/newsfirstlive-kannada/media/post_attachments/wp-content/uploads/2024/12/JOB_ITBP_1.jpg)
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸಹಾಯಕರ ಹುದ್ದೆ ಸೇರಿ ಇತರೆ ಉದ್ಯೋಗಗಳನ್ನು ತುಂಬಲಾಗುತ್ತಿದೆ. ಈಗಾಗಲೇ ಈ ಹುದ್ದೆಗಳನ್ನು ಆಹ್ವಾನ ಮಾಡಿತ್ತು. ಆದರೆ ಇದೀಗ ವಯೋಮಿತಿ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಅರ್ಜಿಯನ್ನ ಮತ್ತೆ ಕರೆಯಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸದೇ ಇರುವವರು ಇಂದು ಸಂಜೆ ಒಳಗೆ ಅಪ್ಲೇ ಮಾಡಬಹುದು.
ಈ ಕೆಲಸಗಳಿಗೆ ಎಲ್ಲ ವರ್ಗದವರಿಗೂ 3 ವರ್ಷದ ವಯೋಮಿತಿಯನ್ನು ಹೆಚ್ಚು ಮಾಡಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸದೇ ಇರುವವರು ಈಗ ಅಪ್ಲೇ ಮಾಸಬಹುದು. 2024ರ ಮಾರ್ಚ್ನಲ್ಲಿ ಈ ಉದ್ಯೋಗಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕೊನೆ ದಿನಾಂಕ, ಉದ್ಯೋಗಗಳು, ಬೇಕಾದ ಅರ್ಹತೆ ಏನು ಎಂದು ಇಲ್ಲಿ ಮಾಹಿತಿ ಇದೆ. ಸರ್ಕಾರಿ ಉದ್ಯೋಗ ಬಯಸುವವರಿಗೆ ಇದೊಂದು ಸುವರ್ಣಾವಕಾಶ ಆಗಿದೆ.
2024ರ ಮಾರ್ಚ್ನಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿನ ಎಲ್ಲ ಹುದ್ದೆಗಳಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಕನಿಷ್ಠ 18 ವರ್ಷದಿಂದ ಗರಿಷ್ಠ 43 ವರ್ಷಗಳ ಒಳಗಿನವರಿಗೆ ಅವಕಾಶ ಇದೆ.
ಇದನ್ನೂ ಓದಿ:1,200ಕ್ಕೂ ಅಧಿಕ ಹುದ್ದೆಗಳ ನೇಮಕಾತಿ.. ಇಂದಿನಿಂದ ಅರ್ಜಿ ಆರಂಭ, ಈ ಕೂಡಲೇ ಅಪ್ಲೇ ಮಾಡಿ
ಉದ್ಯೋಗದ ಹೆಸರು;
ಕಿರಿಯ ಸಹಾಯಕ ಸೇರಿ ಇತರೆ ಉದ್ಯೋಗಗಳು ಇವೆ
ಒಟ್ಟು ಹುದ್ದೆಗಳು; 07
ಇದರಲ್ಲಿ ಉಳಿಕೆ ಮೂಲ ವೃಂದಕ್ಕೆ 06, ಕಲ್ಯಾಣ ಕರ್ನಾಟಕಕ್ಕೆ 01 ಹುದ್ದೆ ಇದೆ.
ಮಾಸಿಕ ವೇತನ- ₹34,100 ರಿಂದ ₹67,600
ವಯೋಮಿತಿ ಸಡಿಲಿಕೆ
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 35- 38 ವರ್ಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳು- 38- 41 ವರ್ಷ
ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು- 40- 43 ವರ್ಷ
ದಿನಾಂಕಗಳನ್ನ ನೆನಪಿಡಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ; 03 ಜನವರಿ 2025
ಅರ್ಜಿ ಸಲ್ಲಿಸಬೇಕು ಎನ್ನುವರು ಈ ವೆಬ್ಸೈಟ್ಗೆ ಭೇಟಿ ನೀಡಿ;
https://cetonline.karnataka.gov.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ