/newsfirstlive-kannada/media/post_attachments/wp-content/uploads/2024/06/KRS.jpg)
ಮಂಡ್ಯ: ಕಾವೇರಿ ಕನ್ನಡಿಗರ ಜೀವ ನದಿ. ಈ ನದಿಯಿಂದಲೇ ಅದೆಷ್ಟೋ ಜೀವರಾಶಿಗಳು ಬದುಕುತ್ತಿವೆ. ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ಆದರೆ ಕಾವೇರಿ ಒಡಲು ತುಂಬಬೇಕಾದರೆ ಮಳೆ ಅಗತ್ಯ. ಮಳೆ ಬಂದರೆ ಮಾತ್ರ ಕೆರೆ, ಕಟ್ಟೆಗಳು ತುಂಬುತ್ತವೆ. ಮಾತ್ರವಲ್ಲ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗುತ್ತದೆ.
ಸದ್ಯ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗುತ್ತಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬರುತ್ತಿದೆ. ಇದರಿಂದ ಕಾವೇರಿ ಸಂತಸಗೊಂಡಿದ್ದಾಳೆ. ಕಾರಣ ಕೃಷ್ಣರಾಜ ಸಾಗರ ಅಣೆಕಟ್ಟಿನತ್ತ ನೀರು ಹರಿದುಬರುತ್ತಿದೆ. ಅಂದಹಾಗೆಯೇ ನಿನ್ನೆ ಮತ್ತು ಇಂದಿಗೆ ಕೆಆರ್‌ಎಸ್ ನೀರಿನ ಒಳಹರಿವಿನ ಪ್ರಮಾಣ ಕೊಂಚ ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಪವಿತ್ರಗೌಡ ಇನ್ಸ್ಟಾದಿಂದ Phone Number ಶೇರ್ ಆಗಿದ್ದೇಗೆ.. ಮೊದಲ ಮೆಸೇಜ್ ಏನಾಗಿತ್ತು..
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ - 124.80 ಅಡಿ
- ಇಂದಿನ ಮಟ್ಟ - 87.00 ಅಡಿ
- ಗರಿಷ್ಠ ಸಾಂದ್ರತೆ - 49.452 ಟಿಎಂಸಿ
- ಇಂದಿನ ಸಾಂದ್ರತೆ - 14.216 ಟಿಎಂಸಿ
- ಒಳ ಹರಿವು - 2,160 ಕ್ಯೂಸೆಕ್
- ಹೊರ ಹರಿವು - 461 ಕ್ಯೂಸೆಕ್
ಇದನ್ನೂ ಓದಿ:ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?
ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ