/newsfirstlive-kannada/media/post_attachments/wp-content/uploads/2025/06/KARNATAKA-RAIN-10.jpg)
ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅದ್ರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿವೆ..
ಮರ ಬಿದ್ದು ಸಂಚಾರ ಬಂದ್.. ಕಿ.ಮೀಗಟ್ಟಲೇ ಜಾಮ್
ಕಾಫಿನಾಡು ಮಲೆನಾಡು ಭಾಗದಲ್ಲಿ ಗಾಳಿ ಮಳೆ ಅಬ್ಬರ ಮುಂದುವರೆದಿದೆ. ಬೇಲೂರು ತಾಲೂಕಿನ ನಂದೀಪುರ ಗ್ರಾಮದ ಬಳಿಬೃಹತ್ ಮರವೊಂದು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಮರ ತೆರವುಗೊಳಿಸಲು ಪೊಲೀಸರು ಹಾಗೂ ಸ್ಥಳೀಯರ ಹರಸಾಹಸ ಪಡುವಂತಾಯ್ತು. ಸಂಚಾರ ಸ್ಥಗಿತವಾಗಿದ್ದಕ್ಕೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು, ಸ್ಥಳಕ್ಕೆ ಗೋಣಿಬೀಡು ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.
ಇದನ್ನೂ ಓದಿ: ಬೆಂಗಳೂರು ಪ್ರಯಾಣಿಕರೇ ಎಚ್ಚರ.. ಇಂದಿನಿಂದ ನಗರದಾದ್ಯಂತ ಬೈಕ್ ಟ್ಯಾಕ್ಸಿಗಳು ಬ್ಯಾನ್!
ಶೃಂಗೇರಿಯ ನೆಮ್ಮಾರಿನಲ್ಲಿ ಪದೇ ಪದೇ ಭೂ ಕುಸಿತವಾಗ್ತಿದ್ದು, ಶೃಂಗೇರಿ ಮಂಗಳೂರು ಸಂಪರ್ಕಿಸುವ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ. ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ.
ಬೆಳ್ತಂಗಡಿಯಲ್ಲಿ ಮರ ಬಿದ್ದು ಬೈಕ್ ಸವಾರರಿಗೆ ಗಾಯ
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಬ್ಬರ ಜೋರಾಗಿದ್ದು, ಚಲಿಸ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಮರ ಬಿದ್ದ ರಭಸಕ್ಕೆ ಸಾವರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿದೆ. ಸದ್ಯ ಅದೃಷ್ಟವಶಾತ್, ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: UPI ಬಳಕೆದಾರರಿಗೆ ಗುಡ್ನ್ಯೂಸ್; ಇಂದಿನಿಂದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಮತ್ತಷ್ಟು ಸ್ಪೀಡ್!
ರಸ್ತೆ ತುಂಬೆಲ್ಲಾ ಹರಿದ ನೀರು, ಸವಾರರಿಗೆ ಕಿರಿಕಿರಿ
ವಿಜಯನಗರದ ಹೊಸಪೇಟೆಯ ಬಸವಣ್ಣ ಕಾಲುವೆಯ ನೀರು ಓವರ್ ಫ್ಲೋ ಆಗಿ ರಸ್ತೆ ತುಂಬೆಲ್ಲಾ ಹರಿದಿದೆ. ರಸ್ತೆಯಲ್ಲಿ ನೀರು ಹರಿದ ಪರಿಣಾಮ ಕೆಲ ಕಾಲ ವಾಹನ ಸವಾರರಿಗೆ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಸ್ಥಳೀಯರು ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ರು.
ರಾಜ್ಯದಲ್ಲಿ ಮಳೆಯಬ್ಬರ.. ಇಂದು ಶಾಲಾ-ಕಾಲೇಜಿಗೆ ರಜೆ
ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಅದ್ರಲ್ಲೂ ಕರಾವಳಿ ಭಾಗದಲ್ಲಿ ವರುಣ ಅಬ್ಬರ ಜೋರಾಗಿದೆ.. ಹೀಗಾಗಿ, ಮುಂಜಾಗ್ರತೆ ದೃಷ್ಟಿಯಿಂದ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದ.ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗುನಲ್ಲಿ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ, ಮುಲ್ಕಿ, ಮೂಡಬಿದಿರೆ ತಾಲ್ಲೂಕುಗಳಿಗೆ ರಜೆ ಘೊಷಿಸಿದ್ರೆ, ಚಿಕ್ಕಮಗಳೂರಿನ 6 ತಾಲೂಕುಗಳಿಗೆ ಅಂದ್ರೆ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, NR ಪುರ, ಕಳಸ ತಾಲ್ಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಒಟ್ಟಾರೆ.. ರೈತರ ಮುಖದಲ್ಲಿ ಸಂತೋಷ ಹೊತ್ತು ತರ್ಬೇಕಿದ್ದ ವರುಣ ಅವಾಂತರಗಳ ಪಟ್ಟಿ ಮಾಡ್ತಿದ್ದಾನೆ. ಆರಂಭದಲ್ಲೇ ವರುಣನ ಅಬ್ಬರ ಹೀಗಿದ್ರೆ, ಮುಂದೆ ಗತಿ ಏನು ಅನ್ನೋದು ಕರ್ನಾಟಕ ಜನ್ರ ಮನಸ್ಸಿನ ಮಾತು.
ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ.. ಇಸ್ರೇಲ್-ಇರಾನ್ ಯುದ್ಧದಲ್ಲಿ ಮತ್ತೆ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ