newsfirstkannada.com

ರಾಜ್ಯಕ್ಕೆ 4 ಡಿಸಿಎಂ ಬೇಕು.. ಹೈಕಮಾಂಡ್​​ ಮುಂದೆ ಸಿಎಂ ಸಿದ್ದರಾಮಯ್ಯ ಬೇಡಿಕೆ!?

Share :

Published June 9, 2024 at 7:15am

    CWC ಸಭೆ ಸಂಬಂಧ ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ದೆಹಲಿಗೆ ಭೇಟಿ

    ಹೈಕಮಾಂಡ್ ನಾಯಕರ ಮುಂದೆ ಸಿಎಂ ಅಚ್ಚರಿಯ ಬೇಡಿಕೆ

    ರಾಜ್ಯದಲ್ಲಿ ನಾಲ್ಕು ಡಿಸಿಎಂ ಸೃಷ್ಟಿಸಿ ಅಂತ ವಿಚಾರ ಪ್ರಸ್ತಾಪ

ಅದೇನೋ ಗೊತ್ತಿಲ್ಲ. ಕಾಂಗ್ರೆಸ್​​ನಲ್ಲಿ ಈ ಹುದ್ದೆ ಮಾತ್ರ ಸದಾ ಬೂದಿಮುಚ್ಚಿದ ಕೆಂಡ. ಒಮ್ಮೊಮ್ಮೆ ಧಗ್ಗನೆ ಹೊತ್ತಿ ಉರಿಯುವ ಕಿಡಿ, ತ್ರಿಭಜನೆಗೆ ಪಟ್ಟು ಹಾಕಿದ್ದಿದೆ. ಹೈಕಮಾಂಡ್​​ ಸಹ ಎದ್ದ ಬೆಂಕಿಗೆ ನೀರು ಹೊಯ್ದು ಆರಿಸಿದ್ದಿದೆ. ಆದರೆ, ಈ ಬಾರಿ ಮಾತ್ರ ನೇರವಾಗಿ ಹೈಕಮಾಂಡ್​​ ಬಳಿಯೇ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಿಎಂ ಹೊಸ ವಾದ ಮುಂದಿಟ್ಟಿದ್ದು, ಜೊತೆಗೆ ಹೋಗಿದ್ದ ಡಿಕೆಶಿ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.

ಇದೊಂಥರ ತೊಟ್ಟಿಲಲ್ಲಿ ಮಲಗಿದ್ದ ಮಗು ಚಿವುಟಿದ ಹಾಗೆ. ರಾಜ್ಯ ಸರ್ಕಾರದ ನಂಬರ್​​ 2 ಪಟ್ಟಕ್ಕೆ ಹಲವು ಸಚಿವರು ಪಟ್ಟು ಹಾಕ್ತಿದ್ದು, ಹೈಕಮಾಂಡ್​ಗೆ ತಲೆ ನೋವು ತಂದಿದೆ. ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಒತ್ತಡ ಹೇರಲಾಗ್ತಿದೆ. ಲೋಕಸಭೆ ಚುನಾವಣೆಯ ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಡಿಸಿಎಂ ಹುದ್ದೆಗಳ ಜನ್ಮಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

ಈ ಬಾರಿ ಡಿಸಿಎಂ ಕೂಗಿಗೆ ಬಲ ತುಂಬಿದ್ರಾ ಸಿಎಂ ಸಿದ್ದು?

ಅಂದ್ಹಾಗೆ ಲೋಕಸಭೆ ಗೆಲ್ಲಲು ಡಿಸಿಎಂ ಹುದ್ದೆಗಳ ಬಗ್ಗೆ ಪುಕಾರು ಎದ್ದಿತ್ತು. ಇನ್ನೂ, ಮೂರು ಡಿಸಿಎಂ ಹುದ್ದೆಗಳು ಬೇಕು ಅಂತ ಸಿದ್ದು ಕ್ಯಾಂಪ್​ ತಕರಾರು ಎತ್ತಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ಹೆಚ್ಚುವರಿ ಡಿಸಿಎಂ ಸ್ಥಾನಗಳಿದ್ದರೆ ಉತ್ತಮ ಪ್ರದರ್ಶನ ಸಾಧ್ಯ ಇತ್ತು ಅನ್ನೋ ವಾದ ಹೊಸದಾಗಿ ಮಂಡನೆ ಆಗಿದೆ. ಅಚ್ಚರಿ ಎಂದ್ರೆ ಈ ಹೊಸ ವಾದ ಮಂಡಿಸಿದ್ದು, ಯಾವುದೇ ಸಚಿವರಲ್ಲ, ಸ್ವತಂ ಸರ್ಕಾರದ ಕ್ಯಾಪ್ಟನ್​ ಸಿಎಂ ಸಿದ್ದರಾಮಯ್ಯ.

ಇದನ್ನೂ ಓದಿ: ಮೋದಿ ಸಂಪುಟದಲ್ಲಿಂದು ರಾಜ್ಯದ ನಾಲ್ವರಿಗೆ ಸ್ಥಾನ ಸಿಗೋದು ಪಕ್ಕಾ? ಅವ್ರು ಯಾರೆಲ್ಲಾ ಗೊತ್ತಾ?

ನಾಲ್ಕು ಡಿಸಿಎಂ ಸ್ಥಾನ ಬೇಕು!?

CWC ಸಭೆ ಸಂಬಂಧ ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ದೆಹಲಿಗೆ ಭೇಟಿ ನೀಡಿದ್ರು. ಸಭೆ ನಂತರ ಹೈಕಮಾಂಡ್ ನಾಯಕರ ಮುಂದೆ ಸಿಎಂ ಅಚ್ಚರಿಯ ಬೇಡಿಕೆ ಮುಂದಿಟ್ಟಿದ್ದಾರೆ. ರಾಜ್ಯದಲ್ಲಿ ನಾಲ್ಕು ಡಿಸಿಎಂ ಸೃಷ್ಟಿಸಿ ಅಂತ ತಮ್ಮ ವಿಚಾರವನ್ನ ಸಿಎಂ ಪ್ರಸ್ತಾಪಿಸಿದ್ದಾರೆ ಅಂತ ಗೊತ್ತಾಗಿದೆ. ಸಿಎಂ ಬೇಡಿಕೆ ಮಂಡನೆ ಸುದ್ದಿ ಕಿವಿಗೆ ತಲುಪುತ್ತಲೇ ಡಿಸಿಎಂ ಡಿಕೆಶಿ ದೆಹಲಿಯಲ್ಲೇ ಉಳಿದಿದ್ದಾರೆ. ಸಿಎಂ ಜೊತೆಗೆ ದೆಹಲಿಗೆ ಬಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್​​​, ಇವತ್ತು ಇದೇ ವಿಚಾರವಾಗೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಂದು ನರೇಂದ್ರ ಮೋದಿ ಪದಗ್ರಹಣ.. ಅದ್ಧೂರಿ ಸಮಾರಂಭಕ್ಕೆ ಯಾರಿಗೆಲ್ಲ ಆಹ್ವಾನ?

ಒಟ್ಟಾರೆ, ಕಾಂಗ್ರೆಸ್​​​ ಕೋಟೆಯಲ್ಲಿ ಮತ್ತೊಮ್ಮೆ ನಿರೀಕ್ಷಿತ ಡಿಸಿಎಂ ಹುದ್ದೆಯ ಅಗ್ನಿ ಅವಘಡ ಸಂಭವಿಸೋದಕ್ಕಿದೆ. ಮೂರು ಹೆಚ್ಚುವರಿ ಹುದ್ದೆ ಸೃಷ್ಟಿಯಿಂದ ಮತ್ತೆ ಉರಿ ಹೊತ್ತಲಿದೆ. ಕಳೆದ ಬಾರಿ ಏನೋ ಅಗ್ನಿಶಾಮಕ ಸಮವಸ್ತ್ರ ತೊಟ್ಟು ಹೊತ್ತಿದ ಬೆಂಕಿ ನಂದಿಸಿದ್ದ ಹೈಕಮಾಂಡ್​​​ ಈ ಬಾರಿ ಇನ್ಯಾವ ಉಪಾಯ ಮಾಡುತ್ತೋ ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಕ್ಕೆ 4 ಡಿಸಿಎಂ ಬೇಕು.. ಹೈಕಮಾಂಡ್​​ ಮುಂದೆ ಸಿಎಂ ಸಿದ್ದರಾಮಯ್ಯ ಬೇಡಿಕೆ!?

https://newsfirstlive.com/wp-content/uploads/2024/03/Siddaramaiah-11.jpg

Load More