ಕಲಬುರಗಿಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಸಂಗೀತ, ಮತ್ತು ನೃತ್ಯ ಮಹೋತ್ಸವ.. ದಿಗ್ಗಜ ಕಲಾವಿದರು ಭಾಗಿ!

author-image
Veena Gangani
Updated On
ಕಲಬುರಗಿಯಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಸಂಗೀತ, ಮತ್ತು ನೃತ್ಯ ಮಹೋತ್ಸವ.. ದಿಗ್ಗಜ ಕಲಾವಿದರು ಭಾಗಿ!
Advertisment
  • ಅದ್ಧೂರಿಯಾಗಿ ಜರುಗಿದ ರಾಷ್ಟ್ರೀಯ ಮಟ್ಟದ ಸಂಗೀತ, ನೃತ್ಯ ಮಹೋತ್ಸವ
  • ಸಂಗೀತ, ನೃತ್ಯ ಮಹೋತ್ಸವಕ್ಕೆ ಶಾಸಕ ಎಂ.ವೈ.ಪಾಟೀಲ್​ರಿಂದ ಉದ್ಘಾಟನೆ
  • ಕಲಬುರಗಿಯ ವಿವಿ ಆವರಣದ ನಡೆಯಿತು ಅದ್ಧೂರಿಯ ಸಂಗೀತ ನೃತ್ಯ ವೈಭವ

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಸಂಗೀತ, ಮತ್ತು ನೃತ್ಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಕಲಬುರಗಿಯ ವಿವಿ ಆವರಣದ ಡಾ: ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಸಂಗೀತ ನೃತ್ಯ ಮಹೋತ್ಸವದಲ್ಲಿ ಸಂಗೀತದ ತಾಳ ಮೇಳಕ್ಕೆ ಗೆಜ್ಜೆ ನಾದದ ಸಾಂಗತ್ಯದೊಂದಿಗೆ ರಾಷ್ಟ್ರದ ದಿಗ್ಗಜ ಕಲಾವಿದರಿಂದ ಸಂಗೀತ ನೃತ್ಯ ವೈಭವ ನಡೆಯಿತು.

ಇದನ್ನೂ ಓದಿ:ಕಬಿನಿಯಲ್ಲಿ ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್ ಮೋಜು ಮಸ್ತಿ.. ನಟಿ ರಕ್ಷಿತಾ ಪ್ರೇಮ್​ ಕ್ಯೂಟ್​ ವಿಡಿಯೋ ಇಲ್ಲಿದೆ!

publive-image

ಕಲಾವಿದೆ ವೀಣಾ ಶೇಷಾದ್ರಿ ಅವರ ದಿಗ್ದರ್ಶನದಲ್ಲಿ ಪುಣ್ಯಶೀಲೆ, ಧರ್ಮಬಲ, ಸೇನಾಬಲಶೀಲೆ, ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಕುರಿತ ನೃತ್ಯ ರೂಪಕ ಇತಿಹಾಸವನ್ನು ಕಟ್ಟಿಕೊಟ್ಟರೇ, ಮೈ ಜುಮ್ಮೇನಿಸುವ ಕಥಾ ನಿರೂಪಣೆ. ಅಭಯಾರಣ್ಯ ರಕ್ಷಕಿ. ಪ್ರೇಮ, ಧರ್ಮಬಲದಿಂದ ರಾಜ್ಯವಾಳಿತ ಏಕೈಕ ನಾಯಕಿ ಎಂಬ ಸಂದೇಶ ಸಾರಿತು. ಕಲಬುರಗಿಯ ನೃತ್ಯ ಸಾಧನಾ ಕೇಂದ್ರದ ಶುಭಾಂಗಿ ಅವರ ನೇತೃತ್ವದ ತಂಡದಿಂದ ಭರತನಾಟ್ಯ ಗಮನ ಸೆಳೆಯಿತು.

publive-image

ಸಂಗೀತ, ನೃತ್ಯ ಮಹೋತ್ಸವಕ್ಕೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಉದ್ಘಾಟನೆ ಮಾಡಿ ಮಾತಾಡಿದ್ರು. ವಿಶ್ವದಲ್ಲೇ ಭಾರತ ದೇಶ ಸಂಸ್ಕೃತಿ, ಯೋಗ ಸಂಗೀತ, ಕಲಾರಾಧನೆಗೆ ಶ್ರೇಷ್ಠತೆ ಪಡೆದಿದೆ. ಹಿಂದುಸ್ತಾನಿ, ಕರ್ನಾಟಕ ಸಂಗೀತಗಳು ವಿಶ್ವದಲ್ಲಿ ಬೆಳಕು ಚೆಲ್ಲುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರದ ಸಂಗೀತದಿಂದ ದೇವ್ವಗಳು ರಾರಾಜಿಸುತ್ತಿವೆ. ಆದರೆ ಭಾರತದ ಸಂಗೀತದಿಂದ ಋಷಿ ಮುನಿಗಳು ಎದ್ದು ನಿಲ್ತಾರೆ, ದೇವರು ಪ್ರತ್ಯಕ್ಷವಾಗಿಸುವ ಒಲಿಯುವ ಶಕ್ತಿ ಎಂದು ಬಣ್ಣಿಸಿದ್ರು. ಸಂಗೀತ ಎಲ್ಲರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಸಂಗೀತದಿಂದ ಹೂವಿನ ಮೊಗ್ಗು ಅರಳುತ್ತೆ, ರೋಗ ವಾಸಿ ಆಗುತ್ತದೆ.

publive-image

ಮಾನಸಿಕ ರೋಗ ನಿವಾರಿಸಲು ಸಂಗೀತ ಶಕ್ತಿ ತುಂಬುತ್ತದೆ ಎಂದು ಶಾಸಕ ಪಾಟೀಲ್ ಹೇಳಿದ್ರು. ಸಂಗೀತ ಕ್ಷೇತ್ರ ಬೆಳೆಯಬೇಕಾಗಿದೆ. ಹೆಚ್ಚಿನ ಜನ ಸಂಖ್ಯೆ ಸೇರಬೇಕಿತ್ತು ಎಂದು ಹೇಳಿದ್ರು. ಕರ್ನಾಟಕ ನೃತ್ಯ, ಸಂಗೀತ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಮಾತಾಡಿ, ನಮ್ಮ ಕಲೆಯನ್ನು ಪ್ರಪಂಚಕ್ಕೆ ಬೀರಿದ್ದು ನಮ್ಮ ಕಲಾವಿದರು. ಇಡೀ ವಿಶ್ವದ ಜನ ಓಡೋಡಿ ಬರುವಂತೆ ಮಾಡಿದ ಶ್ರೇಷ್ಠತೆ ನಮ್ಮ ಕಲಾವಿದರಿಗಿದೆ. ಮಕ್ಕಳು ಬೆಳೆಯುವ ಹಂತದಲ್ಲಿ ಅವರಿಗೆ ಸಂಗೀತ ಮತ್ತು ನೃತ್ಯ ಕಲೆಗೆ ಉತ್ತೇಜಿಸಿ. ಮೊಬೈಲ್ ಯುಗದಲ್ಲಿ ತಮ್ಮನ್ನ ತಾವು ಮರೆತು ಬಿಡುತ್ತಾರೆ. ಪ್ರತಿಯೊಬ್ಬರಿಗೂ ಜೊತೆಯಾಗಿ ಇರುವುದು ಕಲೆ. ಶಿಷ್ಯ ವೇತನ ನೀಡಲಾಗುತ್ತಿದೆ. ಹಿರಿಯ ಕಲಾವಿದರಿಗೆ ಪಿಂಚಣಿಯನ್ನು ನೀಡಲಾಗುತ್ತಿದೆ. ಪ್ರೋತ್ಸಾಹ ನೀಡಲು ರಾಷ್ಟ್ರೀಯ ಜಿಲ್ಲಾ ಮಟ್ಟದ ನೃತ್ಯೋತ್ಸವ ಏರ್ಪಾಡು, ತರಬೇತಿ, ಶಿಬಿರ, ಕಾರ್ಯಾಗಾರ ನೀಡುತ್ತಿದ್ದೇವೆ ಎಂದು ಹೇಳಿದರು.

publive-image

ಇನ್ನು, ಕಲಾವಿದೆ ರೂಪಾ ಪತ್ತಾರ ಅವರ ವಾಣಿ ವಿಲಾಸ ಸಾಂಸ್ಕೃತಿಕ ಸಂಸ್ಥೆ ತಂಡದಿಂದ ಗಜವಧನ ಬೇಡುವೆ, ಗೌರಿ ತನಯ ಭರತನಾಟ್ಯದೊಂದಿಗೆ ಆರಂಭ. ಓಂ ಶಂಭೋ ಶಿವ ಶಂಭೋ, ಭಾಗ್ಯದ ಲಕ್ಷ್ಮಿ ಬಾರಮ್ಮ ಭರತ ನಾಟ್ಯ ಪ್ರೇಕ್ಷಕರು ತಲೆದೂಗುವಂತೆ ಮಾಡಿತು. ಪುಣೆಯ ಲಹೇಜ್ ಡ್ಯಾನ್ಸ್ ಅಕಾಡೆಮಿಯ ಅಭಾ ಅಟಿ ನೇತೃತ್ವದಲ್ಲಿ ಕಥಕ್ ನೃತ್ಯದಲ್ಲಿ ಪ್ರೀತಿ, ಪ್ರಕೃತಿಯೊಂದಿಗೆ ದಕ್ಷಯಜ್ಞನ ಕಥಾನಕ, ಹೋರಿ ಪ್ರಕಾರ, ಕೃಷ್ಣನ ಕೀರ್ತನೆ ಸಾದರಪಡಿಸಿದ್ದು, ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯಿತು. ಭದ್ರಿನಾಥ ಮುಡಬಿ, ರಾಘವೇಂದ್ರ ಕುಲ್ಕರ್ಣಿ ಸಂಗಡಿಗರಿಂದ ತಬಲಾ ಸೋಲೋ ಶ್ರೋತೃಗಳ ಮನ ತಣಿಸಿತು.

publive-image

ಡಾ: ವೆಂಪಟಿ ಚಿನ್ನ ಸತ್ಯಂ ಆರ್ಟ್ ಅಕಾಡೆಮಿಯಿಂದ ಶಿವಾಕಾರಂ ಕುಚಿಪುಡಿ ನೃತ್ಯವೂ ಸಾಕ್ಷಾತ ಶಿವಪಾರ್ವತಿಯನ್ನೂ ಧರೆಗಿಳಿಸಿ, ಶಿವರಾತ್ರಿಗೂ ಮುನ್ನ ಕೈಲಾಸ ದರ್ಶನ ಮಾಡಿಸಿತು. ನಾಗೇಶ್ ಅಡ್ವಾನ್ ಕರ್ ಹಿಂದುಸ್ತಾನಿ ಸಂಗೀತದಲ್ಲಿ ರಾಗ ಸಂಯೋಜನೆ, ಪಂಡರೀನಾಥ ವಿಠೋಬಾನ ಆಭಂಗ ಗಾಯನ ಭಕ್ತಿಯಲ್ಲಿ ತೇಲಿಸಿತು. ಜಡೇಶ ಹೂಗಾರ ತಬಲಾ, ವಿನಾಯಕ ಹಾರ್ಮೋನಿಯಂ ಸಾಥ್ ನೀಡಿದರು. ರಫೀಕ್ ಖಾನ್ ಮತ್ತು ಶಫಿಕ್ ಖಾನ್ ಸಹೋದರರ ಸಿತಾರ್ ವಾದನ, ಭೀಮತಲಾಸ್ ರಾಗದೊಂದಿಗೆ ಆರಂಭ. ತಂತಿ ಮೀಟಿದಾಗ ಶ್ರೋತೃಗಳು ತಲೆದೂಗಿದಯು. ಇನ್ನು‌ ಸಂಗೀತ, ನೃತ್ಯ ಮಹೋತ್ಸವದಲ್ಲಿ ಮಹಾರಾಷ್ಟ್ರ, ತಮೀಳು ಮಾಡು ಸೇರಿ ದೇಶದ ಹಲವು ರಾಜ್ಯದ ಕಲಾವಿದರು ಪಾಲ್ಗೊಂಡಿದ್ದರು. ಕಲಬುರಗಿಯಲ್ಲಿ ನಡೆದ ಸಂಗೀತ ,ನೃತ್ಯ ಮಹೋತ್ಸವ ಛೆಂಕಾರ ಮೊಳಗಿಸಿತು.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment