ಜನರಿಗೆ ಕರೆಂಟ್ ಶಾಕ್! ಬಡವರೆಲ್ಲ ಹೆಂಗೆ ಬದುಕಬೇಕು..? ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

author-image
Ganesh
Updated On
ಜನರಿಗೆ ಕರೆಂಟ್ ಶಾಕ್! ಬಡವರೆಲ್ಲ ಹೆಂಗೆ ಬದುಕಬೇಕು..? ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
Advertisment
  • ‘ಪಿಕ್ ಪಾಕೆಟ್’​ ಸರ್ಕಾರ ಎಂದು ವಿಪಕ್ಷಗಳು ಲೇವಡಿ
  • ಜನರಿಂದಲೇ ಕಿತ್ಕೊಂಡು ಜನ್ರಿಗೆ ಕೊಡ್ತಿದ್ದಾರೆ ಎಂದ ವಿಜಯೇಂದ್ರ
  • ‘ಜನ ಶೇ.64 ರಷ್ಟು GST ಕಟ್ಟುತ್ತಾರೆ, ಕೇಂದ್ರ ಏನು ಕೊಟ್ಟಿದೆ’ -ಸಚಿವ ಪ್ರಶ್ನೆ

ಬೆಲೆ ಏರಿಕೆ ಬರೆ ನಡುವೆ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದೆ. ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಿ KERC ಆದೇಶ ನೀಡಿದೆ. ರಾಜ್ಯದಲ್ಲಿ ಎಪ್ರಿಲ್​ 1ರಿಂದ KERCನಿಂದ ಹೊಸ ದರ ಜಾರಿಗೆ ಬರಲಿದೆ.

ದರ ಹೆಚ್ಚಳದಿಂದ 3 ವರ್ಷದಲ್ಲಿ 8,519 ಕೋಟಿ ವಸೂಲಿ ಮಾಡಲು ನಿರ್ಧರಿಸಿದೆ. 2025-26 ರಲ್ಲಿ 36 ಪೈಸೆ ಹೆಚ್ಚಳ ಮಾಡಲಾಗಿದೆ. 2026-27 ರಲ್ಲಿ 35 ಪೈಸೆ ಏರಿಕೆ ಮಾಡಿ, 2027-28 ರಲ್ಲಿ 34 ಪೈಸೆ ಹೆಚ್ಚುವರಿಯಾಗಿ ವಿಧಿಸಲು ಆದೇಶ ನೀಡಲಾಗಿದೆ. ಮೂರು ವರ್ಷದಲ್ಲಿ 8519 ಕೋಟಿ ರೂಪಾಯಿ ಹಣ ವಸೂಲಿ ಮಾಡಲು ನಿರ್ಧರಿಸಿದೆ.

publive-image

ಭಾರೀ ವಿರೋಧ..

ಕರೆಂಟ್ ಬಿಲ್ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೊಂದೇ ರೇಟ್ ಹೆಚ್ಚು ಮಾಡಿದ್ರೆ ಹೇಗೆ? ಬಸ್, ಮೆಟ್ರೋ, ಎಲ್ಲದರ ದರ ಹೆಚ್ಚಾಯ್ತು. ತನ್ನ ಸಿಬ್ಬಂದಿಗೆ ಹಣ ಕೊಡಲು, ಬಡ ಜನರಿಂದ ವಸೂಲಿ ಮಾಡೋದು ಎಷ್ಟು ಸರಿ. ಇದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಂಡದಲ್ಲಿ ಸಂಜು ಇದ್ದರೂ ರಿಯಾನ್ ಪರಾಗ್​​ಗೆ ಯಾಕೆ ನಾಯಕತ್ವ ನೀಡಿದ್ದು ಗೊತ್ತಾ..?

ಜೆಡಿಎಸ್​ ಟ್ವೀಟ್ ಮಾಡಿ.. ಉಚಿತ ಉಚಿತ ಎನ್ನುತ್ತಲೇ ಕರೆಂಟ್ ಬಿಲ್ ಬೆಲೆ ಗಗನಕ್ಕೇರಿಸಿ ಕರ್ನಾಟಕ ಕಾಂಗ್ರೆಸ್​ ಸರ್ಕಾರ ಶಾಕ್ ಕೊಟ್ಟಿದೆ. ರಾಜ್ಯದ ಜನರಿಗೆ ಫ್ರೀ ಕರೆಂಟ್ ಎಂದು ಸುಳ್ಳುಹೇಳಿ ಅಧಿಕಾರಕ್ಕೆ ಬಂದ ತಕ್ಷಣವೇ ಕರೆಂಟ್ ಬಿಲ್ ಏರಿಸಿತ್ತು ಕಾಂಗ್ರೆಸ್‌ ಸರ್ಕಾರ. ಈಗ ರಾಜ್ಯದ ಜನರಿಗೆ 2ನೇ ಬಾರಿ ಕರೆಂಟ್‌ ಶಾಕ್‌ ಟ್ರಿಟ್‌ಮೆಂಟ್‌ ಕೊಡಲು ರೆಡಿಯಾಗಿದೆ. ಬಸ್ ದರ , ಮೆಟ್ರೋ ರೈಲು ಬಳಿಕ ವಿದ್ಯುತ್ ದರ ಏರಿಸಲು ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಸಂಚು ಮಾಡಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವೂ ಶೀಘ್ರದಲ್ಲೇ ಹೆಚ್ಚಳವಾಗುವುದು ಗ್ಯಾರಂಟಿಯಾಗಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: ಶಾಸಕರು, ಸಚಿವರಿಗೆ ಯುಗಾದಿ ಗಿಫ್ಟ್; ವೇತನ, ಭತ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ; ಎಷ್ಟು ಗೊತ್ತಾ?

ಪಿಕ್ ಪಾಕೆಟ್ ಸರ್ಕಾರ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿ.. ಈ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಎರಡೂ ಇಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ನಾಡಿನ ಜನರಿಗೆ ಕಿವಿಗೆ ಹೂವು ಮುಡಿಸಿದೆ. ಈ ನಾಡಿನ ಜನರಿಗೆ ಕಾಂಗ್ರೆಸ್ ಸರ್ಕಾರ ಮೋಸ, ವಂಚನೆ ಮಾಡ್ತಿದೆ. ಕಳೆದ 20 ತಿಂಗಳಿಂದ ಬೆಲೆ ಏರಿಕೆ ಮಾಡುವ ಮೂಲಕ ಗ್ಯಾರಂಟಿ ಕೊಡ್ತಿದ್ದಾರೆ. ಹಾಲು, ಪೆಟ್ರೋಲ್ ದರ ಏರಿಕೆ ಮಾಡ್ತಿದ್ದಾರೆ. ಇದು ಪಿಕ್ ಪಾಕೆಟ್ ಸರ್ಕಾರ. ಜನರಿಂದಲೇ ಕಿತ್ತುಕೊಂಡು ಜನರಿಗೆ ಕೊಡ್ತಿದ್ದಾರೆ. ವಿದ್ಯುತ್ ವಿಚಾರದಲ್ಲಿ ಸ್ವಲ್ಪ ಬಿಲ್ ಜಾಸ್ತಿ ಆದರೆ ಎಲ್ಲದರ ದರ ಏರಿಕೆ ಆಗ್ತಿದೆ. ತಕ್ಷಣವೇ ತಾವು ತೆಗೆದುಕೊಂಡ ನಿರ್ಧಾರದಿಂದ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ನಿರ್ಧಾರದ ಬಗ್ಗೆ ಬ್ಯಾಟ್ ಬೀಸಿರುವ ಸಂತೋಷ್ ಲಾಡ್, ಯಾರ್ಯಾರು ಶಕ್ತಿ ಸ್ಕೀಮ್​ನಲ್ಲಿದ್ದಾರೆ, ಇದು ಅನ್ವಯ ಆಗಲ್ಲ. ನೀವು 200 ಯುನಿಟ್​ಗಿಂತ ಕಡಿಮೆ ಬಳಸುವವರಿಗೆ ಅನ್ವಯ ಆಗಲ್ಲ. 36 ಪೈಸೆ ಕೇವಲ 10 ಪರ್ಸೆಂಟ್ ಜನರಿಗೆ ಮಾತ್ರ ಹೆಚ್ಚಳ ಆಗುತ್ತೆ. ಶೇಕಡಾ 90 ರಷ್ಟು ಜನರಿಗೆ ಉಚಿತವೇ ಸಿಗಲಿದೆ. ಮತ್ತೆ ಎಲ್ಲ ಕಡೆ ಹಾಗೆ ತಾನೇ ಇರೋದು. ಇಡೀ ಪ್ರಪಂಚದಲ್ಲಿ ಹಾಗೆ ಇರೋದು. ಒಂದು ಕಡೆ ತೆರಿಗೆ ಹಾಕಬೇಕು, ಇನ್ನೊಂದು ಕಡೆ ಕೊಡಬೇಕು. ಈ ದೇಶದ ಬಡವರು ಶೇಕಡಾ 64 ರಷ್ಟು ಜಿಎಸ್​ಟಿ ಕಟ್ಟುತ್ತಾರೆ. ಅವರಿಗೆ ಬಿಜೆಪಿ ಕೇಂದ್ರ ಸರ್ಕಾರ ಏನು ಕೊಟ್ಟಿದೆ? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: NIMHANS ಸಂಸ್ಥೆಯಲ್ಲಿ ಉನ್ನತ ಉದ್ಯೋಗಕ್ಕೆ ಅರ್ಜಿ ಆಹ್ವಾನ.. ಸಂಬಳ ಮಾತ್ರ ಲಕ್ಷ.. ಲಕ್ಷ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment