/newsfirstlive-kannada/media/post_attachments/wp-content/uploads/2023/07/Siddaramaiah_Session.jpg)
ಇಂದಿನಿಂದ 9 ದಿನಗಳ ಕಾಲ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಡೆಯಲಿದೆ. ಈ ಬಾರಿಯ ಅಧಿವೇಶನ ಕೇವಲ ಕಲಾಪವಾಗಿರುವುದಿಲ್ಲ. ಬದಲಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಗ್ಯುದ್ಧ, ಮಾತಿನ ಚಕಮಕಿ, ಪರಸ್ಪರ ವಾಗ್ಬಾಣಗಳ ಪ್ರಯೋಗಕ್ಕೆ ವೇದಿಕೆಯಾಗಲಿದೆ.
ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳಿಗೆ ಹಗರಣಗಳೇ ಬ್ರಹ್ಮಾಸ್ತ್ರ
ಮೈತ್ರಿ ಬತ್ತಳಿಕೆಯಲ್ಲಿ ವಾಲ್ಮೀಕಿ, ಮುಡಾ ಹಗರಣ ಸೇರಿ ಹಲವು ಅಸ್ತ್ರ
ವಾಲ್ಮೀಕಿ ಬಹುಕೋಟಿ ಹಗರಣ, ಮುಡಾ ಅವ್ಯವಹಾರ, ಹೆಚ್ಚುತ್ತಿರುವ ಡೆಂಘೀ ಪ್ರಕರಣ. ಹೀಗೆ ಹಲವು ಅಸ್ತ್ರಗಳನ್ನು ಕೇಸರಿ ಹಾಗೂ ದಳ ಪಾಳಯ ತಮ್ಮ ಬತ್ತಳಿಕೆಯಲ್ಲಿ ಸಿದ್ಧ ಮಾಡಿಟ್ಟು ಕೊಂಡಿವೆ.
ಇಂದಿನಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು ಕಾಂಗ್ರೆಸ್​ ಸರ್ಕಾರದ ಮೇಲೆ ಪ್ರಯೋಗಿಸಲು ಸಜ್ಜಾಗಿವೆ. ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದ ಹೊರಗೆ ಒಂದಾಗಿ ಹೋರಾಟ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಸದನದ ಒಳಗೂ ಒಂದಾಗಲಿವೆ.
/newsfirstlive-kannada/media/post_attachments/wp-content/uploads/2023/07/Karnataka-Session.jpg)
ವಿಪಕ್ಷಗಳ ಅಸ್ತ್ರಗಳು!
ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ, ಜೆಡಿಎಸ್‌ಗೆ ಮುಡಾ ಅಕ್ರಮ ಅಸ್ತ್ರ
ಸಿದ್ದರಾಮಯ್ಯ ವಿರುದ್ಧ ಸದನದಲ್ಲಿ ವಿಚಾರ ಪ್ರಸ್ತಾಪಿಸಿ ಸರ್ಕಾರಕ್ಕೆ ತರಾಟೆ
ವಾಲ್ಮೀಕಿ ಬಹುಕೋಟಿ ಹಗರಣ ವಿಪಕ್ಷಗಳಿಗೆ ಸಿಕ್ಕಿರುವ ಮತ್ತೊಂದು ಅಸ್ತ್ರ
ನಾಗೇಂದ್ರ ರಾಜೀನಾಮೆ ನೀಡಿ ಇ.ಡಿ ವಶಕ್ಕೆ, ದದ್ದಲ್​ಗೂ ಬಂಧನ ಭೀತಿ
ಆದರೆ ಸಿಎಂ ರಾಜೀನಾಮೆ, ಕೇಸ್​ನ್ನ ಸಿಬಿಐಗೆ ನೀಡಬೇಕೆಂದು ಒತ್ತಾಯ
ಬರ ಹಾಗೂ ಬೆಳೆ ಹಾನಿಯಿಂದ 14 ತಿಂಗಳಲ್ಲಿ 1,182 ರೈತರು ಆತ್ಮಹತ್ಯೆ
ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪದ ಗ್ಯಾರಂಟಿ ಯೋಜನೆಗಳು
ಗ್ಯಾರಂಟಿ ನೆಪದಲ್ಲಿ ಅಭಿವೃದ್ದಿ ಯೋಜನೆಗಳಿಗೆ ಆದ್ಯತೆ ನೀಡದ ಸರ್ಕಾರ
ಗ್ಯಾರಂಟಿಗೆ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿಟ್ಟ ಹಣ ಬಳಸಿದ್ದಕ್ಕೆ ಪ್ರಶ್ನೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೂ ಹದಗೆಡುತ್ತಿದೆ ಅಂತ ವಾಗ್ದಾಳಿ
ಡೆಂಘೀ, ಬೆಲೆ ಏರಿಕೆ, 7ನೇ ವೇತನ ಆಯೋಗ ವರದಿ ಶಿಫಾರಸು ಜಾರಿ ವಿಳಂಬ
ಹಲವು ಅಸ್ತ್ರ ಮುಂದಿಟ್ಟುಕೊಂಡು ಸರ್ಕಾರಕ್ಕೆ ಚಾಟಿ ಬೀಸಲು ಮೈತ್ರಿ ಪಡೆ ಸಿದ್ಧ
ಕೇವಲ ವಿಪಕ್ಷಗಳ ಬಳಿ ಮಾತ್ರ ಅಸ್ತ್ರಗಳಿಲ್ಲ. ಇತ್ತ ಆಡಳಿತ ಪಕ್ಷದ ಬತ್ತಳಿಕೆಯಲ್ಲೂ ಪ್ರತ್ಯಾಸ್ತ್ರಗಳಿವೆ. ಬಿಜೆಪಿ ಆಡಳಿತಾವಧಿಯಲ್ಲಿನ ಲೋಪ-ದೋಷ ಮುಂದಿಟ್ಟು ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಿಕೊಂಡಿದೆ. ಅಲ್ಲದೆ ಚರ್ಚೆಗೆ ಸಮರ್ಪಕ ಉತ್ತರ ನೀಡಲು ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಮಾಹಿತಿ ಒದಗಿಸಬೇಕೆಂದು ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಮಾಡಿ ನಿರ್ದೇಶನ ನೀಡಿದ್ದಾರೆ.
ಬೀಸೋ ದೊಣ್ಣೆಯಿಂದ ಪಾರಾಗಲು ತನಿಖೆಗೆ ಆದೇಶ
ಅಧಿವೇಶನ ಆರಂಭಕ್ಕೂ ಹಿಂದಿನ ದಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಮುಡಾ ಪ್ರಕರಣದಲ್ಲಿ ಬೀಸೋ ದೊಣ್ಣೆಯಿಂದ ಪಾರಾಗೋ ತಂತ್ರ ಹೆಣೆದಿದೆ. ಮುಡಾ ಪ್ರಕರಣ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್​​ ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿ ಆದೇಶಿಸಿದೆ. ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜು ಅವರೇ ಆದೇಶ ಹೊರಡಿಸಿದ್ದಾರೆ. ಜತೆಗೆ ಮುಂದಿನ 6 ತಿಂಗಳ ಒಳಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಇಲ್ಲಿ ಇಂಟ್ರೆಸ್ಟಿಂಗ್ ಏನಂದ್ರೆ ಸಭಾ ನಾಯಕರಾಗಿ ಸಿದ್ದರಾಮಯ್ಯ ಕಲಾಪದಲ್ಲಿ ಭಾಗವಹಿಸಿದ್ರೆ ಪುತ್ರ ಡಾ.ಯತೀಂದ್ರ ಸದಸ್ಯರಾಗಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಸಮನ್ವಯ ಸಮಿತಿ ಸಭೆ ನಡೆಸಿದ ಪ್ರತಿಪಕ್ಷಗಳ ಉಭಯ ನಾಯಕರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ವಿಪಕ್ಷವಾಗಿ ಪ್ರಸ್ತಾಪಿಸಬೇಕಿರುವ ಎಲ್ಲಾ ವಿಷಯ ಪ್ರಸ್ತಾಪಿಸಿದ ಬಳಿಕವೇ ಪ್ರತಿಭಟನೆಗೆ ನಿರ್ಧರಿಸಿದೆ. ಅಲ್ಲದೆ ಸದನದಲ್ಲಿ ಮುಡಾ ಅಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕೆಂಬ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಸಲಹೆ ಕೊಟ್ಟಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us