Advertisment

ಬೆಂಗಳೂರಲ್ಲಿ ಮಿನಿ ಒಲಿಂಪಿಕ್ಸ್; 24 ಕ್ರೀಡೆಗಳು, 4000 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗಿ

author-image
admin
Updated On
ಬೆಂಗಳೂರಲ್ಲಿ ಮಿನಿ ಒಲಿಂಪಿಕ್ಸ್; 24 ಕ್ರೀಡೆಗಳು, 4000 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗಿ
Advertisment
  • ಕಂಠೀರವ ಕ್ರೀಡಾಂಗಣದಲ್ಲಿ ಮಿನಿ ಒಲಿಂಪಿಕ್ಸ್​​ ಕ್ರೀಡಾಕೂಟ
  • ಅಥ್ಲೆಟಿಕ್ಸ್​, ಬ್ಯಾಡ್ಮಿಂಟನ್​, ಬಾಸ್ಕೆಟ್​ ಬಾಲ್​, ಫುಟ್ಬಾಲ್​, ಟೆನ್ನಿಸ್​
  • ವಾಲಿಬಾಲ್, ಬಾಕ್ಸಿಂಗ್​, ಫೆನ್ಸಿಂಗ್​, ಫುಟ್ಬಾಲ್​ ಸೇರಿ 24 ಕ್ರೀಡೆಗಳು

ಬೆಂಗಳೂರು: 3ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್​​ ಕ್ರೀಡಾಕೂಟ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ನಾಳೆ (ನವೆಂಬರ್ 14) ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಿನಿ ಒಲಿಂಪಿಕ್ಸ್​ ಕ್ರೀಡಾಕೂಟವನ್ನ ಉದ್ಘಾಟಿಸಲಿದ್ದಾರೆ.

Advertisment

publive-image

ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜನೆಯಾಗಲಿದೆ. ಭಾರತದಲ್ಲೇ ಪ್ರಪ್ರಥಮ ಬಾರಿ ನಡೆಯಲಿರೋ ಈ ಮಿನಿ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್​, ಬ್ಯಾಡ್ಮಿಂಟನ್​, ಬಾಸ್ಕೆಟ್​ ಬಾಲ್​, ಫುಟ್ಬಾಲ್​, ಟೆನ್ನಿಸ್​, ವಾಲಿಬಾಲ್, ಬಾಕ್ಸಿಂಗ್​, ಫೆನ್ಸಿಂಗ್​, ಫುಟ್ಬಾಲ್​, ಜಿಮ್ನಾಸ್ಟಿಕ್ಸ್​​, ಹ್ಯಾಂಡ್​ಬಾಲ್​, ಹಾಕಿ, ಜುಡೋ, ಖೋ-ಖೋ, ಕಬಡ್ಡಿ, ಲಾನ್​​ ಟೆನ್ನಿಸ್​, ನೆಟ್​ಬಾಲ್​, ಈಜು, ಟೇಬಲ್​ ಟೆನ್ನಿಸ್​, ಟೇಕ್ವಾಂಡೋ​ ಸೇರಿದಂತೆ ಒಟ್ಟು 24 ವಿವಿಧ ಕ್ರೀಡೆಗಳನ್ನ ಆಯೋಜಿಸಲಾಗಿದೆ. ಒಟ್ಟಾರೆ 4000ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

publive-image

ಈ ಕ್ರಿಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸ್ಕಾಲರ್​ ಶಿಪ್​ ಮತ್ತು ನಗದು ಬಹುಮಾನ ನೀಡಲಾಗುವುದು. ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಟ್ರ್ಯಾಕ್​ ಸೂಟ್​, ಕ್ಯಾಪ್​ಗಳನ್ನ ನೀಡಲಾಗುತ್ತದೆ.

ಕಂಠೀರವ ಒಳಾಂಗಣ, ಹೊರಾಂಗಣ ಕ್ರೀಡಾಂಗಣ ಮತ್ತು ವಿದ್ಯಾನಗರದಲ್ಲಿ ವಸತಿ, ಉತ್ತಮ ಹೋಟೆಲ್​ಗಳಲ್ಲಿ ಊಟೋಪಚಾರದ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಕರ್ನಾಟಕ ಒಲಿಂಪಿಕ್ಸ್​ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಒಲಿಂಪಿಕ್​​​ ಸಂಸ್ಥೆ ಅಧ್ಯಕ್ಷರಾದ ಡಾ.ಕೆ ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಡಿ.ರಣದೀಪ್​​ IAS, ಕರ್ನಾಟಕ ಒಲಿಂಪಿಕ್​​​ ಸಂಸ್ಥೆಯ ಕಾರ್ಯದರ್ಶಿ ಟಿ.ಅನಂತರಾಜು ಭಾಗವಹಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment