Advertisment

ದೇವಸ್ಥಾನದ ಮೇಲೆ ಬಿದ್ದ ಮರ, ಕುಸಿದು ಬಿದ್ದ ಸರ್ಕಾರಿ ಶಾಲಾ ಗೋಡೆ.. ಮಳೆಯಿಂದಾಗಿ ಸಾವಿರಾರು ಸಮಸ್ಯೆ

author-image
AS Harshith
Updated On
ದೇವಸ್ಥಾನದ ಮೇಲೆ ಬಿದ್ದ ಮರ, ಕುಸಿದು ಬಿದ್ದ ಸರ್ಕಾರಿ ಶಾಲಾ ಗೋಡೆ.. ಮಳೆಯಿಂದಾಗಿ ಸಾವಿರಾರು ಸಮಸ್ಯೆ
Advertisment
  • ಮಳೆಗೆ ಬೆದರಿ ಕಾಡಿನಿಂದ ನಾಡಿಗೆ ಬಂದ ಗಜರಾಜ!
  • ಭರ್ತಿಯಾಗುವ ಹಂತ ತಲುಪಿರುವ ಜಲಾಶಯಗಳು
  • ಕರಾವಳಿಯಲ್ಲಿ ಮಳೆತಗ್ಗಿದ್ರೂ ತಗ್ಗದ ಗಾಳಿಯ ಅಬ್ಬರ

ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಜಲಮೂಲಗಳನ್ನ ಮೈದುಂಬಿಸಿ ಕೆಲವೆಡೆ ಅವಾಂತರಕ್ಕೂ ಅಡಿ ಇಟ್ಟಿದ್ದಾನೆ. ಮಳೆರಾಯನ ಮಾಸ್​ ಎಂಟ್ರಿಗೆ ತುಂಬಿ ತುಳುಕುತ್ತಿರೋ ಹಳ್ಳ-ಕೊಳ್ಳಗಳು ಅನ್ನದಾತರ ಮೊಗದಲ್ಲಿ ಮಂದಹಾಸತುಂಬಿವೆ. ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೆಲವೆಡೆ ಗುಡ್ಡ, ಮನೆ ಕುಸಿತವಾಗಿ ಜನರ ಆತಂಕಕ್ಕೂ ಕಾರಣವಾಗಿದೆ.

Advertisment

ಗುರುರಾಯರಿಗೆ ವರದಾ ನದಿಯ ಜಲ ದಿಗ್ಬಂದನ!

ನಿರಂತರ ಮಳೆಯಿಂದಾಗಿ ಹಾವೇರಿಯಲ್ಲಿ ವರದಾ ನದಿ ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ನದಿಯ ಪ್ರವಾಹಕ್ಕೆ ರಾಜ್ಯದ ಎರಡನೇ ಮಂತ್ರಾಲಯ ಎಂದೇ ಖ್ಯಾತಿ ಹೊಂದಿರೋ ಹೊಸರಿತ್ತಿ ಗ್ರಾಮದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠ ಜಲಾವೃತವಾಗಿದೆ. ಮಠದ ದಾಸೋಹ ಕೊಠಡಿ, ಪೂಜಾ ಕೊಠಡಿ ಹಾಗೂ ಉದ್ಯಾನವನ ಮುಳುಗಡೆಯಾಗಿದೆ.

publive-image

ದೇವಸ್ಥಾನ ಮತ್ತು ಮನೆ ಮೇಲೆ ಮರ ಬಿದ್ದು ಅವಾಂತರ

ಭಾರೀ ಮಳೆಗೆ ಬೆಚ್ಚಿಬಿದ್ದ ಕಾಡಾನೆಯೊಂದು ನಾಡಿಗೆ ಎಂಟ್ರಿಕೊಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಮಾರ್ಚ್​ ಫಾಸ್ಟ್​ ಮಾಡಿದ ಗಜರಾಜ ಭತ್ತದ ಗದ್ದೆ ತುಳಿದು ನಾಶ ಮಾಡಿದ್ದಾನೆ. ಕಾಡಾನೆಯ ಕಾಟಕ್ಕೆ ಗದ್ದೆಯ ಪರಿಸ್ಥಿತಿ ನೋಡಿ ರೈತರು ಕಂಗಾಲಾಗಿದ್ದಾರೆ. ಇನ್ನೂ ಎನ್.ಅರ್ ಪುರ ತಾಲೂಕಿನ ಶೆಟ್ಟಿ ಹಿತ್ಲು ಗ್ರಾಮದಲ್ಲಿ ಮನೆ ಹಾಗೂ ದೇವಸ್ಥಾನದ ಮೇಲೆ ಮರವೊಂದು ಉರುಳಿದೆ. ಮನೆಯವರು ಯಾರು ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

publive-image

ಕರಾವಳಿಯಲ್ಲಿ ಮಳೆತಗ್ಗಿದ್ರೂ ತಗ್ಗದ ಗಾಳಿಯ ಅಬ್ಬರ

ಮಂಗಳೂರು ಮತ್ತು ಉಡುಪಿ ಕರಾವಳಿ ಭಾಗದಲ್ಲಿ ಮಳೆ ತಗ್ಗಿದ್ರೂ ಗಾಳಿ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಭಾರೀ ಗಾಳಿಗೆ ಬಂಟ್ವಾಳದ ಬಿಸಿರೋಡ್​ನಲ್ಲಿ‌ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಂಗಳೂರು ಹೊರವಲಯದ ಕಾವೂರು ಎಂಬಲ್ಲಿ ಕಟ್ಟಡದ ಮೇಲ್ಚಾವಣಿ ಧರೆಗುರುಳಿದೆ.. ಪರಿಣಾಮ ಎರಡು ಕಾರುಗಳಿಗೆ ಹಾನಿಯಾಗಿದೆ.

Advertisment

publive-image

ಶಿರಾಡಿಘಾಟ್ ರಸ್ತೆಯಲ್ಲಿ ಪಲ್ಟಿಯಾದ ಕಂಟೇನರ್​

ಹಾಸನದ ಸಕಲೇಶಪುರ ತಾಲ್ಲೂಕಿನ ಕೆಸಗಾನಹಳ್ಳಿ ಬಳಿಯ ಶಿರಾಡಿಘಾಟ್ ರಸ್ತೆಯ ತಿರುವಿನಲ್ಲಿ ಕಂಟೇನರ್​ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಭಾರೀ ಮಳೆಗೆ ರಸ್ತೆ ಕೆಸರುಮಯವಾಗಿದ್ದ ಕಾರಣ ಕಂಟೇನರ್​ ಪಲ್ಟಿಯಾಗಿದ್ದು, ಚಾಲಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಹೆಂಡತಿ ಜೀವ ಉಳಿಸೋಕೆ ಹೋಗಿ ಪೊಲೀಸರ ಅತಿಥಿಯಾದ ಪ್ರಾಣ ಸ್ನೇಹಿತರು; ಅಸಲಿಗೆ ಆಗಿದ್ದೇನು?

publive-image

ಕುಸಿದು ಬಿದ್ದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ

ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯ ಸರ್ಕಾರಿ ಉರ್ದು ಪ್ರೌಢ ಶಾಲೆಯ ಗೋಡೆ ಕುಸಿತವಾಗಿದೆ. ಶಾಲೆ ಬಿಡುವ ವೇಳೆ ಗೋಡೆ ಕುಸಿದ ಪರಿಣಾಮ ಭಾರೀ ಅನಾಹುತ ತಪ್ಪಿದಂತಾಗಿದೆ. 9ನೇ ತರಗತಿ ಕೊಠಡಿಯ ಗೋಡೆ ಕುಸಿತವಾಗಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಾಗಿಲ್ಲ.

Advertisment

ಇದನ್ನೂ ಓದಿ: ವ್ಯವಹಾರದಲ್ಲಿ ಭಾರೀ ಮೋಸ; ಯಾರನ್ನು ದ್ವೇಷಿಸಬೇಡಿ; ಈ ರಾಶಿಯವರಿಗೆ ಸಂಕಷ್ಟ; ಇಲ್ಲಿದೆ ಭವಿಷ್ಯ

publive-image

ಜಿಟಿ ಜಿಟಿ ಮಳೆಗೆ ಬಿಕೋ ಅಂತಿರೋ ಗೋಳಗುಮ್ಮಟ

ಜಿಟಿ ಜಿಟಿ ಮಳೆ ಹಿನ್ನೆಲೆ ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಬಿಕೋ ಎನ್ನುತ್ತಿದೆ. ಮಳೆ ಕಾರಣ ಪ್ರವಾಸಿಗರು ಗೋಳಗುಮ್ಮಟದತ್ತ ಮುಖಮಾಡ್ತಿಲ್ಲ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಗೋಳಗುಮ್ಮಟ ವೀಕ್ಷಣೆಗೆ ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.

ಇದನ್ನೂ ಓದಿ: ‘ಆ ಸ್ಟಾರ್​ ನಟ ಬೇರೆ ಮಹಿಳೆ ಜೊತೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದ’- ವೆಡ್ಡಿಂಗ್​ ಫೋಟೋಗ್ರಾಫರ್​ ಬಿಚ್ಚಿಟ್ಟ ಸತ್ಯ!

Advertisment

ಒಟ್ಟಿನಲ್ಲಿ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಜಲಮೂಲಗಳನ್ನ ಮೈದುಂಬಿಸಿ ಅನ್ನದಾತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದ್ದಾನೆ. ಕಳೆದ ಬಾರಿ ಕೈಕೊಟ್ಟಿದ್ದ ವರುಣಾ ಈ ಬಾರಿ ಧೋ ಅಂತ ಸುರಿಯೋದನ್ನ ಕಂಡು ರೈತರ ಮನದಲ್ಲಿ ಹೊಸ ಕನಸು ಚಿಗುರುದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment