newsfirstkannada.com

ಲೋಕಸಭಾ ಚುನಾವಣೆಗೆ ಪೊಲೀಸ್​ ಬಂದೋಬಸ್ತ್​​; ಈ 5 ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣು!

Share :

Published April 24, 2024 at 6:05am

    ನಗರದಲ್ಲಿನ ಬಂದೋಬಸ್ತ್​​ಗೆ ಹೆಚ್ಚುವರಿ ಪೊಲೀಸರ ನಿಯೋಜನೆ

    ಐದು ಲೋಕಸಭಾ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಟ್ಟ ಅಧಿಕಾರಿಗಳು

    ಬೆಂಗಳೂರಿನ ಮಲ್ಲೇಶ್ವರಂನ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ

ಬೆಂಗಳೂರು: ಚುನಾವಣಾ ಕಣ ರಂಗೇರಿದೆ. ಕದನ ಕಲಿಗಳು ತಮ್ಮ ಗೆಲುವಿಗಾಗಿ ಹೋರಾಟ ನಡೆಸ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಮೊದಲ ಹಂತದ ಮತದಾನವೂ ನಡೆಯಲಿದೆ. ಎಲ್ಲೆಲ್ಲೂ ಎಲೆಕ್ಷನ್​ ಕಾವು ಜೋರಾಗಿದೆ. ಇದೆಲ್ಲದರ ಮಧ್ಯೆ ಚುನಾವಣಾ ಅಧಿಕಾರಿಗಳ ಪೂರ್ವ ಸಿದ್ಧತೆ ಜೋರಾಗಿದೆ. ಲೋಕಸಭಾ ಚುನಾವಣೆ 2024. ಇದೇ ಈ ಎಲ್ಲಾ ಗೌಜಿಗೆ ಮೂಲ ಕಾರಣ. ಇದೀಗ, ಮತದಾನಕ್ಕೆ ಸಜ್ಜಾದ ಅಖಾಡಕ್ಕೆ ಚುನಾವಣಾಧಿಕಾರಿಳು ಎಂಟ್ರಿ ಆಗಿದ್ದು, ಸಭೆ ನಡೆಸಿ ರಂಗಪ್ರವೇಶಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಅಬ್ಬಾ! ಬೆಂಗಳೂರಲ್ಲಿ ಸಾವಿನ ದವಡೆಯಿಂದ ಜಸ್ಟ್ ಮಿಸ್‌ ಆದ ವೈದ್ಯ ದಂಪತಿ; ಈ ಬಗ್ಗೆ ಹೇಳಿದ್ದೇನು?

ಬೆಂಗಳೂರಿನ ಮಲ್ಲೇಶ್ವರಂನ ಪಾಲಿಕೆ ಕಚೇರಿಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳ observers ಭಾಗಿಯಾಗಿದ್ದು, 26 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದಾರೆ. ನಗರದ 5 ಲೋಕಸಭಾ ಕ್ಷೇತ್ರದಲ್ಲಿ 6351 ಸಾಮಾನ್ಯ ಮತಗಟ್ಟೆಗಳಿದ್ದು, 1737 ಸೂಕ್ಷ್ಮ ಮತಗಟ್ಟೆಗಳಿವೆ. ಒಟ್ಟು 5 ಲೋಕಸಭಾ ಕ್ಷೇತ್ರದಲ್ಲಿ 8088 ಮತಗಟ್ಟೆಗಳಿವೆ.

ಹೇಗಿರಲಿದೆ ಪೊಲೀಸ್​ ಬಂದೋಬಸ್ತ್?

ಹೆಚ್ಚಿನ ಬಂದೋಬಸ್ತ್​​ಗೆ ಒಬ್ಬರು ನಗರ ಪೊಲೀಸ್ ಕಮಿಷನರ್, 3 ಜನ ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರನ್ನ ನಿಯೋಜಿಸಲಾಗಿದೆ. ಇನ್ನು, 24 ಜನ ಡಿಸಿಪಿ, 52 ಜನ ಎಸಿಪಿ, 118 ಜನ ಇನ್ಸ್​ಪೆಕ್ಟರ್‌, 687 ಪಿಎಸ್ಐ ಅಥವಾ ಎಎಸ್ಐ, 8511 ಹೆಡ್ ಕಾನ್ಸ್​ಟೇಬಲ್ ಅಥವಾ ಪಿಸಿ, 3919 ಹೋಂ ಗಾರ್ಡ್ಸ್​​, 11 ಕೇಂದ್ರೀಯ ಪೊಲೀಸ್ ಪಡೆ, 54 ಕೆಎಸ್ಆರ್​ಪಿ ಅಥವಾ ಸಿಎಆರ್ ತುಕಡಿಗಳನ್ನ ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಚುನಾವಣಾ ಅಖಾಡದ ಜೊತೆಗೆ ಚುನಾವಣಾ ತಯಾರಿ ಕೂಡ ಸಾಕಷ್ಟು ಸದ್ದು ಮಾಡ್ತಾಯಿದ್ದು, ಮತಮಹಾಯುದ್ಧಕ್ಕೆ ಮತದಾನ ಪ್ರಭುಗಳು ಕೂಡ ಎಂಟ್ರಿಕೊಟ್ಟು ಯೋಗ್ಯ ಜನಪ್ರತಿನಿಧಿಯನ್ನ ಆಯ್ಕೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆಗೆ ಪೊಲೀಸ್​ ಬಂದೋಬಸ್ತ್​​; ಈ 5 ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣು!

https://newsfirstlive.com/wp-content/uploads/2024/04/police-karnataka.jpg

Load More