/newsfirstlive-kannada/media/post_attachments/wp-content/uploads/2024/09/CM_SIDDARAMAIAH_MUDA.jpg)
ಮುಡಾ 50:50 ಹಗರಣದ ಪ್ರಕರಣದಲ್ಲಿ ಸದ್ಯ ಬಹುದೊಡ್ಡ ತಿರುವು ಉಂಟಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದ್ದು ನವೆಂಬರ್ 6 ರಂದು ಲೋಕಾಯುಕ್ತದ ಎದುರು ಹಾಜರಾಗುವಂತೆ ಸೂಚನೆ ನೀಡಿದೆ.
ಗುರುವಾರ ಅಂದ್ರೆ ನವೆಂಬರ್ 6 ರಂದು ಬೆಳಗ್ಗೆ 10.30ಕ್ಕೆ ಲೋಕಾಯುಕ್ತದ ಎದುರು ಹಾಜರಾಗುವಂತೆ ಲೋಕಾಯುಕ್ತ ಎಸ್​ಪಿ ಟಿ.ಜೆ.ಉಮೇಶ್ ಅವರಿಂದ ನೋಟಿಸ್ ಜಾರಿಯಾಗಿದೆ. ಈಗಾಗಲೇ ಪ್ರಕರಣದಲ್ಲಿ A2, A3, A4 ವಿಚಾರಣೆ ನಡೆಸಲಾಗಿದೆ. ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ವಿಚಾರಣೆಯನ್ನು ಲೋಕಾಯುಕ್ತ ಮುಕ್ತಾಯಗೊಳಿಸಿದೆ. ಇನ್ನು ಎ3 ಹಗೂ ಎ4 ಆರೋಪಿಗಳನ್ನು ಒಟ್ಟಿಗೆ ಕರೆಸಿದ್ದ ಲೋಕಾಯಕ್ತ ಅಧಿಕಾರಿಗಳು ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಸಿದ್ದರಾಮಯ್ಯನವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಎ3 ಆಗಿದ್ದರೆ ಭೂಮಿ ಮಾರಿದ ದೇವರಾಜು ಎ4 ಆಗಿದ್ದರು.
ಸದ್ಯ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ಇಲಾಖೆ ನೋಟಿಸ್ ನೀಡಿದೆ. ಖುದ್ದು ಲೋಕಾಯುಕ್ತದ ಎದುರು ಹಾಜರಾಗುವಂತೆ ನೋಟಿಸ್​ನಲ್ಲಿ ಉಲ್ಲೇಖವಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us