newsfirstkannada.com

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ; ಮುಂದಿನ ವರ್ಷದಿಂದಲೇ KPS ಸ್ಕೂಲ್..!

Share :

Published February 15, 2024 at 12:16pm

    ಆರಗ ಜ್ಞಾನೇಂದ್ರರಿಂದ ಸರ್ಕಾರಕ್ಕೆ ಒತ್ತಾಯ

    IAS ಅಧಿಕಾರಿಗಳ ಕೇಳಿಕೊಂಡು ಕೂರಬಾರದು-ಜ್ಞಾನೇಂದ್ರ

    ಮಧು ಬಂಗಾರಪ್ಪರಿಂದ KPS ಬಗ್ಗೆ ಭರವಸೆ

ವಿಧಾನಸಭೆ: ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಿ ಎಂದು ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಜ್ಞಾನೇಂದ್ರ ಮಾತನಾಡಿ..ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪೋಷಕರು ಕೇಳುತ್ತಿದ್ದಾರೆ. ಆಂಗ್ಲ ಮಾಧ್ಯಮ ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವುದಿಲ್ಲ. ಹೀಗಾದಾಗ ಸರ್ಕಾರಿ ಶಾಲೆಗಳನ್ನು ಉಳಿಸೋದು ಹೇಗೆ? ನೀವು ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಕೊಡಿ. ನಾವು ಶಾಲೆಗಳನ್ನು ಉಳಿಸುತ್ತೇವೆ. ಐಎಎಸ್ ಅಧಿಕಾರಿಗಳನ್ನು ಕೇಳಿಕೊಂಡು ಕೂರಬಾರದು. ಐಎಎಸ್ ಅಧಿಕಾರಿಗಳ ಮಕ್ಕಳಿಗೆ ಮಾತ್ರ ಉತ್ತಮ ವಿದ್ಯಾಭ್ಯಾಸ ಸಿಗಬೇಕಾ? ಅವರ ಮಕ್ಕಳು ಐಎಎಸ್ ಆಗಬೇಕು. ಬಡ ಮಕ್ಕಳನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಆರಗ ಜ್ಞಾನೇಂದ್ರ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರಿಸಿ.. ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಪೋಷಕರೇ ಇಂಗ್ಲಿಷ್ ಮಾಧ್ಯಮ ಬೇಕು ಅಂತಿದ್ದಾರೆ. ಆಂಗ್ಲ ಮಾಧ್ಯಮ ಇಲ್ಲ ಎಂದು ವಿದ್ಯಾರ್ಥಿಗಳ ಕೊರತೆ ಕಂಡು ಬರುತ್ತಿದೆ. ಇದು ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಈ ಕೊರತೆ ಇದೆ. ಎಲ್ಲ ಜಿಲ್ಲೆಗಳಿಂದ ಇಂಗ್ಲಿಷ್ ಮಾಧ್ಯಮಕ್ಕೆ ಬೇಡಿಕೆ ಇದೆ.

ಆದರಿಂದ ನಮ್ಮ ಸರ್ಕಾರ ಈಗಾಗಲೇ ಒಂದು ನಿರ್ಧಾರ ಮಾಡಿದೆ. ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆ ತೆರೆಯಲು ಸಿದ್ಧತೆ ನಡೆಯುತ್ತಿದೆ. ಸಿಎಸ್​ಆರ್ ಫಂಡ್​​ನಲ್ಲಿ ಈ ಶಾಲೆ ತೆರೆಯುತ್ತಿದ್ದೇವೆ. ಅಂತಿಮ ಹಂತಕ್ಕೆ ಇದರ ಸಿದ್ಧತೆ ನಡೆಯುತ್ತಿದೆ. ಎರಡು ಅಥವಾ ಮೂರು ಪಂಚಾಯಿತಿ ನಡುವೆ ಈ ಶಾಲೆಗಳು ಇರುತ್ತವೆ. ಖಂಡಿತವಾಗಿ ಕನ್ನಡ ಮತ್ತು ಇಂಗ್ಲಿಷ್ ‌ಕಲಿಸಲು ಪ್ರಯತ್ನಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ ಮಾಡಲಿದ್ದೇವೆ ಎಂಬ ಭರವಸೆ ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ; ಮುಂದಿನ ವರ್ಷದಿಂದಲೇ KPS ಸ್ಕೂಲ್..!

https://newsfirstlive.com/wp-content/uploads/2024/02/MADHU-BANGARAPPA-2.jpg

Load More