ದರ್ಶನ್ ಪತ್ರಕ್ಕೆ ಡೋಂಟ್​ ಕೇರ್ ಎಂದ ಪೊಲೀಸರು.. ದಾಸನಿಗೆ ಮತ್ತೊಂದು ಸಂಕಷ್ಟ..!

author-image
Gopal Kulkarni
Updated On
ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬ; ಜಾಮೀನು ಮಂಜೂರು ಬೆನ್ನಲ್ಲೇ ಫುಲ್ ಖುಷ್
Advertisment
  • ರೇಣುಕಾಸ್ವಾಮಿ ಕೇಸ್​ನಲ್ಲಿ ಆರೋಪಿಯಾಗಿರುವ ದರ್ಶನ್​ಗೆ ಶಾಕ್​
  • ದರ್ಶನ್ ಗನ್​ ಲೈಸನ್ಸ್ ರದ್ದಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ
  • ಆರ್ಮ್ಸ್​ ಆ್ಯಕ್ಟ್ ಕಾಯ್ದೆಯಡಿ ನೋಡಿದಾಗ ಲೈಸನ್ಸ್ ರದ್ದಾಗೋದು ನಿಶ್ಚಿತ

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಗನ್ ಲೈಸನ್ಸ್ ರದ್ದು ಮಾಡದಂತೆ ದರ್ಶನ್​ ಪೊಲೀಸರಿಗೆ ಪತ್ರ ಬರೆದಿದ್ದರು ದರ್ಶನ್​. ದರ್ಶನ್ ಬರೆದಿರೋ ಪತ್ರವನ್ನು ಕಮಿಷನರ್​ಗೆ ಆಡಳಿತ ವಿಭಾಗಕ್ಕೆ ಡಿಸಿಪಿ ತಲುಪಿಸಿದ್ದಾರೆ. ಸದ್ಯ ಕಮಿಷನರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ದರ್ಶನ್ ಗನ್ ಲೈಸೆನ್ಸ್ ಭವಿಷ್ಯ ನಿಂತಿದೆ. ಒಂದು ಮೂಲಗಳ ಪ್ರಕಾರ ದರ್ಶನ್ ಗನ್ ಲೈಸನ್ಸ್​ ರದ್ದಾಗೋದು ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ

ಆರ್ಮ್ಸ್ ಆ್ಯಕ್ಟ್ ಕಾಯ್ದೆ ಏನು ಹೇಳುತ್ತೆ?
ಆರ್ಮ್ಸ್​ ಆ್ಯಕ್ಟ್ ಕಾಯ್ದೆಯಲ್ಲಿ ಗನ್ ಲೈಸೆನ್ಸ್ ರದ್ದು ಮಾಡೋಕೆ ಬರುತ್ತಾ ಅಂತ ನೋಡಿದದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಕೇಸ್ ಇದ್ದರೆ ಗನ್ ಲೈಸನ್ಸ್​ ರದ್ದು ಮಾಡೋದ ಅಧಿಕಾರ ಆರ್ಮ್ಸ್ ಆ್ಯಕ್ಟ್ 1959(10)ರ ಅಡಿಯಲ್ಲಿ ಪೊಲೀಸರಿಗೆ ಅಧಿಕಾರ ಇರುತ್ತದೆ. ಇದರ ಬಗ್ಗೆ ಆರ್ಮ್ಸ್ ಆ್ಯಕ್ಟ್​ 1959(10)ರಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಕೊಲೆ ಕೇಸ್​ನಲ್ಲಿ ದರ್ಶನ್ ಇನ್ನೂ ಆರೋಪಿಯಾಗಿದ್ದು ಗನ್ ಲೈಸನ್ಸ್​ ರದ್ದು ಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ ಭಾರತ.. ಖೋ ಖೋದಲ್ಲಿ ಮಹಿಳೆಯರು, ಪುರುಷರು ಇಬ್ಬರಿಗೂ ವರ್ಲ್ಡ್​​​ಕಪ್

ಬಹುತೇಕ ಕೆಲವೇ ದಿನಗಳಲ್ಲಿ ನಟ ದರ್ಶನ್ ಗನ್ ಲೈಸನ್ಸ್ ರದ್ದಾಗೋದು ಬಹುತೇಕ ಫಿಕ್ಸ್. ಯಾವ ಕಾರಣಗಳಿಂದ ಗನ್​ ಲೈಸನ್ಸ್​ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂದು ನೋಡುವುದಾದ್ರೆ. ದರ್ಶನ್ ಓರ್ವ ಖ್ಯಾತನ ನಟನಾಗಿದ್ದು ಸಾಕಷ್ಟು ಅಭಿಮಾನಿ ಪಡೆಯನ್ನು ಹೊಂದಿದ್ದಾರೆ. ತನ್ನ ಗನ್​ನಿಂದ ಸಾಕ್ಷಿಗಳನ್ನು ಹೆದರಿಸಬಹುದು. ಅದೇ ಗನ್ ಅಭಿಮಾನಿಗಳಿಗೆ ಕೊಟ್ಟು ಕೇಸ್ ಎದುರಿಸಬಹುದು ಅಥವಾ ಸಾಕ್ಷಿಗಳ ಮುಂದೆ ಗನ್ ಪ್ರದರ್ಶನ ಮಾಡುವ ಮೂಲಕ ಬೆದರಿಕೆ ಹಾಕಬಹುದು. ಅದೇ ಗನ್ ಇಟ್ಟುಕೊಂಡು ಬೇರೆ ಅಪರಾಧ ಕೃತ್ಯಗಳನ್ನು ನಡೆಸಬಹುದು. ಕೇಸ್ ಇದ್ದು ಅದು ಇನ್ನೇನು ಟ್ರಯಲ್ ಹಂತಕ್ಕೆ ಬರ್ತಾ ಇದ್ದು, ಈ ವೇಳೆ ಗನ್ ಇಟ್ಟುಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಇವೆಲ್ಲಾ ಕಾರಣಗಳೊಂದಿಗೆ ಕಾನೂನು ಪ್ರಕಾರ ಗನ್ ಲೈಸನ್ಸ್ ರದ್ದು ಮಾಡುವ ಅಧಿಕಾರ ಪೊಲೀಸರಿಗೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment