newsfirstkannada.com

70 ಮಂದಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ಮಾಹಿತಿ; ನಾಡಹಬ್ಬ ದಸರಾಗೆ ಬಿತ್ತಾ ಉಗ್ರರ ಕರಿನೆರಳು..!?

Share :

Published October 22, 2023 at 9:21am

    ದಸರಾ ಹಬ್ಬಕ್ಕೆ 3500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

    ಡಿಜಿ-ಐಜಿಪಿ ಅಲೋಕ್ ಮೋಹನ್​ರಿಂದ ಭದ್ರತೆಗೆ ಸೂಚನೆ

    ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಏನು..?

ದೇಶದಲ್ಲಿ ವಿಶ್ವಕಪ್ ಕ್ರಿಕೆಟ್ ಜ್ವರದ ಜೊತೆಗೆ ನವರಾತ್ರಿ ಹಬ್ಬದ ಸಂಭ್ರಮ ಕೂಡ ಕಳೆಗಟ್ಟಿದೆ. ಹಬ್ಬದ ಸಡಗರದ ಮಧ್ಯೆ ಉಗ್ರರಿಂದ ವಿಧ್ವಂಸಕ ಕೃತ್ಯಗಳು ನಡೆಯುವ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ತುರ್ತಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಾರೀ ಭದ್ರತೆ ಬೆನ್ನಲ್ಲೇ ನಾಡಹಬ್ಬ ದಸರಾ ಮೇಲೆಯೂ ಉಗ್ರರ ಕರಿನೆರಳು ಬಿದ್ದಿದ್ಯಾ ಅನ್ನೋ ಚರ್ಚೆ ಪ್ರಶ್ನೆ ಹುಟ್ಟಿಕೊಂಡಿದೆ.

ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಆಧಾರದ ಮೇಲೆ ರಾಜ್ಯ ಡಿಜಿ-ಐಜಿಪಿ ಅಲೋಕ್ ಮೋಹನ್ ಭದ್ರತೆಯನ್ನು ಹೆಚ್ಚಿಸಲು ಸೂಚನೆ ನೀಡಿದ್ದಾರೆ. ದಸರಾ ಹಬ್ಬಕ್ಕೆ ಈ ಬಾರಿ 3500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ರಾಜ್ಯದ ಎಲ್ಲಾ ವಲಯ ಹಾಗೂ ಸಿಐಡಿ, ಐಎಸ್ ಡಿ ಯಿಂದಲೂ ಭದ್ರತೆಗೆ ನಿಯೋಜಿಸಲಾಗಿದೆ.

ಪ್ರತಿ ಬಾರಿ ದಸರಾಗೆ 1700-2000 ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿತ್ತು. ತುರ್ತಾಗಿ ಇಂದು ಬೆಳಗ್ಗೆ 9 ಗಂಟೆಗೆ ಮತ್ತೆ 1568 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಜೊತೆಗೆ 40 CAR ತುಕಡಿಗಳು ಹಾಗೂ 30 KSRP ತುಕಡಿಗಳ ನಿಯೋಜಿಸಲಾಗಿದೆ. ಶ್ರೀರಂಗಪಟ್ಟಣ, ಕೆ.ಆರ್​ಎಸ್ ಹಾಗೂ ಮೈಸೂರು ಪೊಲೀಸರಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಗುಪ್ರಚರ ಇಲಾಖೆಯಿಂದ ಅಲರ್ಟ್ ಇರಲು ರಾಜ್ಯ ಪೊಲೀಸರಿಗೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ ಸುಮಾರು 70 ಜನರು ಅಕ್ರಮವಾಗಿ ದೇಶಕ್ಕೆ ನುಸುಳಿರೋ ಕುರಿತು ಮಾಹಿತಿ ಸಿಕ್ಕಿದ್ಯಂತೆ. ನಕಲಿ ಪಾಸ್ ಪೋರ್ಟ್ ಪಡೆದು ದೇಶದೊಳಗೆ ನುಸುಳಿರೋ ಬಗ್ಗೆ ಕೇಂದ್ರ ಐಬಿ ಟೀಂ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಡಿಜಿ ಸೂಚನೆ ಬೆನ್ನಲ್ಲೇ ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ.

ಅದರಲ್ಲೂ ವಿಶೇಷವಾಗಿ ಮೈಸೂರಿನ ಎಲ್ಲಾ ಲಾಡ್ಜ್, ಹೋಟೆಲ್, ಹೋಂ ಸ್ಟೇಗಳ ಹದ್ದಿನ ಕಣ್ಣು ಇಡಲಾಗಿದೆ. ರೂಂ ಕೇಳಿ ಬರುವಾಗ ಹೊರ ರಾಜ್ಯದವರಾದರೆ ಕೂಡಲೇ ಪೊಲೀಸರಿಗೆ ಮಾಹಿತಿ‌ ನೀಡಲು ಸೂಚನೆ ನೀಡಲಾಗಿದೆ. ಜೊತೆಗೆ ಹೋಟೆಲ್​ಗಳ ಎಲ್ಲಾ ಸಿಸಿ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡಬೇಕು. ಜೊತೆಗೆ ಯಾರೆಲ್ಲ ರೂಂ ಪಡೆಯುತ್ತಾರೆ ಅವರ ಬಳಿ ಆಧಾರ್, ವೋಟರ್ ಐಡಿ ಹಾಗೂ ಇತರೇ ದಾಖಲೆಗಳನ್ನು ಖಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಿಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

70 ಮಂದಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ಮಾಹಿತಿ; ನಾಡಹಬ್ಬ ದಸರಾಗೆ ಬಿತ್ತಾ ಉಗ್ರರ ಕರಿನೆರಳು..!?

https://newsfirstlive.com/wp-content/uploads/2023/10/MYS_AMBARI_ELEPHANTS.jpg

Load More