/newsfirstlive-kannada/media/post_attachments/wp-content/uploads/2025/02/JOBS_EXAMS.jpg)
2024-25ನೇ ಸಾಲಿನ Second PUC ರಿಸಲ್ಟ್ ಬಂದಾಗಿದೆ. ರಾಜ್ಯದಲ್ಲಿ ಒಟ್ಟು ಶೇ.73.45 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. 2ನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಇದೆ. ಬೆಂಗಳೂರು ದಕ್ಷಿಣ 3ನೇ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆ ಸ್ಥಾನದಲ್ಲಿದೆ.
ವಿಜ್ಞಾನ ವಿಭಾಗದಲ್ಲಿ ಮಂಗಳೂರು ಮೂಲದ ಅಮೂಲ್ಯ ಕಾಮತ್ 599 ಅಂಕ ಪಡೆಯುವ ಮೂಲಕ ಫಸ್ಟ್ RANK ಬಂದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಸಂಜನಾ ಬಾಯಿ 597 ಮಾರ್ಕ್ಸ್ ತೆಗೆದುಕೊಳ್ಳುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಾಶ್ರೀ ಎಂಬುವರು 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಪಿಯು ಟಾಪರ್ಸ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಮುಂದೇನು? ಅನ್ನೋ ಚಿಂತೆಯಲ್ಲಿದ್ದಾರೆ. ಇದರ ಮಧ್ಯೆಯೇ ಸಿಇಟಿ ಎಕ್ಸಾಂ ಶುರುವಾಗುತ್ತಿದೆ. ಇದು ಸೈನ್ಸ್ ಬ್ಯಾಗ್ರೌಂಡ್ನಿಂದ ಬಂದಿರೋ ವಿದ್ಯಾರ್ಥಿಗಳಿಗೆ ನಡೆಯಲಿರೋ ಎಕ್ಸಾಂ ಆಗಿದೆ.
CET Exam ಯಾವಾಗ?
CET ಎಂದರೆ Common Entrance Test. ಕರ್ನಾಟಕದಲ್ಲಿ ಏಪ್ರಿಲ್ 15ರಿಂದ 17ರ ವರೆಗೆ ಅಂದರೆ 3 ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಸಿಇಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ Hall ticket ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಕೆಇಎ ಹಾಲ್ ಟಿಕೆಟ್ ಜೊತೆಗೆ ಮಾದರಿ ಒಎಮ್ಆರ್ ಶೀಟ್ ಕೂಡ ಕೊಟ್ಟಿದೆ.
ವಿಶೇಷ ಎಂದರೆ ಈ ವರ್ಷ ನೀರಿಕ್ಷೆಗೂ ಮಿರಿ ಅರ್ಜಿಗಳು ಬಂದಿವೆ. ಬರೋಬ್ಬರಿ 3 ಲಕ್ಷ 30 ಸಾವಿರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 10 ದಿನಕ್ಕೂ ಮೊದಲೇ ಸಿಇಟಿ ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು cetonline.karnataka.gov.in ಲಿಂಕ್ ಮೂಲಕ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರತಿ ಬಾರಿ ಸಿಇಟಿ ಪರೀಕ್ಷೆ ದಿನ ಒಎಮ್ಆರ್ ತುಂಬಲು ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಹೀಗಾಗಿ ಈ ಬಾರಿ ಪ್ರವೇಶ ಪತ್ರದ ಜೊತೆಗೆ ಒಎಮ್ಆರ್ ಶೀಟ್ ಕೂಡ ನೀಡಲಾಗುತ್ತಿದೆ.
ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
- ಕೆಇಎ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಬೇಕು
- ಬಳಿಕ ಪ್ರವೇಶ ವಿಭಾಗಕ್ಕೆ ಹೋಗಬೇಕು, ನಂತರ UGCET-2025 ಆಯ್ಕೆ ಮಾಡಬೇಕು
- CET ಪರೀಕ್ಷೆ- 2025 ಪ್ರವೇಶ ಪತ್ರ ಎಂಬ ಕ್ಯಾಪ್ಷನ್ ಇರೋ ಲಿಂಕ್ ಕ್ಲಿಕ್ ಮಾಡಬೇಕು
- ನಿಮ್ಮ ಲಾಗಿನ್ ಐಡಿ, ನೋಂದಣಿ ಸಂಖ್ಯೆ, ಪಾಸ್‌ವರ್ಡ್ ಎಂಟರ್ ಮಾಡಬೇಕು
- ನಂತರ ಸಬ್ಮೀಟ್ ಮಾಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು
ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಇತ್ಯಾದಿ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಎಲ್ಲಾ ಕೇಂದ್ರಗಳಲ್ಲೂ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.
ಯಾವ ದಿನ ಯಾವ ಪರೀಕ್ಷೆ?
ಏಪ್ರಿಲ್ 15ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಏ.16 ಮತ್ತು 17ರಂದು ಇತರೆ ವಿಷಯ ಪರೀಕ್ಷೆ ಆಗಲಿದೆ. ಏಪ್ರಿಲ್ 16 ರಂದು 10:30 ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ, ಏಪ್ರಿಲ್ 17 ರಂದು ಬೆಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿವೆ.
ಇದನ್ನೂ ಓದಿ:ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಿದ ಬ್ಯಾಂಕ್.. 25 ರಿಂದ 40 ವರ್ಷದವ್ರಿಗೆ ಅವಕಾಶ
ಫೇಸಿಯಲ್ ಅಟೆಂಡೆನ್ಸ್ ಕಡ್ಡಾಯ
ಪರೀಕ್ಷೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಎಕ್ಸಾಂ ಸೆಂಟರ್ಗೆ ಟ್ಯಾಬ್ಲೆಟ್, ಮೊಬೈಲ್, ಟ್ಯಾಕ್ಸ್ ಕ್ಯಾಲ್ಕುಲೇಟರ್, ಬ್ಲೂಟೂತ್, ವಾಚ್ ಯಾವುದು ತರಬಾರದು ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಈ ವರ್ಷ ಫೇಸಿಯಲ್ ಅಟೆಂಡೆನ್ಸ್ ಕಡ್ಡಾಯ ಆಗಿದೆ.
ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮುಂಚಿತವಾಗಿ ಬರಬೇಕು. ಪರೀಕ್ಷಾ ಸಿಬ್ಬಂದಿ ಕೂಡ ಟ್ಯಾಬ್ಲೆಟ್, ಮೊಬೈಲ್, ಬ್ಲೂಟೂತ್, ವಾಚ್ ಬಳಸುವಂತಿಲ್ಲ. ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಸೆಟ್ ಮೊಬೈಲ್ ಬಳಸಬಹುದು. ಎಲ್ಲಾ ಕೊಠಡಿಗಳಿಗೆ ಸಿಸಿಟಿವಿ ನಿಗಾ ಇರಲಿದೆ. ನೀಟ್ ಮಾದರಿಯಲ್ಲೇ ಡ್ರೆಸ್ ಕೋಡ್ ಇದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ