newsfirstkannada.com

ರಾಜ್ಯ ಗೆಲುವಿಗಾಗಿ ಕಾಂಗ್ರೆಸ್​​ ರಣತಂತ್ರ.. ಪ್ರಚಾರಕ್ಕೆ ದೆಹಲಿಯಿಂದ ಯಾರೆಲ್ಲಾ ಬರ್ತಾರೆ ಗೊತ್ತಾ?

Share :

Published April 9, 2024 at 7:31am

Update April 9, 2024 at 8:05am

  ಪ್ರಚಾರಕ್ಕೆ ರಾಹುಲ್, ಪ್ರಿಯಾಂಕಾ ಗಾಂಧಿ ಕರೆಸಲು ಪ್ಲಾನ್

  ಹಳೇ ಮೈಸೂರು, ಉ.ಕ ಭಾಗದ ಕೆಲ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತಯಾರಿ

  ಬೆಂಗಳೂರು, ಮೈಸೂರು, ಹಾಸನ ಭಾಗದಲ್ಲಿ ಪ್ರಚಾರ ನಡೆಸಲು ತಂತ್ರ

ರಾಜ್ಯದಲ್ಲಿ ಲೋಕ ಸಭಾ ಕದನ ಕಣ ಮತ್ತಷ್ಟು ರಂಗೇರುತ್ತಿದೆ. ಬಿರು ಬಿಸಿಲಿನಂತೆ ಚುನಾವಣಾ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ. ಅಭ್ಯರ್ಥಿಗಳನ್ನ ಗೆಲ್ಲಿಸಲು ಘಟಾನುಘಟಿ ನಾಯಕರೇ ಅಖಾಡಕ್ಕೆ ಇಳಿದು ಅಬ್ಬರಿಸುತ್ತಿದ್ದಾರೆ. ಇದೀಗ ಪ್ರಚಾರ ಕಣಕ್ಕೆ ಗಾಂಧಿ ಕುಟುಂಬದ ಘಟಾನುಘಟಿಗಳನ್ನ ಇಳಿಸಲು ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಗೆಲುವಿನ ಗಾಳಿಪಟವನ್ನ ಹಾರಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಪ್ರಜಾಪ್ರಭುತ್ವ ಯುದ್ಧದ ಎಲ್ಲಾ ಪಕ್ಶಗಳ ಸೇನಾನಿಗಳದ್ದು ಒಂದೇ ಧ್ಯೇಯ. ಒಂದೇ ಗುರಿ. ಅದುವೇ ಚುನಾವಣಾ ಗೆಲುವು. ಈ ಗೆಲುವಿಗಾಗಿ ಮಾಡದ ತಂತ್ರವಿಲ್ಲ. ಹಾಕದ ಪಟ್ಟುಗಳಿಲ್ಲ. ಇದೀಗ ಲೋಕ ಕದನದಲ್ಲಿ ದೋಸ್ತಿಗಳ ದರ್ಬಾರ್‌ಗೆ ಬ್ರೇಕ್‌ ಹಾಕೋಕೆ ಕಾಂಗ್ರೆಸ್ ಪಡೆ ಸಜ್ಜಾಗಿದೆ. ಬಿಜೆಪಿಯ ಘಟಾನುಘಟಿ ನಾಯಕರಾದ ಮೋದಿ, ಅಮಿತ್‌ ಶಾ ಪ್ರಚಾರಕ್ಕೆ ಟಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಸೀಟ್​ಗಳನ್ನ ಗೆಲ್ಲಲು ಕಾಂಗ್ರೆಸ್ ತಂತ್ರ

ರಾಜ್ಯದಲ್ಲಿ ಹೆಚ್ಚು ಸೀಟ್​ಗಳನ್ನ ಗೆಲ್ಲಲು ಕಾಂಗ್ರೆಸ್ ಗಾಂಧಿ ಕುಟುಂಬದ ಮೊರೆ ಹೋದಂತೆ ಕಾಣ್ತಿದೆ. ಈ ನಿಟ್ಟಿನಲ್ಲಿ ಕರುನಾಡಲ್ಲಿ ಲೋಕ ಪ್ರಚಾರಕ್ಕೆ ಎಐಸಿಸಿ ನಾಯಕರಾ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆಸಲು ಪ್ಲಾನ್ ರೂಪಿಸಿದ್ದಾರೆ. ಕಳೆದ ಬಾರಿ ಭಾರತ್ ಜೋಡೋ ಯಾತ್ರೆ ಸಾಗಿದ್ದ ಕ್ಷೇತ್ರಗಳಲ್ಲಿ ಮತ್ತೆ ಪ್ರಚಾರ ನಡೆಸಲು ಬರುವಂತೆ ಆಹ್ವಾನವಿಟ್ಟಿದ್ದಾರೆ. ಈ ಮೂಲಕ ಇಬ್ಬರ ಪ್ರಚಾರದಿಂದ ಹೆಚ್ಚಿನ ಸ್ಥಾನ ಬರುತ್ತೆಂಬ ನಿರೀಕ್ಷೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿದ್ದಾರೆ.

ಇದನ್ನೂ ಓದಿ: 49 ಲಕ್ಷದ ಸೀರೆ, ಲಕ್ಷಾಂತರ ರೂಪಾಯಿ ಹಣ, ಲೀಟರ್​ಗಟ್ಟಲೆ ಮದ್ಯ.. ಚುನಾವಣೆ ಸಮಯದಲ್ಲಿ ಎಲ್ಲೆಲ್ಲಿ ಏನೇನು ಸಿಕ್ಕಿದೆ ಗೊತ್ತಾ?

ರಾಹುಲ್ ಹೆಜ್ಜೆ ಹಾಕಿದ್ದ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲು ತಯಾರಿ

ರಾಜ್ಯದಲ್ಲಿ ಪ್ರಚಾರಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕರೆಸಲು ಪ್ಲಾನ್ ಮಾಡಲಾಗಿದ್ದು, ಹಳೇ ಮೈಸೂರು, ಉತ್ತರ ಕರ್ನಾಟಕ ಭಾಗದ ಕೆಲ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತಯಾರಿ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಭಾಗದಲ್ಲಿ ಪ್ರಚಾರ ನಡೆಸಲು ತಂತ್ರ ರೂಪಿಸಲಾಗಿದ್ದು, ಸಾಧ್ಯವಾದರೆ ಮಂಡ್ಯದಲ್ಲೂ ರಾಹುಲ್, ಪ್ರಿಯಾಂಕಾ ಪ್ರಚಾರಕ್ಕೆ ಕೆಪಿಸಿಸಿ ಆಹ್ವಾನ ನೀಡಲು ಮುಂದಾಗಿದೆ. ಇನ್ನೂ ವಿಧಾನಸಭಾ ಚುನಾವಣೆ ವೇಳೆ ಭಾರತ್ ಜೋಡೋ ಯಾತ್ರೆ ಸಾಗಿರೋದ್ರಿಂದ ಕೈಗೆ ಪ್ಲಸ್ ಆಗಿತ್ತು. ಭಾರತ್ ಜೋಡೋ ಸಾಗಿದ್ದ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಿಕ್ಕಿತ್ತು. ಹೀಗಾಗಿ ಲೋಕಸಭಾ ಎಲೆಕ್ಷನ್ ಪ್ರಚಾರಕ್ಕೂ ರಾಹುಲ್, ಪ್ರಿಯಾಂಕಾಗೆ ಆಹ್ವಾನ ನೀಡಲು ಕೈ ನಾಯಕರು ಸಜ್ಜಾಗಿದ್ದಾರೆ. ರಾಹುಲ್ ಹೆಜ್ಜೆ ಹಾಕಿದ್ದ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲು ತಯಾರಿ ನಡೆಸಿದ್ದಾರೆ. ಇನ್ನೂ ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಪ್ರಚಾರಕ್ಕೆ ಬರೋದು ಅನುಮಾನವಾಗಿದ್ದು, ಸೋನಿಯಾ ಬದಲಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನ ಕರೆಸಲು ರಾಜ್ಯ ಕೈ ನಾಯಕರು ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ: ದಾರಿ ಸರಿಯಿಲ್ಲದ್ದಕ್ಕೆ ಬಾರದ ಆ್ಯಂಬುಲೆನ್ಸ್​.. ರಸ್ತೆಯಲ್ಲೇ ಮಗುವಿನ ಜನ್ಮ ನೀಡಿದ ಬುಡಕಟ್ಟು ಮಹಿಳೆ

ಒಟ್ಟಾರೆ, ಕರುನಾಡಲ್ಲಿ ಅಧಿಕಾರ ಹಿಡಿದಿರೋ ಕಾಂಗ್ರೆಸ್ 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿದೆ.. ಹೀಗೆ ದೋಸ್ತಿಗೆ ಸೆಡ್ಡು ಹೊಡೆದಿರೋ ರಾಜ್ಯ ನಾಯಕರ ಕೈಗೆ ಹೈಕಮಾಂಡ್ ನಾಯಕರು ಪ್ರಚಾರದ ಬಲ ತಂದುಕೊಡ್ತಾರಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ಗೆಲುವಿಗಾಗಿ ಕಾಂಗ್ರೆಸ್​​ ರಣತಂತ್ರ.. ಪ್ರಚಾರಕ್ಕೆ ದೆಹಲಿಯಿಂದ ಯಾರೆಲ್ಲಾ ಬರ್ತಾರೆ ಗೊತ್ತಾ?

https://newsfirstlive.com/wp-content/uploads/2024/01/SIDDU-DKS-1.jpg

Load More