newsfirstkannada.com

ಅಧಿವೇಶನದಲ್ಲಿ ಕಾಡಲಿದೆ 4 ಮಾಜಿ ಸಿಎಂಗಳ ಅನುಪಸ್ಥಿತಿ.. BSY, HDK ಸ್ಥಾನ ತುಂಬುತ್ತಾರಾ ಅಶೋಕ್, ವಿಜಯೇಂದ್ರ?

Share :

Published July 15, 2024 at 8:33am

    ಸಿದ್ದು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿಗೆ ಅಕ್ರಮಗಳೇ ಬ್ರಹ್ಮಾಸ್ತ್ರ

    ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ

    ಹೊರಗೆ ನಡೆಯುತ್ತಿದ್ದ ವಾಕ್ಸಮರ ಈಗ ಸದನದ ಒಳಗೆ ನಡೆಯುತ್ತದೆ

ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗ್ತಿದೆ. ಸರ್ಕಾರದ ವಿರುದ್ಧ 2 ಪ್ರಬಲ ಅಸ್ತ್ರಗಳು ವಿಪಕ್ಷಗಳ ಕೈಸೇರಿದ್ದು, ಸದನ ರಣರಂಗವಾಗಲಿದೆ. ಮೈತ್ರಿ ಪಡೆಗೆ ಹೆಚ್.​ಡಿ ಕುಮಾರಸ್ವಾಮಿ, ಬೊಮ್ಮಾಯಿಯಂತ ಸದನಶೂರರ ಅನುಪಸ್ಥಿತಿ ಕಾಡಲಿದೆ. ಅಶೋಕ್​, ವಿಜಯೇಂದ್ರ ಮೇಲೆ ಹೆಚ್ಚಿನ ಹೊಣೆ ಇದ್ದು, ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ.

ಇದನ್ನೂ ಓದಿ: ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?

ಇಂದಿನಿಂದ 9 ದಿನಗಳ ಕಾಲ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಈ ಬಾರಿಯ ಅಧಿವೇಶನ ಕೇವಲ ಕಲಾಪವಾಗಿರುವುದಿಲ್ಲ. ಬದಲಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಗ್ಯುದ್ಧವಾಗಿದೆ. ಮಾತಿನ ಚಕಮಕಿ.. ಪರಸ್ಪರ ವಾಗ್ಬಾಣಗಳ ಪ್ರಯೋಗ. ವಿಧಾನಮಂಡಲದಲ್ಲಿ ಮಾತಿನ ಮಲ್ಲಯುದ್ಧವೇ ನಡೆಯಲಿದೆ.

ಇದನ್ನೂ ಓದಿ: ವಿಶ್ವ ದರ್ಜೆ ಬೌಲರ್​​ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!

ಮೈತ್ರಿ ಪಡೆ ಬತ್ತಳಿಕೆಯಲ್ಲಿ ವಾಲ್ಮೀಕಿ, ಮುಡಾ ಅಕ್ರಮ!

ವಾಲ್ಮೀಕಿ ಬಹುಕೋಟಿ ಹಗರಣ.. ಮುಡಾ ಅವ್ಯವಹಾರ, ಹೆಚ್ಚುತ್ತಿರುವ ಡೆಂಗ್ಯು ಪ್ರಕರಣ.. ಈ ಬಾರಿ ಸದನದಲ್ಲಿ ಕದನವಾಗಿ ಮಾರ್ಪಡಲಿವೆ.. ಇದೇ ಅಸ್ತ್ರಗಳನ್ನೇ ದೋಸ್ತಿಪಡೆ ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿವೆ.. ಇಂದಿನಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು ಕಾಂಗ್ರೆಸ್​ ಸರ್ಕಾರದ ಮೇಲೆ ಪ್ರಯೋಗಿಸಲು ಸಜ್ಜಾಗಿವೆ.. ಲೋಕಸಭೆ ಚುನಾವಣೆ ಬಳಿಕ ನಡೀತಿರುವ ಮೊದಲ ಅಧಿವೇಶನ ಇದಾಗಿದ್ದು, ವಿಪಕ್ಷಗಳಿಗೂ ಫಲಿತಾಂಶ ಬಲ ನೀಡಿದೆ.. ಈವರೆಗೆ ಸದನದ ಹೊರಗೆ ನಡೀತಿದ್ದ ಹೋರಾಟ, ಈಗ ಸದನಕ್ಕೆ ವ್ಯಾಪಿಸಲಿದೆ..

ವಿಪಕ್ಷಗಳ ಬತ್ತಳಿಕೆಯಲ್ಲಿವೆ ದಶಾಸ್ತ್ರಗಳು!

ಅಸ್ತ್ರ 1: ಸರ್ಕಾರದ ವಿರುದ್ಧ ಮುಗಿಬೀಳಲು ಮುಡಾ ಅಕ್ರಮ ಬ್ರಹ್ಮಾಸ್ತ್ರ
ಅಸ್ತ್ರ 2: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಸದ್ದು- ಗದ್ದಲ
ಅಸ್ತ್ರ 3: ನಾಗೇಂದ್ರ ರಾಜೀನಾಮೆ, ಬಂಧನ ದದ್ದಲ್​ಗೆ ಬಂಧನ ಭೀತಿ
ಅಸ್ತ್ರ 4: ಆದ್ರೆ ಸಿಎಂ ರಾಜೀನಾಮೆ, ತನಿಖೆ ಸಿಬಿಐಗೆ ಒಪ್ಪಿಸಲು ಆಗ್ರಹ
ಅಸ್ತ್ರ 5: ಬರ- ಬೆಳೆ ಹಾನಿಗೆ 14 ತಿಂಗಳಲ್ಲಿ 1,182 ರೈತರು ಆತ್ಮಹತ್ಯೆ
ಅಸ್ತ್ರ 6: ಪೂರ್ಣ ಪ್ರಮಾಣದಲ್ಲಿ ತಲುಪದ ಗ್ಯಾರಂಟಿ ಯೋಜನೆಗಳು
ಅಸ್ತ್ರ 7: ಗ್ಯಾರಂಟಿ ಕಾರಣ ಅಭಿವೃದ್ದಿ ಯೋಜನೆಗಳಿಗೆ ಸಿಗದ ಆದ್ಯತೆ
ಅಸ್ತ್ರ 8: ಗ್ಯಾರಂಟಿಗೆ ಎಸ್​​ಸಿ-ಎಸ್​ಟಿಗೆ ಮೀಸಲಿಟ್ಟ ಹಣ ಬಳಕೆ ಪ್ರಶ್ನೆ
ಅಸ್ತ್ರ 9: ರಾಜ್ಯದಲ್ಲಿ ಪಾತಾಳಕ್ಕೆ ಕುಸಿದಿರುವ ಕಾನೂನು ಸುವ್ಯವಸ್ಥೆ
ಅಸ್ತ್ರ 10: ಡೆಂಘೀ, ಬೆಲೆ ಏರಿಕೆ, 7ನೇ ವೇತನ ಆಯೋಗ ವರದಿ ಜಾರಿ

ಕೇವಲ ವಿಪಕ್ಷಗಳ ಬಳಿ ಮಾತ್ರ ಅಸ್ತ್ರಗಳಿಲ್ಲ. ಇತ್ತ ಆಡಳಿತ ಪಕ್ಷದ ಬತ್ತಳಿಕೆಯಲ್ಲೂ ಪ್ರತ್ಯಾಸ್ತ್ರಗಳಿವೆ. ಬಿಜೆಪಿ ಆಡಳಿತಾವಧಿಯಲ್ಲಿನ ಲೋಪ-ದೋಷ ಮುಂದಿಟ್ಟು ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಿಕೊಂಡಿದೆ. ಅಲ್ಲದೆ ಚರ್ಚೆಗೆ ಸಮರ್ಪಕ ಉತ್ತರ ನೀಡಲು ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಮಾಹಿತಿ ಒದಗಿಸಬೇಕೆಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಮಾಡಿ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!

ಮೊನ್ನೆ ಶುಕ್ರವಾರ ಸಮನ್ವಯ ಸಮಿತಿ ಸಭೆ ನಡೆಸಿದ್ದ ಮೈತ್ರಿ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.. ವಿಪಕ್ಷವಾಗಿ ಪ್ರಸ್ತಾಪಿಸಬೇಕಿರುವ ಎಲ್ಲ ವಿಷಯ ಪ್ರಸ್ತಾಪಿಸಿದ ಬಳಿಕವೇ ಪ್ರತಿಭಟನೆಗೆ ನಿರ್ಧರಿಸಿದೆ.. ಅಲ್ಲದೆ ಸದನದಲ್ಲಿ ಮುಡಾ ಅಕ್ರಮಕ್ಕೆ ಹೆಚ್ಚು ಒತ್ತು ನೀಡುವಂತೆ ಕೇಂದ್ರ ಸಚಿವ ಹೆಚ್​.ಡಿ.ಕೆ ಸಲಹೆ ಕೊಟ್ಟಿದ್ದಾರಂತೆ..

ಇನ್ನು, ಇಂಟ್ರೆಸ್ಟಿಂಗ್ ಏನಂದ್ರೆ ಸಭಾ ನಾಯಕರಾಗಿ ಸಿದ್ದರಾಮಯ್ಯ ಕಲಾಪದಲ್ಲಿ ಭಾಗವಹಿಸಿದ್ರೆ ಪುತ್ರ ಡಾ.ಯತೀಂದ್ರ ಸದಸ್ಯರಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತ ಮೇಲ್ಮನೆಯಲ್ಲಿ ಪೂಜಾರಿ ಲೋಕಸಭೆ ಪ್ರವೇಶದಿಂದ ಖಾಲಿಯಿರುವ ವಿಪಕ್ಷ ನಾಯಕ ಯಾರು ಅನ್ನೋ ತೀರ್ಮಾನ ಆಗಬೇಕಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿವೇಶನದಲ್ಲಿ ಕಾಡಲಿದೆ 4 ಮಾಜಿ ಸಿಎಂಗಳ ಅನುಪಸ್ಥಿತಿ.. BSY, HDK ಸ್ಥಾನ ತುಂಬುತ್ತಾರಾ ಅಶೋಕ್, ವಿಜಯೇಂದ್ರ?

https://newsfirstlive.com/wp-content/uploads/2024/07/SIDDARAMAIH_ASHOK_VIJAYENDRA.jpg

Load More