/newsfirstlive-kannada/media/post_attachments/wp-content/uploads/2023/08/krs.jpg)
ಮಂಡ್ಯ: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಸದ್ಯ ವಾತಾವರಣವನ್ನು ತಣ್ಣಗಾಗಿಸಿದೆ. ಬಿಸಿಲ ಬೇಗೆಯಿಂದ ಕೂಡಿದ್ದ ಅದೆಷ್ಟೋ ಜಿಲ್ಲೆಗಳು ಇದೀಗ ಕೂಲ್​ ಕೂಲ್​ ಆಗಿದೆ. ಜೊತೆಗೆ ಮಳೆಯಿಂದಾಗಿ ಕೆರೆ, ಕಟ್ಟೆಗಳು ತುಂಬುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಳೆ ಬಂದರೆ ಅಣೆಕಟ್ಟುಗಳು ತುಂಬುತ್ತವೆ. ಅದರಂತೆಯೇ ಕೃಷ್ಣರಾಜ ಸಾಗರ ಮತ್ತು ಕಬಿನಿಯಲ್ಲೂ ಮಳೆಯ ನೀರು ತುಂಬುತ್ತಿವೆ. ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಈ ವಿಚಾರ ರೈತರಿಗೆ ಸಂತಸಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಕೆಆರ್​ಎಸ್​ ನೀರನ್ನೇ ನಂಬಿಕೊಂಡು ಅದೆಷ್ಟೋ ರೈತ ಕುಟುಂಬಗಳು ಬದುಕುತ್ತಿವೆ. ಕಳೆದ ವರ್ಷ ನೀರಿಲ್ಲದೆ ಈ ಭಾಗದ ರೈತರು ಸಂಕಷ್ಟ ಎದುರಿಸಿದ್ದರು. ಆದರೆ ಈ ಭಾರಿ ಸುರಿಯುತ್ತಿರುವ ಮಳೆಗೆ ಸಂತಸಗೊಂಡಿದ್ದಾರೆ. ಅಂದಹಾಗೆಯೇ ಸದ್ಯ ಕೆಆರ್​ಎಸ್​ ಡ್ಯಾಂನ ನೀರಿನ ಮಟ್ಟ ಇಂದು ಎಷ್ಟಿದೆ ಎಂದು ನೋಡುವುದಾದರೆ..
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 81.45 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 11.440 ಟಿಎಂಸಿ
ಒಳ ಹರಿವು - 1,971 ಕ್ಯೂಸೆಕ್
ಹೊರ ಹರಿವು - 522 ಕ್ಯೂಸೆಕ್
ಕಬಿನಿ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
ಕೇರಳದ ವಯನಾಡು ಸೇರಿದಂತೆ ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಹೀಗಾಗಿ ಕಬಿನಿ ಜಲಾಶಯದ ಒಳ ಹರವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ.
ಮೂರೇ ದಿನದಲ್ಲಿ ಕಬಿನಿ ಜಲಾಶಯದ ಒಳಹರಿವು ದಿಢೀರ್ ಹೆಚ್ಚಳವಾಗಿದೆ. 45 ಕ್ಯೂಸೆಕ್ಸ್ ನಿಂದ 4,500 ಕ್ಯೂಸೆಕ್ಸ್ ಗೆ ಏರಿಕೆ ಕಂಡಿದೆ. ಮೂರು ದಿನಗಳ ಹಿಂದೆ ಕೇವಲ 45 ಕ್ಯೂಸೆಕ್ಸ್ ಒಳಹರಿವಿತ್ತು. ಆದರೆ ಕಬಿನಿ ಜಲಾಶಯದ ಇಂದಿನ ಒಳಹರಿವಿನ ಪ್ರಮಾಣ 4356 ಕ್ಯೂಸೆಕ್​ಗೆ ಏರಿಕೆ ಕಂಡಿದೆ.
/newsfirstlive-kannada/media/post_attachments/wp-content/uploads/2023/07/KABINI_JALASHAYA.jpg)
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದ ಮೃತದೇಹಗಳು ಇಲಿಗಳ ಪಾಲು.. ಕಣ್ಣು, ಹೆಬ್ಬೆರಳು ತಿಂದು ತೇಗಿದ ಮೂಷಿಕ
ಇನ್ನು ಕಬಿನಿ ಜಲಾಶಯ ಸಮುದ್ರಮಟ್ಟದಿಂದ 2284 ಅಡಿ ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 2258 ಅಡಿ ಇದೆ. ಕಬಿನಿ ಜಲಾಶಯದಲ್ಲಿ 6.70 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಜಲಾಶಯದಿಂದ ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿಗಾಗಿ 300 ಕ್ಯೂಸೆಕ್ ನೀರು ಹೊರ ಹರಿಯುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us