/newsfirstlive-kannada/media/post_attachments/wp-content/uploads/2025/04/Lorry.jpg)
ಲಾರಿ ಮಾಲೀಕರ ಮುಷ್ಕರ ಇಂದಿನಿಂದ ಮತ್ತೊಂದು ಹಂತ ತಲುಪಲಿದೆ. ಡೀಸೆಲ್ ದರ ಇಳಿಕೆ, ಆರ್ಟಿಓ ಕಿರುಕುಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಹೋರಾಟದ ಹಾದಿ ಹಿಡಿದಿರೋ ಲಾರಿ ಮಾಲೀಕರು ಇಟ್ಟ ಹೆಜ್ಜೆ ಹಿಂದಿಡೋ ಲಕ್ಷಣ ಕಾಣಿಸ್ತಿಲ್ಲ. ಯಾಕಂದ್ರೆ ಖುದ್ದು ಮುಖ್ಯಮಂತ್ರಿಗಳೇ ನಡೆಸಿದ ಸಂಧಾನ ಸಕ್ಸಸ್ ಆಗ್ಲಿಲ್ಲ.
ಲಾರಿ ಮಾಲೀಕರ ಮುಷ್ಕರ ಮತ್ತಷ್ಟು ಉಗ್ರ!
ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಲಾರಿ ಮತ್ತು ಟ್ರಕ್ ಮಾಲೀಕ ಸಂಘಟನೆಗಳ ಜೊತೆ ಸಭೆ ನಡೀತು. ಆದ್ರೆ ಆ ಸಂಧಾನ ವಿಫಲವಾಯ್ತು. ಅವರ ಬೇಡಿಕೆಗಳಿಗೆ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಒಪ್ಪದಿರೋದೇ ಇದಕ್ಕೆ ಕಾರಣ.
ಇದನ್ನೂ ಓದಿ: ಜಾತಿ ಜಿದ್ದಾಜಿದ್ದಿ ನಡೀತಿರುವಾಗಲೇ ತೆಲಂಗಾಣದಲ್ಲಿ ಹೊಸ ಕ್ರಾಂತಿ; ಸಿಎಂ ರೇವಂತ್ ರೆಡ್ಡಿ ಪ್ಲಾನ್ ಏನು?
ಸಿಎಂ ಸಂಧಾನ ವಿಫಲ!
ಕಾವೇರಿ ನಿವಾಸದಲ್ಲಿ ಸಿಎಂ ಜೊತೆ ನಡೆದ ಚರ್ಚೆಯಲ್ಲಿ ಲಾರಿ ಮಾಲೀಕರು ತಮ್ಮ ಬೇಡಿಕೆಗಳನ್ನ ಮಂಡಿಸಿದ್ರು. ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡಿಸೇಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ ಅನ್ನೋ ಮೂಲಕ ಈ ಬೇಡಿಕೆ ಈಡೇರಿಸಲು ಕಷ್ಟ ಅಂತಾ ಸಿಎಂ ಮನವರಿಕೆ ಮಾಡೋದಕ್ಕೆ ಯತ್ನಿಸಿದ್ರು. ಪೀಕ್ ಅವರ್ನಲ್ಲಿ ಬೆಂಗಳೂರು ನಗರದೊಳಗೆ ಲಾರಿಗಳು ಪ್ರವೇಶಿಸಲು ಇರೋ ನಿರ್ಬಂಧ ತೆರವು ಮಾಡೋ ಬಗ್ಗೆ ಪರಿಶೀಲಿಸ್ತೀವಿ ಅಂತಾ ತಿಳಿಸಿದ್ರು. ಆದ್ರೆ ಲಾರಿ ಮಾಲೀಕರು ಇಟ್ಟ ಎಲ್ಲಾ ಡಿಮ್ಯಾಂಡ್ ಪೂರೈಸೋದಕ್ಕೆ ಸರ್ಕಾರ ಒಪ್ಪಿಲ್ಲ. ಇದ್ರಿಂದ ಸಿಡಿದೆದ್ದಿರೋ ಲಾರಿ ಮಾಲೀಕರು ಮುಷ್ಕರ ವಾಪಸ್ ಪಡೆಯದಿರಲು ನಿರ್ಧರಿಸಿದ್ದಾರೆ. ಮತ್ತಷ್ಟು ಉಗ್ರ ಹೋರಾಟ ಮಾಡೋದಾಗಿ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಲಾರಿ ಚಾಲಕರ 4 ಬೇಡಿಕೆಗೆ ಸರ್ಕಾರದ ಅಸ್ತು
ಲಾರಿ ಮಾಲೀಕರ ಬೇಡಿಕೆಗಳಲ್ಲಿ ನಾಲ್ಕನ್ನ ಈಡೇರಿಸೋದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಆದ್ರೆ, ಡೀಸೆಲ್ ದರವನ್ನು ಕಡಿಮೆಗೊಳಿಸೋದು ಹಾಗೂ ರಾಜ್ಯ ಹೆದ್ದಾರಿ ಟೋಲ್ ಪ್ಲಾಜಾ ರದ್ದುಗೊಳಿಸಬೇಕು ಅನ್ನೋ ಬೇಡಿಕೆಯನ್ನ ಒಪ್ಪಿಲ್ಲ.. ಇನ್ನೊಂದಷ್ಟಕ್ಕೆ ಕೇಂದ್ರ ಸರ್ಕಾರದತ್ತ ರಾಜ್ಯ ಸರ್ಕಾರ ಬೊಟ್ಟು ಮಾಡಿದೆ.
ಇಂದಿನಿಂದ ಲಾರಿ ಮಾಲೀಕರ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ತಿದೆ. ಈ ಹೋರಾಟ ನಿಲ್ಲದಿದ್ರೆ ಜನರ ನಿತ್ಯ ಜೀವನದ ಮೇಲೂ ಎಫೆಕ್ಟ್ ಆಗೋ ಸಾಧ್ಯತೆ ಇದೆ. ಒಟ್ನಲ್ಲಿ ಸರ್ಕಾರ ಮತ್ತು ಲಾರಿ ಮಾಲೀಕರ ನಡುವಿನ ಹಗ್ಗಜಗ್ಗಾಟದಲ್ಲಿ ಜನ ಬಡವಾಗದಿದ್ರೆ ಸಾಕು.
ಇದನ್ನೂ ಓದಿ: ಓಪನಿಂಗ್ ಮೊದಲ ದಿನವೇ ಮುದ್ದು ಸೊಸೆ ಸೀರಿಯಲ್ನಲ್ಲಿ ಮೆಗಾ ಟ್ವಿಸ್ಟ್; ಏನದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ