newsfirstkannada.com

VIDEO: ಏಜೆಂಟ್​ ನಂಬಿ ಕೆಲಸಕ್ಕೆ ವಿದೇಶಕ್ಕೆ ಹೋಗ್ಬೇಡಿ.. ಕಲಬುರಗಿಯ ಈ 3 ಯುವಕರ ಕತೆ ಕೇಳಿದ್ರೆ ಅಳು ಬರುತ್ತೆ

Share :

Published February 22, 2024 at 11:08am

Update February 22, 2024 at 1:04pm

    ವಿದೇಶಕ್ಕೆ ಕೆಲಸಕ್ಕೆ ತೆರಳುವವರೇ ಎಚ್ಚರ! ಏಚ್ಚರ! ಎಚ್ಚರ!

    ಸೆಕ್ಯುರಿಟಿ ಗಾರ್ಡ್​​ ಕೆಲಸ ಕೊಡಿಸುವುದಾಗಿ ಯುದ್ಧಕ್ಕೆ ಬಳಕೆ

    ವಿಡಿಯೋ ಮಾಡಿ ನೋವು ತೋಡಿಕೊಂಡ ಕರ್ನಾಟಕದ ಯುವಕರು

ಕಲಬುರಗಿ: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳು ಪ್ಲಾನ್​ ಇದೆಯಾ?. ಹಾಗಿದ್ರೆ ಎಚ್ಚರ. ಏಜೆಂಟ್​ ಮೂಲಕ ಕೆಲಸ ಕೊಡಿಸುತ್ತೇವೆ ಎಂಬ ನೆಪದಲ್ಲಿ ವಿದೇಶ ತೆರಳುವ ಆಸೆ ಹೊಂದಿದ್ದರೆ ಈ ಸ್ಟೋರಿ ನೋಡಲೇಬೇಕು. ಕಲಬುರಗಿ ಮೂಲದ ಯುವಕರನ್ನು ವಿದೇಶದಲ್ಲಿ ಯುದ್ಧಕ್ಕೆ ಬಳಕೆ ಮಾಡಿರುವ ಸಂಗತಿ ವಿಡಿಯೋ ಸಮೇತ ಬೆಳಕಿಗೆ ಬಂದಿದೆ. ತಾವು ಕಷ್ಟಪಡುತ್ತಿರುವ ವಿಚಾರವನ್ನು ವಿಡಿಯೋದ ಮೂಲಕ ಹಂಚಿಕೊಂಡಿದ್ದಾರೆ.

ಕರ್ನಾಟಕದ ಕಲಬುರಗಿ ಮೂಲದ ಮೂರು ಯುವಕರು ಉದ್ಯೋಗಕ್ಕಾಗಿ ರಷ್ಯಾಗೆ ತೆರಳಿ ಅಲ್ಲಿ ಪರದಾಟುತ್ತಿರುವ ಸಂಗತಿ ಮುನ್ನೆಲೆಗೆ ಬಂದಿದೆ. ಭಾರತೀಯರನ್ನು ಅಲ್ಲಿ ಯುದ್ದಕ್ಕೆ ಬಳಕೆ ಮಾಡಿರುವ ವಿಚಾರವನ್ನು ಯುವಕರು ವಿಡಿಯೋದ ಮೂಲಕ ತೆರೆದಿಟ್ಟಿದ್ದಾರೆ. ಆ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಕಲಬುರಗಿ ಮೂಲದ ಮೂವರನ್ನು ರಷ್ಯಾ ಉಕ್ರೇನ್ ಉದ್ದಕ್ಕೆ ಬಳಸಿಕೊಂಡ ಹಿನ್ನೆಲೆ ಪರದಾಟುತ್ತಿದ್ದಾರೆ. ದುಬೈ ಏಜೆಂಟರ ಮೂಲಕ ರಷ್ಯಾಕ್ಕೆ ತೆರಳಿ ಅಲ್ಲಿ ಕಷ್ಟಪಡುತ್ತಿದ್ದಾರೆ. ಸೆಕ್ಯುರಿಟಿ ಕೆಲಸ ಕೊಡಿಸುವುದಾಗಿ ಹೇಳಿ ಏಜೆಂಟ್​ಗಳು ರಷ್ಯಾಗೆ ಕಳುಹಿಸಿದ್ದಾರೆ. ಆದರೆ ಸೆಕ್ಯುರಿಟಿ ಕೆಲಸದ ಬದಲಿಗೆ ರಷ್ಯಾ ಉಕ್ರೇನ್ ಯುದ್ದಕ್ಕೆ ಅವರನ್ನು ಬಳಸಿಕೊಂಡಿದ್ದಾರೆ.

ಇದರಿಂದ ನೊಂದ ಯುವಕರು ನಮ್ಮನ್ನ‌ ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಯುವಕರು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಂಸದ ಅಸಾದುದ್ದೀನ್ ಓವೈಸಿ ರಷ್ಯಾದಲ್ಲಿ ಸಿಲುಕಿದ ಯುವಕರನ್ನ ಸೇಫ್ ಆಗಿ ಕರೆತರುವಂತೆ ಕೇಂದ್ರಕ್ಕೆ‌ ಪತ್ರ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಏಜೆಂಟ್​ ನಂಬಿ ಕೆಲಸಕ್ಕೆ ವಿದೇಶಕ್ಕೆ ಹೋಗ್ಬೇಡಿ.. ಕಲಬುರಗಿಯ ಈ 3 ಯುವಕರ ಕತೆ ಕೇಳಿದ್ರೆ ಅಳು ಬರುತ್ತೆ

https://newsfirstlive.com/wp-content/uploads/2024/02/Rusia.jpg

Load More