/newsfirstlive-kannada/media/post_attachments/wp-content/uploads/2025/03/Kannadigaru.jpg)
ನಾಳೆಯಿಂದ ಐಪಿಎಲ್-2025 ಆರಂಭವಾಗಲಿದೆ. ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಸಂಜೆ 6 ಗಂಟೆಯಿಂದ ಉದ್ಘಾಟನಾ ಸಮಾರಂಭ ಆಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಹಾಲಿ ಚಾಂಪಿಯನ್ಸ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಮಾರ್ಚ್ 22 ರಿಂದ ಮೇ 25ರವರೆಗೆ ನಡೆಯುವ ಐಪಿಎಲ್ ಜಾತ್ರೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳಲ್ಲಿ ಕರ್ನಾಟಕದ 8 ಆಟಗಾರರು ಇದ್ದಾರೆ ಅನ್ನೋದು ಇನ್ನೊಂದು ವಿಶೇಷ. ಹಾಗಾಗಿ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು, ಆರ್ಸಿಬಿ ಬೆಂಬಲ ನೀಡುವುದರ ಜೊತೆಗೆ ವಿವಿಧ ತಂಡಗಳ ಪರವಾಗಿ ಆಡುತ್ತಿರುವ ಕನ್ನಡದ ಆಟಗಾರರಿಗೂ ಬೆಂಬಲ ನೀಡಲಿದ್ದಾರೆ.
ಯಾವ ತಂಡದಲ್ಲಿ ಯಾಱರು..?
- ಡೆಲ್ಲಿ ಕ್ಯಾಪಿಟಲ್ಸ್: KL ರಾಹುಲ್, ಕರುಣ್ ನಾಯರ್, ಮನ್ವಂತ್ ಕುಮಾರ್
- ಆರ್ಸಿಬಿ: ದೇವದತ್ತ್ ಪಡಿಕ್ಕಲ್, ಮನೋಜ್ ಭಾಂಡ
- ಕೆಕೆಆರ್: ಮನೀಶ್ ಪಾಂಡೆ, ಲುವಿತ್ ಸಿಸೋಡಿಯಾ
- ಪಂಜಾಬ್: ವೈಶಾಖ್ ವಿಜಯ್‌ಕುಮಾರ್, ಪ್ರವೀಣ್ ದುಬೆ
- ಗುಜರಾತ್: ಪ್ರಸಿದ್ ಕೃಷ್ಣ
- ಹೈದ್ರಾಬಾದ್: ಅಭಿನವ್ ಮನೋಹರ್
- ಮುಂಬೈ: ಕೆ.ಎಲ್.ಶ್ರೀಜಿತ್
- ಚೆನ್ನೈ: ಶ್ರೇಯಸ್ ಗೋಪಾಲ್
ಇದನ್ನೂ ಓದಿ: ಈ ಮೂವರು ಬೌಲರ್ಸ್ ತುಂಬಾನೇ ಡೇಂಜರ್.. ಬ್ಯಾಟರ್ಗಳು ಎಚ್ಚರದಿಂದ ಆಡಬೇಕು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್