/newsfirstlive-kannada/media/post_attachments/wp-content/uploads/2024/11/JOB_COAL_INDIA_1.jpg)
ಕರ್ನಾಟಕದ ಲೋಕಾಯುಕ್ತ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದಲ್ಲಿ ಗ್ರೂಪ್-ಸಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸಂಬಂಧ ಇಲಾಖೆಯು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಕರ್ನಾಟಕದ ಲೋಕಾಯುಕ್ತ ಇಲಾಖೆಯ ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ಅಪ್ಲೇ ಮಾಡಬಹುದು.
ಈ ಎಲ್ಲ ಅರ್ಜಿಗಳು ಆನ್​ಲೈನ್ ಮೂಲಕ ಸಲ್ಲಿಸಬೇಕಾಗಿದ್ದು ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಇಲಾಖೆ ಗಣನೆಗೆ ತೆಗೆದುಕೊಳ್ಳಲ್ಲ ಎಂದು ತಿಳಿಸಿದೆ. ಇನ್ನು ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹುದ್ದೆ ಹೆಸರು ಏನು, ನೇಮಕಾತಿ ಪ್ರಕ್ರಿಯೆ ಏನೆಂಬುದು ಇಲ್ಲಿ ನೀಡಲಾಗಿದೆ.
ಹುದ್ದೆಯ ಹೆಸರು- ಕ್ಲರ್ಕ್​ ಕಮ್ ಟೈಪಿಸ್ಟ್​
ವೇತನ ಶ್ರೇಣಿ- ₹34,100 ರಿಂದ ₹67.600
ಶೈಕ್ಷಣಿಕೆ ವಿದ್ಯಾರ್ಹತೆ
ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಪಾಸ್ ಆಗಿರಬೇಕು
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. (ಅಂಕಪಟ್ಟಿ ಹೊಂದಿರಲೇಬೇಕು)
ನೇಮಕಾತಿ ಪ್ರಕ್ರಿಯೆ ಹೇಗಿದೆ..?
ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಪರಿಗಣಿಸಿ ಮೀಸಲಾತಿ ಆಧಾರದಲ್ಲಿ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ತಯಾರಿಸಲಾಗುತ್ತದೆ. ಪಟ್ಟಿಯಲ್ಲಿರುವ ಹೆಸರು ಪಡೆದವರಿಗೆ ಇಲಾಖೆ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಕನಿಷ್ಠ ಶೇ50 ರಷ್ಟು ಅಂಕಗಳನ್ನು ಅಭ್ಯರ್ಥಿಗಳು ಪಡೆಯಲೇಬೇಕು.
ಇದನ್ನೂ ಓದಿ: ಕೋಲ್ ಇಂಡಿಯಾದಲ್ಲಿ 600ಕ್ಕೂ ಅಧಿಕ ಹೊಸ ಹುದ್ದೆಗಳ ನೇಮಕಾತಿ.. ಈ ಕೋರ್ಸ್​ ಮಾಡಿದವ್ರಿಗೆ ಅವಕಾಶ
/newsfirstlive-kannada/media/post_attachments/wp-content/uploads/2024/11/JOBS_POST_JOB.jpg)
ಅರ್ಜಿ ಶುಲ್ಕ
- ಸಾಮಾನ್ಯ ಅರ್ಹತೆ, 2ಎ, 2ಬಿ, 3ಎ, 3ಬಿ, ಮಾಜಿ ಸೈನಿಕ- 250 ರೂ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನರು- ಶುಲ್ಕ ವಿನಾಯಿತಿ
- ಆನ್​ಲೈನ್​ ಮೂಲಕ ಶುಲ್ಕ ಪಾವತಿ ಮಾಡಬೇಕು
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 29 ನವೆಂಬರ್ 2024
ಶುಲ್ಕ ಪಾವತಿಗೆ ಕೊನೆ ದಿನಾಂಕ- 30 ನವೆಂಬರ್ 2024
ವಯೋಮಿತಿ- 18 ರಿಂದ 43 ವರ್ಷದ ಒಳಗಿನವರಿಗೆ ಅವಕಾಶ
ಒಟ್ಟು ಹುದ್ದೆಗಳು- 16 ಇವೆ
ಇಲಾಖೆಯ ವೆಬ್​ಸೈಟ್- http://lokayukta.kar.nic.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us