/newsfirstlive-kannada/media/post_attachments/wp-content/uploads/2024/09/JOBS-1.jpg)
ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆ ಅಡಿ ಕರ್ನಾಟಕ ಮುನ್ಸಿಪಲ್ ಆಡಳಿತವು ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಕರ್ನಾಟಕ ಮುನ್ಸಿಪಲ್ ಆಡಳಿತ ಈಗಾಗಲೇ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದಡಿ ಹಾಗೂ ಬೆಂಗಳೂರಿನಲ್ಲಿ ಯಾರು ಕೆಲಸ ಮಾಡಲು ಇಚ್ಛಿಸುವರೋ ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಕರ್ನಾಟಕ ಸರ್ಕಾರ ಅವಕಾಶ ಒಂದನ್ನು ಕೊಟ್ಟಿದ್ದು ಅಭ್ಯರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಉದ್ಯೋಗಗಳಿಗೆ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕಾಗಿದೆ. ಯಾವುದೇ ಆನ್ಲೈನ್ನಿಂದ ಬರುವ ಅರ್ಜಿಗಳನ್ನು ಇಲಾಖೆಯು ಸ್ವೀಕಾರ ಮಾಡಲ್ಲ. ಹೀಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ಅಪ್ಲೇ ಮಾಡುವುದು ಉತ್ತಮ.
ಸಂಬಳ ಎಷ್ಟು ಕೊಡುತ್ತಾರೆ?
ತಿಂಗಳಿಗೆ- 45,000 ರೂಪಾಯಿ
ವಯಸ್ಸಿನ ಮಿತಿ
21 ರಿಂದ 35 ವರ್ಷಗಳು
ಇದನ್ನೂ ಓದಿ:500ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು.. SI, ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ ಹುದ್ದೆಗಳು ಖಾಲಿ
ವಿದ್ಯಾರ್ಹತೆ
ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು
ಯಾವುದಾದ್ರು ಎನ್ಜಿಒನಲ್ಲಿ 2 ವರ್ಷ ಅನುಭವ ಪಡೆದಿರಬೇಕು
ಕನ್ನಡ, ಇಂಗ್ಲಿಷ್ ಅನ್ನು ಓದಲು ಬರೆಯಲು ಬರಬೇಕು
ಬೇಸಿಕ್ ಕಂಪ್ಯೂಟರ್ ಗೊತ್ತಿರಬೇಕು
- ಇಲಾಖೆಯ ಹೆಸರು- Karnataka Municipal Administration
- ಒಟ್ಟು ಹುದ್ದೆಗಳು- 02
- ಉದ್ಯೋಗ ಮಾಡುವ ಸ್ಥಳ- ಬೆಂಗಳೂರು
- ಉದ್ಯೋಗದ ಹೆಸರು- ರಾಜ್ಯ ನಮಸ್ತೆ ಸಂಯೋಜಕರು (State NAMASTE Coordinator)
ಅಪ್ಲಿಕೇಶನ್ ಇಲ್ಲಿಂದ ಡೌನ್ಲೋಡ್ ಮಾಡಬೇಕು
http://municipaladmn.gov.in/en/recruitment
ಅರ್ಜಿಯ ಪ್ರತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ಎಲ್ಲ ದಾಖಲೆಗಳನ್ನು ಲಗತ್ತಿಸಿ ಸೆಲ್ಫ್ ಅಟೆಸ್ಟೆಡ್ ಮಾಡಿದ ನಂತರ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ವಿಳಾಸ-
State Mission Director (SMD)-SBM (U),
Directorate of Swachh Bharath Mission (Urban),
Bengaluru, 09th Floor, V.V. Tower,
Dr. Ambedkar Veedhi, Bengaluru-560001
ಕೊನೆ ದಿನಾಂಕ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 21 ನವೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ