ಕೃಷಿ ಇಲಾಖೆಯಲ್ಲಿ 945 ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ಬರೋಬ್ಬರಿ 83 ಸಾವಿರ ಸಂಬಳ

author-image
Ganesh Nachikethu
Updated On
ಕೃಷಿ ಇಲಾಖೆಯಲ್ಲಿ 945 ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ಬರೋಬ್ಬರಿ 83 ಸಾವಿರ ಸಂಬಳ
Advertisment
  • ಕರ್ನಾಟಕ ಲೋಕಸೇವಾ ಆಯೋಗದಿಂದ ಭರ್ಜರಿ ಗುಡ್​​ನ್ಯೂಸ್​​
  • ಕೃಷಿ ಇಲಾಖೆಯಲ್ಲಿ ಖಾಲಿ ಇರೋ 945 ಹುದ್ದೆಗಳ ಭರ್ತಿಗೆ ಆದೇಶ
  • ಇಂದಿನಿಂದಲೇ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಕೆಗೆ ಅವಕಾಶ..!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಕೃಷಿ ಇಲಾಖೆಯಲ್ಲಿ ಖಾಲಿ ಇರೋ 945 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಹಾಗಾಗಿಯೇ ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಪೈಕಿ ಹೈದರಾಬಾದ್‌ ಕರ್ನಾಟಕಕ್ಕೆ 273 ಹುದ್ದೆಗಳು ಮೀಸಲು ಇಡಲಾಗಿದೆ.

ಎಷ್ಟು ಹುದ್ದೆಗಳು?

ರಾಜ್ಯಾದ್ಯಂತ ಖಾಲಿ ಇರೋ 945 ಕೃಷಿ ಇಲಾಖೆ ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು. ಮುಂದಿನ ತಿಂಗಳು ನವೆಂಬರ್‌ 7ನೇ ತಾರೀಕು ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಆಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಹುದ್ದೆಗಳ ಭರ್ತಿ ಆಗಲಿದ್ದು, 128 ಕೃಷಿ ಅಧಿಕಾರಿಗಳು ಹಾಗೂ 817 ಸಹಾಯಕ ಕೃಷಿ ಅಧಿಕಾರಿಗಳ ನೇಮಕವಾಗಲಿದೆ.

ಇನ್ನು, ಅರ್ಜಿ ಸಲ್ಲಿಸೋ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ. ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು 300 ರೂ. ಪಾವತಿ ಮಾಡಬೇಕು. ಇಷ್ಟೇ ಅಲ್ಲ ಮಾಜಿ ಸೈನಿಕರ ಮಕ್ಕಳಿಗೆ 50 ರೂ. ಅರ್ಜಿ ಶುಲ್ಕ ಇರಲಿದೆ. ಎಸ್​​ಸಿ, ಎಸ್​ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಜತೆಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸೋರು ಕೃಷಿ ವಿಷಯದಲ್ಲಿ ಬಿಎಸ್ಸಿ ಅಥವಾ ಬಿಟೆಕ್‌ ಪದವಿ ಮಾಡಿರಬೇಕು.

ಸ್ಯಾಲರಿ ಎಷ್ಟು?

ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ 38 ವರ್ಷ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 41 ಹಾಗೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಗರಿಷ್ಠ 43 ವಯಸ್ಸಿನವರೆಗೆ ಅರ್ಜಿ ಸಲ್ಲಿಸಬಹುದು. ಸಂಬಳ 43 ಸಾವಿರದಿಂದ 83 ಸಾವಿರ ರೂ. ಇರಲಿದೆ.

ಇದನ್ನೂ ಓದಿ:ಸರ್ಕಾರಿ ಉದ್ಯೋಗ ಬೇಕಾ? ಈಗಲೇ ಅಪ್ಲೈ ಮಾಡಿ; ನೇರ ಸಂದರ್ಶನ; ಸ್ಯಾಲರಿ ಎಷ್ಟು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment