆಲ ಸವಾರರು ಕೂಡ ಪರದಾಡಿದ್ರು. ಇತ್ತ ಹೆಬ್ಬಳ್ಳಿಯಲ್ಲಿ ಹೊಲಗದ್ದೆಗಳಲ್ಲೂ ಇದೇ ಪರಿಸ್ಥಿತಿ. ರಸ್ತೆ ಜಲಾವೃತವಗಿದ್ರಿಂದ ವಾಹನಗಳ ಓಡಾಟ ಕೆಲ ಹೊತ್ತು ಸ್ಥಗಿತವಾಗಿತ್ತು.

ಅಬ್ಬರಿಸಿದ ವರುಣ.. ಶಕ್ತಿ ದೇವತೆಗೆ ಜಲದಿಗ್ಬಂಧನ

ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ಶಕ್ತಿ ದೇವತೆ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ಜಲದಿಗ್ಬಂಧನ ಎದುರಾಗಿದೆ.

ಇದನ್ನೂ ಓದಿ: 500 ರೂಪಾಯಿ ನೋಟು ರದ್ದುಗೊಳಿಸಬೇಕು.. ಕಾರಣ ಕೊಟ್ಟ ಸಿಎಂ ಚಂದ್ರಬಾಬು ನಾಯ್ಡು!

publive-image

ಹಳೇಬೀಡಿನಲ್ಲಿ ಇದ್ದಕ್ಕಿದ್ದಂತೆ ಸುರಿದ ಭಾರಿ ವರ್ಷಧಾರೆ

ಹಳೇಬೀಡಿನಲ್ಲಿ ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆ ಸುರಿದಿದೆ. ಕೆರೆ ಒತ್ತುವರಿಯಾಗಿರುವ ಕಾರಣ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಯಲೆಲ್ಲಾ ಮಳೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ರು.

ಚರಂಡಿ ಬ್ಲಾಕ್ ಆಗಿ ಮನೆಗಳಿಗೆ ನುಗ್ಗಿದ ನೀರು

ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ಭಾರೀ ಮಳೆಯಾಗಿದ್ದು, ಚರಂಡಿ ಬ್ಲಾಕ್ ಆಗಿ.. ಕಲ ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಗೆ ನುಗ್ಗಿದ ಚರಂಡಿ ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ರು.

ಇದನ್ನೂ ಓದಿ: ಬಾಗಲಕೋಟೆ; ಮೆಡಿಕಲ್ ಆಫೀಸರ್​, ನರ್ಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ!

ನಾಳೆಯಿಂದ ಬೆಂಗಳೂರು ಸೇರಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡುವ ಜೊತೆಗೆ ಮುಂಗಾರು ಚುರುಕಾಗುತ್ತಿರೋ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಳ್ಳಾರಿ, ದಾವಣಗೆರೆ, ವಿಜಯನಗರ ಸೇರಿದಂತೆ ಹಲವರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: KL ರಾಹುಲ್, ಕ್ಯಾಪ್ಟನ್​ ಈಶ್ವರನ್ ಭರ್ಜರಿ ಹಾಫ್​​ಸೆಂಚುರಿ.. ಕನ್ನಡಿಗ ಕರುಣ್​ ಔಟ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment