/newsfirstlive-kannada/media/post_attachments/wp-content/uploads/2025/01/RAJU-KAPOOR-2.jpg)
ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಲ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿಗಳ ಬಂಧನ ಆಗಿದೆ. ತನಿಖೆ ನಡೆಸ್ತಿರುವ ಸಿಐಡಿ ಅಧಿಕಾರಿಗಳು, ಪ್ರಿಯಾಂಕ್ ಖರ್ಗೆ ಆಪ್ತ ಕಪನೂರ್ ಸೇರಿ ಐವರನ್ನ ತನ್ನ ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದೆ.
ಖರ್ಗೆ ಆಪ್ತ ರಾಜು ಕಪನೂರ ಆ್ಯಂಡ್ ಗ್ಯಾಂಗ್ ಅರೆಸ್ಟ್!
ಬೀದರ್‌ನ ಈ ಹುಡುಗನ ಜೀವ ಹೋಗಲು ಕಲಬುರಗಿಯ ಕಲುಷಿತ ರಾಜಕಾರಣ ಕಾರಣ ಅಂತ ಕಮಲ ಪ್ರತಿಭಟನೆ ನಡೆಸಿತ್ತು. ಪ್ರಿಯಾಂಕ್ ಸಚಿವ ಖರ್ಗೆ ಆಪ್ತರ ಹೆಸರು ತಳಕು ಹಾಕಿದ್ದೆ, ಪ್ರಕರಣ ರಾಜಕೀಯ ಸಂಗ್ರಾಮಕ್ಕೆ ಕಾರಣ ಆಗಿತ್ತು. ಈಗ ರಾಜು ಕಪನೂರ್ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ.
ಇದನ್ನೂ ಓದಿ: ಕೆಲಸ ಮಾಡೋ ಮಹಿಳೆಯರಿಗೆ ಬೆಂಗಳೂರು ಬೆಸ್ಟ್ ಪ್ಲೇಸ್; ನೀವು ಓದಲೇಬೇಕಾದ ಸ್ಟೋರಿ ಇದು
ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆದೆ. ವಿಚಾರಣೆ ಬಳಿಕ ರಾಜು ಕಪನೂರ್ ಸೇರಿ ಐವರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಗೋರಖನಾಥ್, ಆರ್.ಕೆ.ಪಾಟೀಲ್, ಸತೀಶ್ ಸೇರಿ ಐವರನ್ನು ಅರೆಸ್ಟ್ ಮಾಡಲಾಗಿದೆ.
ರಾಜು ಕಪನೂರು ಸೇರಿ ಐವರು ಆರೋಪಿಗಳನ್ನ ನಿನ್ನೆಯಷ್ಟೇ ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬಳಿಕ ಬೀದರ್‌ನ ಜೆಎಂಎಫ್‌ಸಿ ಕೋರ್ಟ್‌ಗೆ ಆರೋಪಿಗಳನ್ನ ಹಾಜರು ಪಡಿಸಿದ್ದಾರೆ. ಈ ಬೆನ್ನಲ್ಲೆ ಕೋರ್ಟ್, 5 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿದೆ. ತನ್ನ ಕಸ್ಟಡಿಗೆ ಪಡೆದ ಸಿಐಡಿ, ಬೆಂಗಳೂರಿಗೆ ಕರೆದೊಯ್ಯುತ್ತಿದೆ.. ಜನವರಿ 15ನೇ ತಾರೀಖು ಮತ್ತೆ ಬೀದರ್‌ಗೆ ವಾಪಸ್ ತರಲಿದೆ.
ಇದನ್ನೂ ಓದಿ: ಪ್ರೇಮಿಗಳಿಗೆ ಸಮಸ್ಯೆ, ನಿಧಾನವಾಗಿ ಯೋಚಿಸಿ ಕೆಲವು ಕೆಲಸ ಮಾಡಿ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ!
ತನಿಖೆಯಿಂದ ಎಲ್ಲವೂ ಬಯಲಾಗುತ್ತೆ
ಕಪನೂರ್ ಪರ ವಕೀಲ ಅರುಣ್ ಕುಮಾರ್, ದುಡ್ಡಿನ ವ್ಯವಹಾರದ ಬಗ್ಗೆ ಮಾತ್ನಾಡಿದ್ದಾರೆ. ಎಲ್ಲಾ ಮಾಹಿತಿಗಳು ಸಚಿನ್ ಅವರ ಹತ್ತಿರನೇ ಇದೆ, ಆರೋಪಿಗಳ ಹತ್ತಿರ ಏನು ಇಲ್ಲ. ಸಚಿನ್ ಖಾತೆಗೆ ನಮ್ಮ ಕಕ್ಷಿದಾರರ ಖಾತೆಯಿಂದ ಹಣ ವರ್ಗಾವಣೆ ಆಗಿದೆ. ಸಚಿನ್ ಯಾವ ಕಾರಣಕ್ಕೆ ಹಣ ತೆಗೆದುಕೊಂಡ್ರು, ಯಾಕೆ ಹಾಗೆ ಮಾಡ್ಕೊಂಡ್ರು ಅಂತ ಇನ್ವೆಸ್ಟಿಗೇಷನ್ನಲ್ಲಿ ಗೊತ್ತಾಗಲಿದೆ ಎಂದಿದ್ದಾರೆ.
ಒಟ್ಟಾರೆ ಸಚಿನ್ ಪಾಂಚಾಳ ಕೇಸ್ಗೆ ತಿರುವು ಸಿಕ್ಕಿದ್ದು, ತನಿಖೆ ಸಹ ಚುರುಕುಗೊಂಡಿದೆ. ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಐಡಿ, ಬೆಂಗಳೂರಿನಲ್ಲಿ ವಿಚಾರಣೆ ನಡೆಸಲಿದೆ. ಈ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗುತ್ತಾ? ಕಾದು ನೋಡಬೇಕು.
ಇದನ್ನೂ ಓದಿ:ಮತ್ತೊಂದು ಘೋರ ದುರಂತ.. 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಭಯಾನಕ ವಿಡಿಯೋ ಸೆರೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ