ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. KRS ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟಿದೆ?

author-image
AS Harshith
Updated On
ಗುಡ್​​ನ್ಯೂಸ್.. ಕೆಆರ್​​ಎಸ್​ ಡ್ಯಾಂ ತುಂಬಲು ಕೆಲವೇ ಅಡಿಗಳು ಮಾತ್ರ ಬಾಕಿ..
Advertisment
  • ಕೆಆರ್​ಎಸ್​​ ಡ್ಯಾಂನ ಇಂದಿನ ಸಾಂದ್ರತೆ ಎಷ್ಟು ಗೊತ್ತಾ?
  • ಒಳ ಹರಿವು ಮತ್ತು ಹೊರ ಹರಿವಿನ ಬಗ್ಗೆ ಇಲ್ಲಿದೆ ಮಾಹಿತಿ
  • ಮಳೆಯಿಂದಾಗಿ ರೈತರ ಮುಖದಲ್ಲಿ ಮೂಡಿದ ಮಂದಹಾಸ

ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಕೆರೆ, ಕಟ್ಟೆಗಳು ತುಂಬುತ್ತಿವೆ. ರೈತರಿಗಂತೂ ವರುಣನ ದರ್ಶನದಿಂದ ಸಂತಸ ಮನೆ ಮಾಡಿದೆ. ಕಾರಣ ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದರಿಂದ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ನೀರು ಬರಲಾರಂಭಿಸಿದೆ. ಈ ವಿಚಾರವಂತೂ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ನೋವು ಹಂಚಿಕೊಂಡ ಯುವ ರಾಜ್​ಕುಮಾರ್​ ಪತ್ನಿ.. ಮನದ ಮಾತು ಬಿಚ್ಚಿಟ್ಟ ಶ್ರೀದೇವಿ

ಕಾವೇರಿ ನೀರನ್ನು ನಂಬಿ ಅನೇಕ ಕುಟುಂಬಗಳು ಬದುಕುತ್ತಿವೆ. ಕೃಷಿ, ಕುಡಿಯಲು ಇದೇ ನೀರನ್ನು ನಂಬಿರುವ ಅನೇಕ ಕುಟುಂಬಗಳಿವೆ. ಆದರೆ ಕಳೆದ ವರ್ಷ ಕಾವೇರಿ ನೀರಿನ ಅಭಾವ ಉಂಟಾಗಿತ್ತು. ಆದರೆ ಈ ವರ್ಷದ ವರುಣನ ಅಬ್ಬರ ನೋಡಿದರೆ ಕೆಆರ್​ಎಸ್​ ಬೇಗನೆ ತುಂಬಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ! ಅಷ್ಟಕ್ಕೂ ಸಾಯೋ ನಿರ್ಧಾರ ಮಾಡಿದ್ಯಾಕೆ?

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 84.95 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 13.142 ಟಿಎಂಸಿ
ಒಳ ಹರಿವು - 1,423 ಕ್ಯೂಸೆಕ್
ಹೊರ ಹರಿವು - 444 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment