ತನ್ನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಜೀವ ಬಿಟ್ಟ ಪೊಲೀಸ್​ ಅಧಿಕಾರಿ; ಕಾರಣವೇನು?

author-image
Ganesh Nachikethu
Updated On
ತನ್ನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಜೀವ ಬಿಟ್ಟ ಪೊಲೀಸ್​ ಅಧಿಕಾರಿ; ಕಾರಣವೇನು?
Advertisment
  • ಕಳೆದ ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಎಸ್​ಐ
  • ಅಥಣಿ ತಾಲೂಕಿನ ಸ್ವಗ್ರಾಮ ಅನಂತಪೂರದ ಮನೆಯಲ್ಲಿ ನೇಣಿಗೆ ಶರಣು
  • ಐಗಳಿ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿ ಕಾರ್ಯನಿವರ್ಹಿಸುತ್ತಿದ್ದರು

ಚಿಕ್ಕೋಡಿ: ಐಗಳಿ ಪೊಲೀಸ್​​ ಠಾಣೆ ಎಎಸ್​ಐ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸ್ವಗ್ರಾಮ ಅನಂತಪೂರದ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.

ಇನ್ನು, ಸೂಸೈಡ್​ ಮಾಡಿಕೊಂಡ ಎಎಸ್​ಐ (50) ಶಂಭು ಮೆತ್ರಿ. ಇವರು ಅಥಣಿ ತಾಲೂಕಿನ ಐಗಳಿ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿ ಕಾರ್ಯನಿವರ್ಹಿಸುತ್ತಿದ್ದರು.

ಕಳೆದ ಹಲವು ತಿಂಗಳಿಂದ ಶಂಭು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಜೀವನದ ಮೇಲೆ ಜಿಗುಪ್ಸೆ ಬಂದು ಪ್ರಾಣಬಿಟ್ಟಿದ್ದಾರೆ ಎನ್ನುತ್ತಿವೆ ಪೊಲೀಸ್​ ಮೂಲಗಳು. ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದುರಹಂಕಾರ ತೋರಿಸಿ ಭಾರತಕ್ಕೆ ಮುಜುಗರ ತಂದ ಜೈಸ್ವಾಲ್​ಗೆ ಸಿಕ್ತು ತಕ್ಕ ಶಾಸ್ತಿ; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment