/newsfirstlive-kannada/media/post_attachments/wp-content/uploads/2025/02/KLB_MARKS_CORDS_1.jpg)
ವಿದ್ಯಾರ್ಥಿಗಳೇ ಹುಷಾರ್.. ಹುಷಾರ್.. ಹಣ ಕೊಟ್ಟು ನಕಲಿ ಅಂಕಪಟ್ಟಿಗಳನ್ನ ಪಡೆದುಕೊಳ್ಳುವ ಮುನ್ನ ಈ ಸ್ಟೋರಿಯನ್ನೊಮ್ಮೆ ಮಿಸ್ ಮಾಡದೇ ಓದಿ. ಯಾಕಂದ್ರೆ ದೇಶದ 28ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ಬೃಹತ್ ಜಾಲವಿದ್ದು, ಭೋಗಸ್ ಅಂಕಪಟ್ಟಿ ಜಾಲವನ್ನ ಕಲಬುರಗಿ ಪೊಲೀಸರು ಬೇಧಿಸಿದ್ದಾರೆ. ಅಷ್ಟಕ್ಕೂ ಈ ನಕಲಿ ಅಂಕಪಟ್ಟಿ ತಯಾರಿಸುವ ಜಾಲ ಎಲ್ಲೆಲ್ಲಿ, ಹೇಗೆಲ್ಲಾ ಕೆಲಸ ಮಾಡುತ್ತಿದೆ ಅನ್ನೋದರ ಮಾಹಿತಿ ಇಲ್ಲಿದೆ.
ಬೋಗಸ್ ಮಾರ್ಕ್ಸ್ ಕಾರ್ಡ್ಗಳು. ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಲ್ಲಿ ನಕಲಿ ಅಂಕಪಟ್ಟಿಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನ ಕಲಬುರಗಿ ನಗರದ ಸೆನ್ ಠಾಣೆ ಪೊಲೀಸರು ಎಡೆಮುರಿಕಟ್ಟಿದ್ದಾರೆ.
ಕಲಬುರಗಿ ನಗರದ ಸೆನ್ ಠಾಣೆ ಪೊಲೀಸರ ಭರ್ಜರಿ ಬೇಟೆ
ರಾಜೀವ್ ಸಿಂಗ್ ಅರೋರಾ ಎನ್ನುವ ವ್ಯಕ್ತಿ ದೆಹಲಿ ಮೂಲದವನು. ಫೇಕ್ ಸರ್ಟಿಫಿಕೆಟ್ ಕೇಸ್ನ ಕಿಂಗ್‌ಪಿನ್. ಬೆಂಗಳೂರು ವಿವಿ, ರಾಜ್ಯದ ಮುಕ್ತ ವಿಶ್ವವಿದ್ಯಾಲಯ ಸೇರಿ ದೇಶದ 28 ವಿಶ್ವವಿದ್ಯಾಲಯಗಳ ಹೆಸರಲ್ಲಿ ಥೇಟ್ ಆಗಿ ಓರಿಜಿನಲ್ ಮಾರ್ಕ್ಸ್ಕಾರ್ಡ್ಗಳಂತೆ ಈ ಖದೀಮ ಬೋಗಸ್ ಅಂಕಪಟ್ಟಿ ತಯಾರಿಸಿ ಹಣಕ್ಕೆ ಮಾರಾಟ ಮಾಡುತ್ತಿದ್ದ. ಕಾನ್ವೊಕೇಷನ್ ಸರ್ಟಿಫಿಕೇಟ್‌ಗಳನ್ನ ಸಹ ಸಿದ್ಧಪಡಿಸಿ ನಿರುದ್ಯೋಗಿ ಯುವಕರನ್ನ ಟಾರ್ಗೆಟ್ ಮಾಡಿ ಸೆಳೆದು ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಕಲಬುರಗಿ ಪೊಲೀಸರ ಚಾಣಾಕ್ಷತನದಿಂದ ದೆಹಲಿಯ ರಾಮ್ ಪಾರ್ಕ್ ಅಪಾರ್ಟ್ಮೆಂಟ್‌ನಲ್ಲಿ ರಾಜೀವ್ ನನ್ನ ಲಾಕ್ ಮಾಡಿದ್ದಾರೆ.
ಉನ್ನತ ವ್ಯಾಸಂಗದ ಮಾರ್ಕ್ಸ್ ಕಾರ್ಡ್ಸ್
ಕಳೆದ 8 ವರ್ಷಗಳಿಂದ ನಕಲಿ ಅಂಕಪಟ್ಟಿ ತಯಾರಿ ಮಾಡ್ತಿದ್ದ ಆರೋಪಿ
ಕರ್ನಾಟಕ ಸೇರಿ ದೇಶದ ವಿವಿಧೆಡೆ ಜಾಲ ವಿಸ್ತರಿಸಿದ್ದ ರಾಜೀವ್ ಸಿಂಗ್
ಡಿಪ್ಲೊಮಾ ಇನ್ ಎಜುಕೇಶನ್, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
ಪಿಯುಸಿ, ಡಿಪ್ಲೊಮಾ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ
ಬಿಟೆಕ್ ಸೇರಿ ಹಲವು ಕೋರ್ಸ್‌ಗಳ ನಕಲಿ ಅಂಕಪಟ್ಟಿ ಸಿದ್ಧಪಡಿಸುತ್ತಿದ್ದ
ಆನ್‌ಲೈನ್ ಮೂಲಕ ದಂಧೆ ನಡೆಸುತ್ತಿದ್ದ ರಾಜೀವ್ ಸಿಂಗ್ ಅರೋರಾ
ಸರ್ಕಾರಿ ಕೆಲಸದ ಬದಲು ಖಾಸಗಿ ಕೆಲಸಕ್ಕೆ ಮಾತ್ರ ಬಳಸಿಕೊಳ್ಳಲು ಸೂಚನೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧನ
ಬಂಧಿತನಿಂದ 522 ನಕಲಿ ಅಂಕಪಟ್ಟಿ, 1622 ಖಾಲಿ ಅಂಕಪಟ್ಟಿ, ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್‌ಗಳು, 36 ಮೊಬೈಲ್, 2 ಲ್ಯಾಪ್‌ಟಾಪ್, 123 ನಕಲಿ ಐಡಿ ಕಾರ್ಡ್, 85 ಬ್ಯಾಂಕ್ ಅಕೌಂಟ್ ಪಾಸ್‌ಬುಕ್ ಸೇರಿದಂತೆ ಹಲವು ವಸ್ತುಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ.
ನಕಲಿ ಅಂಕಪಟ್ಟಿ ತಯಾರು ಮಾಡುತ್ತಿದ್ದ ಕಿಂಗ್‌ಪಿನ್ ಅನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಿದ್ದು, ನಕಲಿ ಅಂಕಪಟ್ಟಿಯ ಸಂಪೂರ್ಣ ಜಾಲ ಭೇದಿಸಲು ಪೊಲೀಸರು ಮುಂದಾಗಿದ್ದಾರೆ. ಆರೋಪಿ ಅರೋರಾ ಬಳಿ ನಕಲಿ ಅಂಕಪಟ್ಟಿ ಖರೀದಿಸಿದವರಿಗೂ ಇದೀಗ ಬಂಧನ ಭೀತಿ ಶುರುವಾಗಿದೆ. ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದ ಕಿಂಗ್‌ಪಿನ್ ಅನ್ನ ಕಲಬುರಗಿ ಪೊಲೀಸರು ಬಂಧಿಸಿದ್ದು, ನಿಜಕ್ಕೂ ಶ್ಲಾಘನೀಯ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ