newsfirstkannada.com

KarnatakaElections: ಮತ ಚಲಾಯಿಸಿದ ಬಿಗ್​ಬಾಸ್​ ಬೆಡಗಿಯರು; ಫ್ಯಾನ್ಸ್‌ಗೆ ಹೇಳಿದ್ದೇನು?

Share :

Published April 26, 2024 at 5:16pm

Update April 26, 2024 at 5:36pm

  ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ಬಿರುಸು

  ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದ ಕನ್ನಡದ ಬಿಗ್​ಬಾಸ್​ ಸ್ಪರ್ಧಿಗಳು

  ನಮ್ರತಾ ಗೌಡ, ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ!

ಇಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ಮಾಡಲು ಕಾಲಾವಕಾಶ ಇದೆ. ಮತದಾನಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇದ್ದು, ಎಲ್ಲರೂ ತಪ್ಪದೇ ಮತ ಮಾಡುವಂತೆ ಮನವಿ ಮಾಡಲಾಗಿದೆ.

ಮತದಾನದ ಹಿನ್ನೆಲೆಯಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಬೆಳಗ್ಗೆಯೇ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡುತ್ತಿದ್ದಾರೆ. ಇದೀಗ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸ್ಪರ್ಧಿಗಳು ಕೂಡ ಮತಗಟ್ಟೆಗೆ ಬಂದು ತಮ್ಮ ಮತವನ್ನು ಹಾಕಿದ್ದಾರೆ.

ಇದನ್ನೂ ಓದಿ: ಮತದಾನ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕೌಸ್ತುಭ; ನನ್ನರಸಿ ರಾಧೆ ವರಿಸಿದ ಹುಡುಗ ಯಾರು?

ನಟಿ ನಮ್ರತಾ ಗೌಡ, ಕವಿತಾ ಗೌಡ, ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ, ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ಚಂದನ್​ ಶೆಟ್ಟಿ, ನಟ ಸೃಜನ್​ ಲೋಕೇಶ್​, ನಟಿ ಹರ್ಷಿಕಾ ಪೂಣಚ್ಚ, ಶುಭ ಪೂಂಜಾ, ಕನ್ನಡತಿ ಸೀರಿಯಲ್ ನಟಿ ರಂಜನಿ ರಾಘವನ್, ನಿವೇದಿತಾ ಗೌಡ, ಶ್ವೇತಾ ಚೆಂಗಪ್ಪ, ಚಂದನ್​ ಗೌಡ ಅವರು ವೋಟ್​ ಮಾಡಿದ್ದಾರೆ.

ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನ ಮಾಡಿದ ಬಳಿಕ ನಟ ಹಾಗೂ ನಟಿಯರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ನೀವು ಹೋಗಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ವಿಡಿಯೋ ಮಾಡುವ ಮೂಲಕ ಮತದಾನ ಎಷ್ಟು ಉಪಯುಕ್ತ ಎಂದು ತಿಳಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

KarnatakaElections: ಮತ ಚಲಾಯಿಸಿದ ಬಿಗ್​ಬಾಸ್​ ಬೆಡಗಿಯರು; ಫ್ಯಾನ್ಸ್‌ಗೆ ಹೇಳಿದ್ದೇನು?

https://newsfirstlive.com/wp-content/uploads/2024/04/bigg-boss-vote.jpg

Load More