/newsfirstlive-kannada/media/post_attachments/wp-content/uploads/2024/09/JOBS_GOVT_NEW.jpg)
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸದ್ಯ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸಹಾಯಕರ ಹುದ್ದೆ, ಇತರೆ ಕೆಲವು ಕೆಲಸಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಿ ಅಂತಿಮ ದಿನಾಂಕ ಕೂಡ ಮುಗಿದಿತ್ತು. ಆದರೆ ಇದೀಗ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿದ್ದರಿಂದ ಈಗ ಅರ್ಜಿಯನ್ನ ಮತ್ತೆ ಆಹ್ವಾನಿಸಲಾಗಿದೆ.
2024ರ ಮಾರ್ಚ್ನಲ್ಲಿ ಈ ಉದ್ಯೋಗಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈಗ ಸರ್ಕಾರದ ಆದೇಶದಂತೆ ಒಂದು ಬಾರಿಗೆ 3 ವರ್ಷ ವಯಸ್ಸಿನ ಅರ್ಹತೆ ಹೆಚ್ಚಳ ಮಾಡಿ ಮತ್ತೆ ಅರ್ಜಿ ಸಲ್ಲಿಕೆಗೆ ಇಲಾಖೆ ಅವಕಾಶ ನೀಡಿದೆ. ಕೊನೆ ದಿನಾಂಕ, ಎಷ್ಟು ಉದ್ಯೋಗಗಳು, ಮಾನದಂಡಗಳೇನು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.
ಸರ್ಕಾರ ಆದೇಶದಂತೆ ಒಂದು ಬಾರಿಗೆ ವಯೋಮಿತಿ ಸಡಿಲಿಕೆ
ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 43 ವರ್ಷಗಳು
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು- 35 ರಿಂದ 38 ವರ್ಷ
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳು- 38 ರಿಂದ 41 ವರ್ಷ
- ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು- 40 ರಿಂದ 43 ವರ್ಷ
ಇದನ್ನೂ ಓದಿ:BHEL; ಆಸಕ್ತರಿಂದ ಅರ್ಜಿ ಆಹ್ವಾನ ಮಾಡಿದ ಸಂಸ್ಥೆ.. ಪರೀಕ್ಷೆ ಇಲ್ಲ, ಅರ್ಜಿ ಶುಲ್ಕ ಇಲ್ಲ
ಉದ್ಯೋಗದ ಹೆಸರು;
ಕಿರಿಯ ಸಹಾಯಕರು, ಇತರೆ ಉದ್ಯೋಗ
ಒಟ್ಟು ಹುದ್ದೆಗಳು; 07
ಇದರಲ್ಲಿ ಉಳಿಕೆ ಮೂಲ ವೃಂದಕ್ಕೆ 06, ಕಲ್ಯಾಣ ಕರ್ನಾಟಕಕ್ಕೆ 01 ಹುದ್ದೆ ಇದೆ.
ತಿಂಗಳ ಸಂಬಳ- 34,100 ರಿಂದ 67,600 ರೂಪಾಯಿಗಳು
ಮುಖ್ಯ ದಿನಾಂಕಗಳನ್ನ ನೆನಪಿಡಿ
- ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ; 04 ಡಿಸೆಂಬರ್ 2024
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ; 03 ಜನವರಿ 2025
ಅರ್ಜಿ ಸಲ್ಲಿಸಬೇಕು ಎನ್ನುವರು ಈ ವೆಬ್ಸೈಟ್ಗೆ ಭೇಟಿ ನೀಡಿ;
https://cetonline.karnataka.gov.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ