newsfirstkannada.com

Rain Effects: ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ, ಸಾಲು ಸಾಲು ಸಂಕಷ್ಟ

Share :

Published May 21, 2024 at 6:58am

    ರಾಜ್ಯದಲ್ಲಿ ಮುಂದುವರೆದ ವರುಣನ ಆರ್ಭಟ

    ಮಳೆಗೆ ರೈತರು ಬೆಳೆದ ಬೆಳೆಗಳು ನೀರುಪಾಲು.. ಭಾರೀ ನಷ್ಟ

    ಮಳೆ ಬಂದರೂ ನಡೆದ ಬಬ್ಬು ಸ್ವಾಮಿ ದೈವದ ನೇಮೋತ್ಸವ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಾಯುಭಾರ ಕುಸಿತ ಮತ್ತು ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಜನರು ಮಳೆ ಸುರಿಯಿತು ಎಂದು ಸಂತಗೊಂಡಿದ್ದರೆ ಮತ್ತೊಂದು ಕಡೆ ಗಾಳಿ, ಮಳೆಯ ಅಬ್ಬರದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

ದೇವನಹಳ್ಳಿ ಏರ್​​ಪೋರ್ಟ್​​ ಸುತ್ತಮುತ್ತ ಮಳೆ, ಬೈಕ್​ಗಳು ಮುಳುಗಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 44 ಮುಳುಗಡೆಯಾಗಿ ಕೆರೆಯಂತಾಗಿತ್ತು. ನೋದಗೋಕುಲ ಹೋಟೆಲ್ ಬಳಿ ಬೈಕ್​ಗಳು ಮುಳುಗಿ ಹೋಗಿದ್ದು ಮಾತ್ರವಲ್ಲದೆ ವಾಹನ ಸವಾರರೂ ಪರದಾಡಿದ್ರು.

ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ, ನೀರಲ್ಲಿ ಹೊತ್ತಿಕೊಂಡ ಬೆಂಕಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಪರಿಣಾಮ ರಸ್ತೆ ಮೇಲಿನ ನೀರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಜನರ ಒಡಾಟವಿಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.

ಕಾಫಿನಾಡಲ್ಲಿ ಮಳೆ ಅಬ್ಬರ, ನೂರಾರು ವರ್ಷದ ಹಳೆಯ ಮರ ಧರೆಗೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ ಮಳೆಗೆ ನೂರಾರು ವರ್ಷದ ಹಳೆಯ ಅರಳಿ ಮರ ಧರೆಗುರುಳಿದೆ. ತರೀಕೆರೆ ತಾಲೂಕಿನ ಕೆರೆಹೊಸಹಳ್ಳಿ ಗ್ರಾಮದಲ್ಲಿ ಮರ ಧರೆಗುರುಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲನಲ್ಲಿ ಸೆರೆ ಹಿಡಿಯಲಾಗಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ 2 ರಿಂದ 3 ಅಡಿಯಷ್ಟು ಮಳೆ ನೀರು ನಿಂತು ಟ್ರಾಫಿಕ್ ಜಾಮ್​ ಕೂಡ ಉಂಟಾಗಿತ್ತು.. ಅತಿಯಾಗಿ ಗಾಳಿ ಬೀಸಿದ ಪರಿಣಾಮ ಬಾಳೆ ಬೆಳೆ ಕೂಡ ನೆಲಕ್ಕುರುಳಿವೆ.

ಮಲೆನಾಡಲ್ಲಿ ವರುಣನಾರ್ಭಟ, ಬಯಲಾದ ಸ್ಮಾರ್ಟ್ ಸಿಟಿ ಬಂಡವಾಳ

ಶಿವಮೊಗ್ಗ ನಗರದಲ್ಲಿ ಭಾರೀ ಮಳೆ ಸುರಿಯಿತು. ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರದಿಂದ ಮನೆ, ಅಂಗಡಿಗೆ ಮಳೆ ನೀರು ನುಗ್ಗಿತು. ಗೋಪಾಳ, ಬಾಪೂಜಿ ನಗರ, ಕಮಲಾ ನೆಹರು ಕಾಲೇಜು ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಮೇಲೆ ಚರಂಡಿ ನೀರು ಹರಿದಿದೆ. ಅಂಗಡಿಯೊಳಗೆ ನುಗ್ಗಿದ ಚರಂಡಿ ನೀರನ್ನು ಹೊರಹಾಕಿದ ಮಾಲೀಕರು, ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಒಂದೇ ಮಳೆಯ ಆರ್ಭಟಕ್ಕೆ ತುಂಬಿದ ಟಿ. ನಾಗೇನಗಳ್ಳಿ ಬ್ಯಾರೇಜ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಾದ್ಯಂತ ಮಳೆರಾಯ ಆರ್ಭಟಿಸಿದ್ದಾನೆ.. ಬಿಸಿಲಿಗೆ ಬಾಯ್ತೆರೆದಿದ್ದ ರೈತರ ಜಮೀನುಗಳಲ್ಲಿ ನೀರು ತುಂಬಿಕೊಂಡು ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಸುರಿದ ಒಂದೇ ಮಳೆಗೆ ಅರಳೆಕಟ್ಟೆ ಬ್ರಿಡ್ಜ್ ಬಳಿಯ ಸರ್ವೀಸ್ ರಸ್ತೆ ಕುಸಿದು ಬಿರುಕುಬಿಟ್ಟಿದೆ. ಇನ್ನು ಟಿ.ನಾಗೇನಹಳ್ಳಿ ಬಳಿಯ ಬ್ಯಾರೇಜ್ ತುಂಬಿ ಹರಿಯುತ್ತಿದೆ.

ಕೋಲಾರದಲ್ಲಿ ಸುರಿದ ಜೋರು ಮಳೆ, ಜಮೀನುಗಳಿಗೆ ನುಗ್ಗಿದ ನೀರು

ಕೋಲಾರ ಭಾಗದ ಮಲ್ಲಸಂದ್ರ ಗ್ರಾಮದ ರೈತರ ಬೆಳೆಗಳು ನೀರುಪಾಲಾಗಿದೆ. ಮಲ್ಲಸಂದ್ರ ಗ್ರಾಮದ ರೈತ ನಾರಾಯಣಪ್ಪ, ಮೋಹನ್, ಶಿವಕುಮಾರ್ ಜಮೀನಿಗೆ ನೀರು ನುಗ್ಗಿದೆ. ಮಳೆ ನೀರಿನಿಂದ ಬೆಳೆದಿರುವ ಬೆಳೆ ನೀರು ಹೆಚ್ಚಾಗಿ ನಾಶವಾಗುವ ಆತಂಕ ಇದೀಗ ಎದುರಾಗಿದೆ. ಮಾಡಲಾಗಿರೋ ರಾಜು ಕಾಲುವೆ ಒತ್ತುವರಿ ತೆರವುಗಳಿಸಿ, ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸಿಗುವಂತ್ತಾಗಬೇಕು ಅನ್ನೋದು ರೈತರ ಒತ್ತಾಯ.

ಉಡುಪಿಯಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ ದೈವಾರಾಧನೆ

ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ, ಬಬ್ಬು ಸ್ವಾಮಿ ದೈವದ ನೇಮೋತ್ಸವ ಏರ್ಪಾಟಾಗಿತ್ತು. ಇದ್ದಕ್ಕಿದ್ದಂತೆ ನಡುರಾತ್ರಿ ವ್ಯಾಪಕ ಮಳೆ ಆರಂಭವಾಗಿದೆ.. ಸುರಿಯುವ ಮಳೆಯಲ್ಲೇ ದೈವ ನರ್ತಕ ರವಿ ಪಡ್ಡಮ್ ಗಗ್ಗರಸೇವೆ ನಡೆಸಿಕೊಟ್ಟಿದ್ದಾರೆ. ಮಳೆಯಲ್ಲೇ ನಡೆಯುತ್ತಿರುವ ನೇಮೋತ್ಸವದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಒಟ್ಟಾರೆ, ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಎಂಟ್ರಿ ಕೊಟ್ಟಿರೋ ಮಳೆರಾಯ ಅಬ್ಬರಿಸುತ್ತಿದ್ದಾನೆ. ನಿರಂತರ ಮಳೆಯಿಂದಾಗಿ ಕೆಲ ಅನ್ನದಾತರು, ಕೆಲ ಜನರಲ್ಲಿ ಖುಷಿ ತಂದಿದ್ರೆ.. ಇನ್ನೂ ಕೆಲವರನ್ನ ಕಂಗಾಲಾಗುವಂತೆ ಮಾಡಿದೆ.
ನ್ಯೂಸ್‌ ಫಸ್ಟ್ ಬ್ಯುರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain Effects: ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ, ಸಾಲು ಸಾಲು ಸಂಕಷ್ಟ

https://newsfirstlive.com/wp-content/uploads/2024/05/House-collapse.jpg

Load More