Pahalgam attack: ಜೀವ ಕಳೆದುಕೊಂಡ ಮೂವರು ಕನ್ನಡಿಗರು.. ಸಂಕಷ್ಟದಲ್ಲಿ ಕರ್ನಾಟಕದ 40 ಮಂದಿ

author-image
Ganesh
Updated On
ಉಗ್ರರ ಗುಂಡಿನ ದಾಳಿಯಲ್ಲಿ ಜೀವ ಬಿಟ್ಟ ಮೂವರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ
Advertisment
  • ಮಂಜುನಾಥ್​​ರ ಜೀವ ತೆಗೆದ ಬದಲಾದ ಟ್ರಿಪ್​​​ಪ್ಲಾನ್
  • ಕಾಶ್ಮೀರಕ್ಕೆ ತೆರಳಿದ ಸಚಿವ ಸಂತೋಷ್ ಲಾಡ್
  • ಕನ್ನಡಿಗರ ರಕ್ಷಣೆಗಾಗಿ 2 ತಂಡಗಳೊಂದಿಗೆ ಕಾಶ್ಮೀರಕ್ಕೆ

ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ 40 ಕನ್ನಡಿಗರು ಸಿಲುಕಿರುವ ಶಂಕೆ ಇದೆ. ಉಗ್ರರ ಪೈಶಾಚಿಕ ಕೃತ್ಯದಲ್ಲಿ ಮೂವರು ಕನ್ನಡಿಗರ ಜೀವ ಹೋಗಿದೆ. ಶಿವಮೊಗ್ಗದ ಮಂಜುನಾಥ್, ಹಾವೇರಿಯ ಭರತ್​​ ಭೂಷಣ್​​ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆಂದು ಕುಟುಂಬದ ಜೊತೆ ಕಾಶ್ಮೀರಕ್ಕೆ ಹೋಗಿದ್ದರು. ಪ್ರವಾಸದ ಖುಷಿಯಲ್ಲಿದ್ದವರ ಮೇಲೆ ಉಗ್ರರರು ದಾಳಿ ನಡೆಸಿ ಜೀವ ತೆಗೆದಿದ್ದಾರೆ.

ಜೀವ ತೆಗೆದ ಬದಲಾದ ಟ್ರಿಪ್​​​ಪ್ಲಾನ್​​​!

ದುರಂತ ಅನ್ಬೇಕೋ? ವಿಧಿ ಬರಹ ಅನ್ಬೇಕೋ? ರಾಜಸ್ಥಾನಕ್ಕೆ ತೆರಳಬೇಕಾಗಿದ್ದ ಮಂಜುನಾಥ್​, ಕಾಶ್ಮೀರ ಪ್ರವಾಸ ಕೈಗೊಂಡಿದ್ರು.. ಐದು ದಿನಗಳ ಹಿಂದೆ ಕುಟುಂಬ ಸಮೇತ ಕಾಶ್ಮೀರಕ್ಕೆ ಪಯಣ ಬೆಳೆಸಿತ್ತು. ಘಟನೆ ನಿಜಕ್ಕೂ ದುರ್ದೈವ ಎಂದ ಸ್ನೇಹಿತ ಗಣೇಶ್ ಭಟ್ ಕಂಬನಿ ಮಿಡಿದಿದ್ದಾರೆ. ಕಾಶ್ಮೀರಕ್ಕೆ ಹೋಗೋದು ನನ್ನ ಪತಿಯ ಆಸೆಯಾಗಿತ್ತು. ನಾನೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದೇನೆ. ಇಲ್ಲಿರುವ ಮೂರು ಜನರು ನನ್ನನ್ನು ತುಂಬಾ ಸೇಫ್ ಆಗಿ ಕರೆದುಕೊಂಡು ಬಂದಿದ್ದಾರೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ಆಗಿದೆ. ನನಗೆ ನನ್ನ ಪತಿಯ ಮೃತದೇಹ ಸಿಗಬೇಕು. ನನಗೆ ಸಹಾಯ ಮಾಡಿ ಅಂತಾ ಮಂಜುನಾಥ್ ಪತ್ನಿ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ: ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!

publive-image

ಮಾಜಿ ಸ್ಪೀಕರ್​​ ಕೋಳಿವಾಡ ಸಂಬಂಧಿ ಬಲಿ!

ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸವಿದ್ದ ಹಾವೇರಿ ಮೂಲದ ಭರತ್​ ಭೂಷಣ್​, ಉಗ್ರರ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಭರತ್​ ಭೂಷಣ್, ರಾಣೆಬೆನ್ನೂರು ಶಾಸಕ ಪ್ರಕಾಶ್​​ ಕೋಳಿವಾಡರ ಸಂಬಂಧಿ ಎನ್ನಲಾಗಿದೆ. 3 ದಿನಗಳ ಹಿಂದೆ ಕಾಶ್ಮೀರ ಪ್ರವಾಸಕ್ಕೆಂದು ಪತ್ನಿ ಸುಜಾತ ಹಾಗೂ ಮಗನ ಜೊತೆ ತೆರಳಿದ್ರು. ಈಗ ದುರಂತ ನಡೆದಿದೆ.. ಹಾರ್ಟ್ ಪೇಷೆಂಟ್ ಆಗಿರೋ ತಂದೆ, ತಾಯಿ ಇಬ್ಬರಿಗೂ ಮಗನ ಸಾವಿನ ವಿಚಾರ ತಿಳಿಸದೆ, ಭರತ್ ಅಣ್ಣ ಪ್ರೀತಮ್ ಮಾತ್ರ ಕಾಶ್ಮೀರಕ್ಕೆ ತೆರಳಿದ್ದಾರೆ.

ಕಾಶ್ಮೀರಕ್ಕೆ ತೆರಳಿದ ಲಾಡ್​​

ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಸಭೆ ನಡೆಸಿದ್ರು. ಮುಖ್ಯ ಕಾರ್ಯದರ್ಶಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಪಡೆದ್ರು. ತಕ್ಷಣವೇ ಕನ್ನಡಿಗರ ನೆರವಿಗೆ ಸೂಚಿಸಿದ್ರು. ಸಚಿವ ಲಾಡ್​​ ನೇತೃತ್ವದಲ್ಲಿ 2 ತಂಡ ಕಳುಹಿಸಿದ್ದಾರೆ. ಸದ್ಯ ಒಂದು ತಂಡ ಕನ್ನಡಗರ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳದೆ. ಮತ್ತೊಂದು ತಂಡ ಕನ್ನಡಿಗರ ಮೃತದೇಹವನ್ನು ತರಲಿದೆ.

ಇದನ್ನೂ ಓದಿ: Pahalgam attack: ಶ್ರೀನಗರಕ್ಕೆ ಅಮಿತ್ ಶಾ ದಿಢೀರ್ ಭೇಟಿ.. ಮುಂದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment