/newsfirstlive-kannada/media/post_attachments/wp-content/uploads/2025/05/ZAMEER-3.jpg)
ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. SSLC ಪರೀಕ್ಷೆಯಲ್ಲಿ ಟಾಪರ್ ಬಂದಿರುವ 6 ವಿದ್ಯಾರ್ಥಿಗಳಿಗೆ 50 ಸಾವಿರ ರೂಪಾಯಿ ನಗದು ಹಾಗೂ ದ್ವಿಚಕ್ರ ವಾಹನ ವಿತರಣೆ ಮಾಡಿದ್ದಾರೆ. ದ್ವಿಚಕ್ರ ವಾಹನವನ್ನು ಸದ್ಯ ವಿದ್ಯಾರ್ಥಿಗಳ ಪೋಷಕರು ಬಳಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: BREAKING: CBSE 12ನೇ ತರಗತಿ ಫಲಿತಾಂಶ.. ಈ ಬಾರಿ ಶೇ.91ರಷ್ಟು ವಿದ್ಯಾರ್ಥಿನಿಯರು ಪಾಸ್
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ವಿಜಯನಗರ ಜಿಲ್ಲೆಯ ವಿದ್ಯಾರ್ಥಿ ಯಶವಂತ್ಗೆ 1 ಲಕ್ಷ ರೂಪಾಯಿ ಹಣ ಹಾಗೂ ದ್ವಿಚಕ್ರ ವಾಹನ ವಿತರಣೆ ಮಾಡಿದ್ದಾರೆ. ಇನ್ನುಳಿದ ಐವರಿಗೆ 50 ಸಾವಿರ ನಗದು ಹಣ ಹಾಗೂ ದ್ವಿಚಕ್ರ ವಾಹನ ನೀಡಿದ್ದಾರೆ. ಒಟ್ಟು 3.5 ಲಕ್ಷ ಹಣ ಹಾಗೂ 6 ದ್ವಿಚಕ್ರ ವಾಹನಗಳನ್ನು ಜಮೀರ್ ಅಹ್ಮದ್ ಖಾನ್ ನೀಡಿದ್ದಾರೆ.
ಇದನ್ನೂ ಓದಿ: CBSE 12ನೇ ತರಗತಿ: ಈ ಬಾರಿ ವಿಜಯವಾಡ ಇಡೀ ದೇಶಕ್ಕೆ ಫಸ್ಟ್.. ಬೆಂಗಳೂರಿಗೆ ಎಷ್ಟನೇ ಸ್ಥಾನ?
ಈ ಕಾರ್ಯಕ್ರಮವು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು. ಮೇ 4ರಂದು ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪರ್ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ ಹಾಗೂ ಹಣವನ್ನು ನೀಡಿ ಪ್ರೋತ್ಸಾಹಿಸಿದ್ದರು. ಇದೇ ವೇಳೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಇಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಣ ಹಾಗೂ ದ್ವಿಚಕ್ರ ವಾಹನ ವಿತರಿಸಿದ್ದಾರೆ.
ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ರಾಜ್ಯಕ್ಕೆ ಹೆಸರು ತನ್ನಿ. ಉಳಿದ ವಿದ್ಯಾರ್ಥಿಗಳಿಗೆ ಇವರ ಸಾಧನೆ ಪ್ರೇರಣೆ ಆಗಲಿ. ಪೋಷಕರಿಂದ ತಂದೆ ತಾಯಿಗಳಿಗೆ ದ್ವಿಚಕ್ರ ವಾಹನ ಗಿಫ್ಟ್ ಬಂದಂತಾಗಿದೆ. ಇವತ್ತು ಅವರಿಂದ ನಿಮಗೆ ದ್ವಿಚಕ್ರ ವಾಹನ ಬಂದಿದೆ. ಅವರಿಗೆ ಇನ್ನು ವಯಸ್ಸಿಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ದ್ವಿಚಕ್ರ ವಾಹನ ಬಳಸಿಕೊಳ್ಳಿ. ಮಕ್ಕಳ ಕೈಗೆ ಗಾಡಿ ಓಡಿಸಲು ಕೊಡಬೇಡಿ. 18 ವರ್ಷ ಪೂರೈಸಿ ಲೈಸೆನ್ಸ್ ಕೊಟ್ಟ ಮೇಲೆ ಅವರ ಕೈಗೆ ವಾಹನ ಓಡಿಸಲು ಕೊಡಿ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಆಲಿಕಲ್ಲು ಮಳೆಯ ಆರ್ಭಟ.. ಒಂದೇ ಗಂಟೆಗೆ ಬೆಂಗಳೂರು ನಗರದಲ್ಲಿ ಹಲವು ಅವಾಂತರ; ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ