/newsfirstlive-kannada/media/post_attachments/wp-content/uploads/2024/11/Guruprasad_NEW.jpg)
ಬೆಂಗಳೂರು: ಕನ್ನಡಕ್ಕೆ ಹತ್ತು ಹಲವು ಸಿನಿಮಾಗಳನ್ನ ನೀಡಿದ್ದ ಸ್ಟಾರ್ ಡೈರೆಕ್ಟರ್ ಗುರು ದುರಂತ ನಾಯಕನಾಗಿ ಅಂತ್ಯ ಕಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರೋ ಕುರಿತು ದೃಢವಾಗಿದೆ. 72 ತಾಸಿಗೂ ಮುನ್ನಾ ಅವರು ಸಾವಿಗೀಡಾಗಿರೋದಾಗಿಯೂ ಮಾಹಿತಿ ಬಯಲಾಗಿದೆ. ಇನ್ನೊಂದ್ಕಡೆ ಹೆಚ್ಚಿನ ತನಿಖೆಗೆ ಮುಂದಾಗಿರೋ ಪೊಲೀಸರು ಗುರುಪ್ರಸಾದ್ ಬಳಸ್ತಾ ಇದ್ದ ಟ್ಯಾಬ್, ಪೋನ್ FSLಗೆ ರವಾನಿಸಲಾಗಿದ್ದು, ಇಡೀ ಫ್ಲ್ಯಾಟ್ ಶೋಧ ಕಾರ್ಯ ಮಾಡಲಾಗಿದೆ.
‘ಗುರುಪ್ರಸಾದ್’ ಮಠ, ಎದ್ದೇಳು ಮಂಜುನಾಥ್ ಅನ್ನೋ ಹಿಟ್ ಸಿನಿಮಾಗಳನ್ನ ಕನ್ನಡಕ್ಕೆ ಕೊಟ್ಟ ಸ್ಟಾರ್ ಡೈರೆಕ್ಟರ್. ಬಾರದ ಲೋಕಕ್ಕೆ ತೆರಳಿ ತಮ್ಮ ಜೀವನದ ಕಥೆಗೆ ತಾವೇ ಅಂತ್ಯ ಹಾಡಿದ್ರು. ಆದ್ರೆ ಪತಿ ಸಾವಿನ ಬಗ್ಗೆ ಎರಡನೇ ಪತ್ನಿ ಅನುಮಾನ ವ್ಯಕ್ತಪಡಿಸಿದ್ದು, ‘ನನ್ನ ಪತಿ ಸಾಲ ಮಾಡಿಕೊಂಡಿದ್ರು ನಿಜ. ಆದ್ರೆ ಸಾಲಕ್ಕೆ ಹೆದರುವವರಲ್ಲ ಅಂತ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ, ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿದ್ರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ.
72 ತಾಸಿಗೂ ಮುನ್ನ ಸಾವನ್ನಪ್ಪಿರೋದು ವರದಿಯಲ್ಲಿ ಬೆಳಕಿಗೆ
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಗುರುಪ್ರಸಾದ್ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಯೇ ಸಾವನ್ನಪ್ಪಿರುವುದಾಗಿ ದೃಢವಾಗಿದೆ. ಹಾಗೆಯೇ ಅವರು ಸಾವನ್ನಪ್ಪಿ 72 ತಾಸು ಕಳೆದಿರೋದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಇದೇ ಮಾಹಿತಿ ಮೇರೆಗೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂದು ತನಿಖೆ ಮುಂದುವರಿಸಿರೋ ಪೊಲೀಸರು ನಟನ ಟ್ಯಾಬ್, ಪೋನ್ FSLಗೆ ರವಾನಿಸಿದ್ದಾರೆ. ಅಲ್ಲದೆ ಇವ್ರು ಆತ್ಮಹತ್ಯೆ ಮಾಡ್ಕೊಂಡಿದ್ದ ಇಡೀ ಫ್ಲ್ಯಾಟ್ ಶೋಧ ನಡೆಸಿದ್ದಾರೆ.
ಆತ್ಮಹತ್ಯೆ ತನಿಖೆ ಚುರುಕು
ದೇಹದಲ್ಲಿ ಸೇರಿರುವ ರಾಸಾಯನಿಕ ವಸ್ತುವನ್ನ ಎಫ್ಎಸ್ಎಲ್ಗೆ ರವಾನಿಸಲಾಗಿದೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿರಬಹುದಾ? ಅನ್ನೊ ಶಂಕೆ ಹಿನ್ನೆಲೆ ಗುರುಪ್ರಸಾದ್ ಇದ್ದ ಇಡೀ ಫ್ಲ್ಯಾಟ್ನಲ್ಲಿ ಡೆತ್ ನೋಟ್ಗಾಗಿ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ, ಈ ವೇಳೆ ಪೊಲೀಸರಿಗೆ ಫ್ಲ್ಯಾಟ್ನಲ್ಲಿ ಯಾವ ಪತ್ರ, ಡೆತ್ನೋಟ್ ಕೂಡ ಸಿಕ್ಕಿಲ್ಲ. ಬದಲಾಗಿ ಫ್ಲ್ಯಾಟ್ನಲ್ಲಿ 4 ಮೊಬೈಲ್, 2 ಟ್ಯಾಬ್, ಒಂದು ಲ್ಯಾಪ್‌ಟಾಪ್ ಪತ್ತೆಯಾಗಿದೆ. 4 ದಿನಗಳಿಂದ ಚಾರ್ಜ್ ಮಾಡದ ಹಿನ್ನೆಲೆ ಮೊಬೈಲ್ ಸ್ವಿಚ್ ಆಫ್ ರೀತಿಯಲ್ಲಿ ಸಿಕ್ಕಿದ್ದು, ಗುರುಪ್ರಸಾದ್ ಪೋನ್, ಟ್ಯಾಬ್ ರಿಟ್ರೀವ್ಗೆ ಪೊಲೀಸರು ಮುಂದಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯ CDR ಮಾಹಿತಿ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಕಳೆದೊಂದು ತಿಂಗಳಿನಿಂದ ಹೆಚ್ಚೆಚ್ಚು ಯಾರ ಬಳಿ ಮಾತನಾಡಿದ್ದಾರೆ? ಗೂಗಲ್ ಪೇ ಮತ್ತು ಪೋನ್ ಪೇನಲ್ಲಿ ಹಣ ಕಳುಹಿಸಿದ್ದರ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಗುರು ಪ್ರಸಾದ್ಗೆ ಆರ್ಥಿಕ ಸಮಸ್ಯೆ ಇತ್ತು. ಅಲ್ದೆ 3 ಕೋಟಿ ರೂಪಾಯಿ ಸಾಲ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಹಣ ಕೊಟ್ಟವರ ಒತ್ತಡ ಇತ್ತಾ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ.
ಗುರುಪ್ರಸಾದ್ ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಆದ್ರೆ ಸೂಸೈಡ್ ಮಾಡ್ಕೊಳ್ಳೋದಕ್ಕೆ ಅಸಲಿ ಕಾರಣಗಳೇನು? ಅನ್ನೋದು ಪೊಲೀಸರ ತನಿಖೆ ಬಳಿಕವಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ; ಇಬ್ಬರಿಗೆ ಗೇಟ್ಪಾಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ