ರಾಹುಲ್ ಗಾಂಧಿಗೆ ಒಂದು ಮನವಿ, 2 ರಿಪೋರ್ಟ್ ಸಲ್ಲಿಕೆ.. ಕುತೂಹಲ ಮೂಡಿಸಿದ ಡಿಕೆಶಿ ದಿಢೀರ್ ಭೇಟಿ

author-image
Ganesh
Updated On
ರಾಹುಲ್ ಗಾಂಧಿಗೆ ಒಂದು ಮನವಿ, 2 ರಿಪೋರ್ಟ್ ಸಲ್ಲಿಕೆ.. ಕುತೂಹಲ ಮೂಡಿಸಿದ ಡಿಕೆಶಿ ದಿಢೀರ್ ಭೇಟಿ
Advertisment
  • ದೆಹಲಿಯಲ್ಲಿ ರಾಹುಲ್ ಗಾಂಧಿ-ಡಿಸಿಎಂ ಡಿಕೆಶಿ ಭೇಟಿ
  • ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಡಿಕೆ-ರಾಹುಲ್ ಚರ್ಚೆ
  • ರಾಹುಲ್ ಗಾಂಧಿ ಭೇಟಿಯಾಗಿ ಡಿಕೆ ಶಿವಕುಮಾರ್ ಏನಂದ್ರು?

ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ.. ಕೆಪಿಸಿಸಿ ಪಟ್ಟದ ಪೈಪೋಟಿ ಕೊಂಚ ಸೈಲೆಂಟ್ ಆಗಿದೆ. ಸದನದ ಕಾವಿನಲ್ಲಿ ಕೈನೊಳಗಿನ ಫೈಟ್ ಈಗ ಕಮ್ಮಿಯಾಗಿದೆ. ಇದ್ರ ಮಧ್ಯೆ ಡಿ.ಕೆ. ಶಿವಕುಮಾರ್ ಡೆಲ್ಲಿಯಾತ್ರೆ ಮಾಡಿದ್ದಾರೆ. ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಒಂದು ಮನವಿ, 2 ರಿಪೋರ್ಟ್‌ಗಳನ್ನ ಸಲ್ಲಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್‌ ಅಧಿವೇಶನದ ಮಧ್ಯದಲ್ಲೂ ದೆಹಲಿಯಾತ್ರೆಗೆ ಹೋಗಿದ್ದಾರೆ. ಈ ವೇಳೆ ಎಐಸಿಸಿ ನಾಯಕ ರಾಹುಲ್ ಗಾಂಧಿಯನ್ನ ಭೇಟಿ ಮಾಡಿದ್ದಾರೆ. ಹೈಕಮಾಂಡ್ ನಾಯಕನ ಮುಂದೆ ಒಂದು ಮನವಿಯನ್ನ ಮಾಡಿದ್ದಾರೆ. 2 ರಿಪೋರ್ಟ್‌ಗಳನ್ನ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಡಿಕೆಶಿ-ರಾಹುಲ್ ಮಾತುಕತೆ ಬಗ್ಗೆ ಕಾಂಗ್ರೆಸ್‌ನ ಮತ್ತೊಂದು ಬಣಕ್ಕೆ ಕೌತುಕ ಶುರುವಾಗಿದೆ. ಹಾಗಾದ್ರೆ ಡಿಕೆಶಿ ರಾಹುಲ್ ಜೊತೆ ಚರ್ಚಿಸಿದ್ದೇನು..?

ಇದನ್ನೂ ಓದಿ: 2025ರ ಐಪಿಎಲ್​​; ಮುಂಬೈ ಇಂಡಿಯನ್ಸ್​ಗೆ ಸೂರ್ಯಕುಮಾರ್​​ ಯಾದವ್​ ಕ್ಯಾಪ್ಟನ್​​

ಚರ್ಚಿಸಿದ್ದೇನು?

  • ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಡಿಕೆ-ರಾಹುಲ್ ಚರ್ಚೆ
  • ರಾಜ್ಯದಲ್ಲಿ ಅಧಿವೇಶನ ಹಿನ್ನೆಲೆ, ಸಚಿವರು ಸೈಲೆಂಟ್ ಆಗಿದ್ದಾರೆ
  • ಸಚಿವರ ರಿಪೋರ್ಟ್ ಕಾರ್ಡ್ ಕೂಡ ನಿಮಗೆ ನೀಡಲಾಗಿದೆ
  • ಅಧಿವೇಶನದ ಬಳಿಕ ಸಂಪುಟ ಪುನಾರಚನೆಯಾದರೆ ಉತ್ತಮ
  • ಪಕ್ಷದ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ನೀವು ಬರಬೇಕು
  • ತೆರಿಗೆ ವಿಚಾರವಾಗಿ ಕೇಂದ್ರ ತಾರತಮ್ಯ ಧೋರಣೆ ಮುಂದುವರಿಸಿದೆ
  • ಕ್ಷೇತ್ರ ಪುನರ್​ವಿಂಗಡಣೆ ವಿಚಾರವಾಗಿ ದಕ್ಷಿಣ ರಾಜ್ಯಗಳ ಸಭೆ ಇದೆ
  • ವಿಧಾನ ಪರಿಷತ್​ಗೆ ನಾಮನಿರ್ದೇಶನ ವಿಳಂಬವಾಗಿದೆ, ಗಮನ ಹರಿಸಿ

ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ತಾವು ಮಾಡಿರೋ ಚರ್ಚೆಯ ಬಗ್ಗೆ ಸುಳಿವು ನೀಡಿದ್ರು. ಜೊತೆಗೆ ಸಚಿವರ ಪ್ರವಾಸದ ಹೊಣೆಯ ಬಗ್ಗೆಯೂ ಮಾಹಿತಿ ನೀಡಿದ್ರು.

ಎಲ್ಲಾ ಸಚಿವರು ಕಡ್ಡಾಯವಾಗಿ ವರ್ಕರ್ಸ್​ ಮೀಟಿಂಗ್ ಮಾಡಬೇಕು. ಅವರ ಕೆಲಸ ಕಾರ್ಯಗಳ ಬಗ್ಗೆ ಫೋಟೋ ಜೊತೆಗೆ ರೆಕಾರ್ಡ್ಸ್​ ಕೊಡಬೇಕು ಅಂತಾ ಹೇಳಿದ್ದಾರೆ. ಅದೆಲ್ಲವನ್ನೂ ಕಳುಹಿಸಿಕೊಡ್ತೀನಿ. ಅಧಿಕಾರ ಹಂಚಿಕೆ ಬಗ್ಗೆ ಯಾವುದನ್ನೂ ನಾನು ಕೇಳೋಕೆ ಹೋಗಿಲ್ಲ. ಚರ್ಚೆಯೂ ಆಗಿಲ್ಲ. ಲೋಕಲ್ ಬಾಡಿ ಎಲೆಕ್ಷನ್​ಗಳನ್ನು ಬೇಗ ಮಾಡಿ ಎಂದಿದ್ದಾರೆ. ಅದನ್ನೂ ಮಾಡ್ತೀವಿ. -ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ

ಕೆಲ ಸಚಿವರ ಕೆಪಿಸಿಸಿ ಪೈಪೋಟಿ, ಸಿಎಂ ಕುರ್ಚಿಯ ಕದನದ ಬಗ್ಗೆಯೂ ರಾಹುಲ್ ಗಾಂಧಿ ಮುಂದೆ ಡಿಕೆಶಿ ಚರ್ಚೆ ಮಾಡಿರೋ ಸಾಧ್ಯತೆ ಇದೆ. ಹೀಗಾಗಿ ಡಿಕೆ ವಿರುದ್ಧ ಸೆಟೆದು ನಿಂತಿರೋ ಕೆಲ ಸಚಿವರಿಗೆ ಹೈಕಮಾಂಡ್‌ನಿಂದ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತಾ? ಲೆಟ್ಸ್ ವೇಯ್ಟ್ ಅಂಡ್ ವಾಚ್.

ಇದನ್ನೂ ಓದಿ: ಆಧಾರ್​ ಕಾರ್ಡ್​​ ಅಪ್ಡೇಟ್​​ ಮಾಡಲು ಮತ್ತೊಂದು ಅವಕಾಶ; ನೀವು ಮಾಡಬೇಕಿರುವುದು ಇಷ್ಟೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment