newsfirstkannada.com

ಗಂಡನ ಹಠಾತ್‌ ಸಾವು.. ಮನೆಯಲ್ಲಿ ಮೃತದೇಹ ಇದ್ರೂ ಮತದಾನ ಮಾಡಿ ಮಾದರಿಯಾದ ಕುಟುಂಬ

Share :

Published May 7, 2024 at 3:28pm

Update May 7, 2024 at 3:45pm

  ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಹೃದಯ ವಿದ್ರಾವಕ ಘಟನೆ

  ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮೃತ ನಾಗಪ್ಪ ಕಾಳಂಗಿಗೆ ಹೃದಯಾಘಾತ

  ದುಃಖದ ಮಡುವಿನಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಕುಟುಂಬಸ್ಥರು

ಹಾವೇರಿ: ಮನೆ ಯಜಮಾನನ ಸಾವಿನ ನಡುವೆಯು ಕುಟುಂಬಸ್ಥರು ದುಃಖದಲ್ಲೇ ತಮ್ಮ ಮತದಾನದ ಹಕ್ಕು ಚಲಾಯಿಸಿ ಬೇರೆಯವರಿಗೆ ಮಾದರಿಯಾಗಿದ್ದಾರೆ. ಈ ಘಟನೆ ನಡೆದಿದ್ದು ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಗಂಡ ಸಾವು.. ಸುದ್ದಿ ಗೊತ್ತಾದ್ರೂ ವೋಟ್ ಮಾಡಿದ ಮಹಿಳೆ; ಕಾರಣ ಇದೆ

ಮನೆಯಲ್ಲಿ ಗಂಡನ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಮತಗಟ್ಟೆ ಬಂದು ಮತದಾನ ಮಾಡಿದ್ದಾರೆ. ನಿನ್ನೆ ಸಂಜೆ ಗ್ರಾಮದ ವಾಟರ್ ಮ್ಯಾನ್‌ ನಾಗಪ್ಪ ಕಾಳಂಗಿ ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದರು. ಆದರೆ ಅಂತ್ಯ ಶವ ಸಂಸ್ಕಾರವೂ ಕೂಡ ಮಾಡದೇ ಮೃತನ ಪತ್ನಿ ಚಿನ್ನವ್ವ, ಮಗ ಮಾಲತೇಶ, ಮಗಳು ಜ್ಯೋತಿ ಮತದಾನ ಮಾಡಿದ್ದಾರೆ.

ದುಃಖದ ಮಡುವಿನಲ್ಲಿ ಇದ್ದರು ಒಂದೊಂದು ಮತ ಕೂಡ ಬಹಳ ಮುಖ್ಯ ಎಂದು ಕುಟುಂಬಸ್ಥರು ಗ್ರಾಮದ ಪ್ರಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ದುಃಖತಪ್ತ ಕುಟುಂಬಸ್ಥರು ಬಳಿಕ ಗ್ರಾಮದ ಜನರಿಗೆ ಮತ ಚಲಾಯಿಸುವಂತೆ ಸಂದೇಶ ಸಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನ ಹಠಾತ್‌ ಸಾವು.. ಮನೆಯಲ್ಲಿ ಮೃತದೇಹ ಇದ್ರೂ ಮತದಾನ ಮಾಡಿ ಮಾದರಿಯಾದ ಕುಟುಂಬ

https://newsfirstlive.com/wp-content/uploads/2024/05/hasana1.jpg

Load More