newsfirstkannada.com

‘ಬಾರೋ ಬಾರೋ ಮಳೆರಾಯ..’ 48 ಗಂಟೆಯಲ್ಲಿ ತಂಪೆರೆಯಲಿದೆ ಮಳೆ..! ಎಲ್ಲೆಲ್ಲಿ..?

Share :

Published April 29, 2024 at 12:54pm

Update April 30, 2024 at 3:44pm

  ರಾಜ್ಯದ ಜನರಿಂದ ಮಳೆಗಾಗಿ ಭಾರೀ ನಿರೀಕ್ಷೆ

  ಹವಾಮಾನ ಇಲಾಖೆ ಪ್ರಕಾರ ಎಲ್ಲೆಲ್ಲಿ ಮಳೆ ಬರುತ್ತೆ?

  ಬಿಸಿಲಿನ ಆರ್ಭಟಕ್ಕೆ ಕಂಗೆಟ್ಟು ಹೋಗಿರುವ ಜನ

ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನರು ಭರ್ಜರಿ ಮಳೆ ಬೀಳುವ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ನಾಳೆ ಸಂಜೆ ವೇಳೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈ ಕ್ಷಣಕ್ಕಾಗಿ ಜನ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಮತ್ತೆ ಶಾಕಿಂಗ್ ಸುದ್ದಿ.. ಇನ್ನೆಷ್ಟು ದಿನ ಭಯಾನಕ ಬಿಸಿ ಗಾಳಿ; ಮಳೆ ಬರೋದು ಯಾವಾಗ?

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಇವತ್ತು ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ನಾಳೆ ಸಂಜೆ ವೇಳೆಗೆ ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಚಿತ್ರದುರ್ಗ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ: Rinku Singh: ಮಂಗ ಕಚ್ಚಿದೆ -ಶಾಕಿಂಗ್ ವಿಚಾರ ತಿಳಿಸಿದ ರಿಂಕು ಸಿಂಗ್..!

ಮೇ 1 ರಂದು ಕಲಬುರ್ಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳು ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ತಿಳಿಸಿದೆ.

ಮೇ 2 ರಂದು ಬೀದರ್, ಕಲಬುರ್ಗಿ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಮೇ 3 ರಂದು ಕೊಡಗು, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಂಡ್ಯ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಮೊದಲ 15 ಬಾಲ್​ನಲ್ಲಿ ನರ್ವಸ್ ಆಗಿಬಿಟ್ಟಿದ್ದೆ -ಸ್ಫೋಟಕ ಶತಕದ ಹಿಂದೆ ಕೊಹ್ಲಿ ಮ್ಯಾಜಿಕ್ ತಿಳಿಸಿದ ಜಾಕ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಾರೋ ಬಾರೋ ಮಳೆರಾಯ..’ 48 ಗಂಟೆಯಲ್ಲಿ ತಂಪೆರೆಯಲಿದೆ ಮಳೆ..! ಎಲ್ಲೆಲ್ಲಿ..?

https://newsfirstlive.com/wp-content/uploads/2024/04/RAIN-2.jpg

Load More