newsfirstkannada.com

ಇಂದು ರಾಜ್ಯದ 14 ಕ್ಷೇತ್ರಗಳಿಗೆ ವೋಟಿಂಗ್​​; ಎಲ್ಲೆಲ್ಲಿ? ಅಭ್ಯರ್ಥಿಗಳು ಯಾರು?

Share :

Published April 26, 2024 at 5:54am

Update April 26, 2024 at 6:44am

    ಅಬ್ಬರದ ಪ್ರಚಾರ, ರಣತಂತ್ರಕ್ಕೆ ಇಂದು ಮತದಾರ ತೀರ್ಪು

    ಇಂದು ರಾಜ್ಯದ 14 ಲೋಕ ಕ್ಷೇತ್ರಗಳಲ್ಲಿ ಮತದಾನ ಹಬ್ಬ!

    ಯಾವ್ಯಾವ ಕ್ಷೇತ್ರದಲ್ಲಿ ಮತದಾನ, ಅಭ್ಯರ್ಥಿಗಳು ಯಾರು?

ಬೆಂಗಳೂರು: ಅಬ್ಬರದ ಪ್ರಚಾರ, ಟೀಕಾಸ್ತ್ರ, ಬಗೆಬಗೆಯ ರಣತಂತ್ರ, ಮಾತಿನ ಮಂತ್ರ. ಎಲ್ಲವೂ ಈಗಾಗಲೇ ಮುಗಿದು ಹೋಗಿದೆ. ರಣಕಣದಲ್ಲಿ ಕಂಡ ಈ ಎಲ್ಲಾ ಆಟಕ್ಕೆ ಇಂದು ಮತದಾರ ತೀರ್ಪು ಕೊಡೋ ದಿನ. ಕಳೆದ ಬಾರಿಯಂತೆ ಈ ಬಾರಿ ಎರಡು ಹಂತದಲ್ಲಿ ಚುನಾವಣೆ. ಇಂದು 14 ಕ್ಷೇತ್ರಗಳಲ್ಲಿ ಮತದಾನ. ಇವಿಎಂ ಮಷೀನ್‌ಗಳಲ್ಲಿ ಮತದಾರ ಕೊಟ್ಟ ತೀರ್ಪು ಭದ್ರವಾಗೋ ದಿನ. ಅಖಾಡದಲ್ಲಿ ಪ್ರಭಾವ ಬೀರಿದ ಆಟಗಳಿಗೆ ಮತದಾರ ತೀರ್ಪಿನ ಮುದ್ರೆ ಒತ್ತುತ್ತಿದ್ದು ಯಾವ ಅಖಾಡದಲ್ಲಿ ಯಾಱರು ಎದುರಾಳಿ? ಎಂದು ಒಮ್ಮೆ ಓದಿ.

ಇದು ಯುದ್ಧ.. ಪ್ರಜಾಪ್ರಭುತ್ವದ ಯುದ್ಧ.. ಲೋಕಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತಹಬ್ಬ.. ರಾಜ್ಯದ 14 ಕ್ಷೇತ್ರಗಳಲ್ಲಿ ಕದನ ಕಲಿಗಳು ಅಬ್ಬರಿಸಿ ಬೊಬ್ಬರಿದಿದ್ದು ಮುಗಿದಿದೆ.. ಇನ್ನೇನಿದ್ರು ಇವಿಎಂ ಯಂತ್ರದಲ್ಲಿ ಬಟನ್ ಹೊತ್ತುವ ಮೂಲಕ ಮತಹಕ್ಕು ಚಲಾವಣೆ ಬಾಕಿ ಇದೆ.. ಮೊದಲ ಹಂತದ ಕ್ಷೇತ್ರಗಳಲ್ಲಿ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇಂದು ಮತದಾನ.. ಬಹಿರಂಗ ಪ್ರಚಾರಕ್ಕೂ ತೆರೆ ಬಿದ್ದಾಗಿದೆ.. ಶೂನ್ಯ ಅವಧಿ ಘೋಷಿಸಲಾಗಿದ್ದು ಮನೆಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶ ಇದೆ. ಬೆಂಗಳೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.. ಮತದಾನ ಹಬ್ಬಕ್ಕೆ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, 2.88 ಕೋಟಿ ಮತದಾರರು 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಯಾವ್ಯಾವ ಕ್ಷೇತ್ರದಲ್ಲಿ ಮತದಾನ? ಅಭ್ಯರ್ಥಿಗಳು ಯಾರು?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಗಡೆ ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ ಪೂಜಾರಿ ಕಣದಲ್ಲಿದ್ದಾರೆ. ಇನ್ನು ಹಾಸನದಲ್ಲಿ ಕಾಂಗ್ರೆಸ್​​ನಿಂದ ಶ್ರೇಯಸ್ ಪಟೇಲ್ ಸ್ಪರ್ಧಿಸಿದ್ದು, ಎದುರಾಳಿಯಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಹಾಗೂ ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಸ್ಪರ್ಧೆ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್​ನಿಂದ ಬಿ.ಎನ್.ಚಂದ್ರಪ್ಪ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಗೋವಿಂದ ಕಾರಜೋಳ ಸ್ಪರ್ಧೆ ಮಾಡಿದ್ದಾರೆ. ಇನ್ನು ತುಮಕೂರು ಕ್ಷೇತ್ರದಲ್ಲಿ ಕೈ ಕಲಿಯಾಗಿ ಮುದ್ದಹನುಮೇಗೌಡ ಕಣದಲ್ಲಿದ್ದರೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಇತ್ತ ಜಿದ್ದಾಜಿದ್ದಿನ ಕ್ಷೇತ್ರ ಮಂಡ್ಯದಲ್ಲಿ ಕಾಂಗ್ರೆಸ್​ನಿಂದ ಉದ್ಯಮಿ ವೆಂಕಟರಮಣೇಗೌಡ ಕಣಕ್ಕಿಳಿದಿದ್ರೆ ಎದುರಾಳಿಯಾಗಿ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್​ನಿಂದ ಎಂ.ಲಕ್ಷ್ಮಣ್​ ಸ್ಪರ್ಧೆ ಮಾಡಿದ್ದು ಮೈತ್ರಿ ಅಭ್ಯರ್ಥಿಯಾಗಿ ಮಹಾರಾಜ ಯದುವೀರ್ ಒಡೆಯರ್ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಚಾಮರಾಜನಗರದಲ್ಲಿ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಕಾಂಗ್ರೆಸ್​ನ ಹುರಿಯಾಳಾಗಿದ್ದರೆ ಬಿಜೆಪಿಯಿಂದ ಎಸ್​.ಬಾಲರಾಜು ಕಣದಲ್ಲಿದ್ದಾರೆ. ಮತ್ತೊಂದು ಜಿದ್ದಾಜಿದ್ದಿನ ಕ್ಷೇತ್ರ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಕಣದಲ್ಲಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಸ್ಪರ್ಧಿಸಿದ್ದು ಬಿಜೆಪಿಯಿಂದ ತೇಜಸ್ವಿ ಸೂರ್ಯ ಸ್ಪರ್ಧಿಸಿದ್ದಾರೆ. ಇನ್ನು ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ,  ಕಾಂಗ್ರೆಸ್​​ನಿಂದ ಪ್ರೋ.ರಾಜೀವ್ ಗೌಡ ನಿಂತಿದ್ದಾರೆ. ಅದೇ ರೀತಿ ಬೆಂಗಳೂರು ಸೆಂಟ್ರಲ್​​ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಮನ್ಸೂರ್ ಅಲಿಖಾನ್ ಸ್ಪರ್ಧಿಸಿದ್ದು ಬಿಜೆಪಿಯಿಂದ ಪಿ.ಸಿ.ಮೋಹನ್ ಕಣದಲ್ಲಿದ್ದಾರೆ. ಅತ್ತ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ರಕ್ಷಾರಾಮಯ್ಯ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ಪರ್ಧಿಸಿದ್ದಾರೆ.. ಇನ್ನು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್ ಸ್ಪರ್ಧೆ ಮಾಡಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬು ಸ್ಪರ್ಧಿಸಿದ್ದಾರೆ.

ಒಟ್ಟಾರೆ, ಪ್ರಜಾಪ್ರಭುತ್ವದ ಯುದ್ಧದ ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳ ಕದನಕಲಿಗಳ ನಡುವೆ ಪೈಪೋಟಿ ರಣರೋಚಕವಾಗಿದೆ. ಒಂದ್ಕಡೆ 14 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ರೆ ಮತ್ತೊಂದೆಡೆ ದೋಸ್ತಿಗಳಾದ ಬಿಜೆಪಿ 11 ಕ್ಷೇತ್ರಗಳಲ್ಲಿ ಜೆಡಿಎಸ್​ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಂದು ಮತದಾನ ನಡೆಯಲಿದ್ದು ಮತದಾರರು ಯಾರ ಪರ ತೀರ್ಪು ಬರೆಯಲಿದ್ದಾರೆ ಅನ್ನೋ ಕೌತುಕ ಜೂನ್ 4ರಂದು ಬಯಲಾಗಲಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಆಪ್ತನಿಗೆ IT ಶಾಕ್; ಕೋಟಿ, ಕೋಟಿ ಹಣ ಪತ್ತೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ರಾಜ್ಯದ 14 ಕ್ಷೇತ್ರಗಳಿಗೆ ವೋಟಿಂಗ್​​; ಎಲ್ಲೆಲ್ಲಿ? ಅಭ್ಯರ್ಥಿಗಳು ಯಾರು?

https://newsfirstlive.com/wp-content/uploads/2024/03/VOTING-1.jpg

Load More