/newsfirstlive-kannada/media/post_attachments/wp-content/uploads/2024/07/KWR-RAIN-3.jpg)
ರಾಜ್ಯದಲ್ಲಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಹಲವೆಡೆ ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಗುಡ್ಡಗಳು ಕುಸಿಯುತ್ತಿವೆ. ಅದೆಷ್ಟೋ ಕುಟುಂಬ ಪರದಾಡುತ್ತಿವೆ. ರಾಜ್ಯದಲ್ಲಿ ಎಲ್ಲೆಲ್ಲಿ ಏನೇನು ಆಗಿದೆ ಅನ್ನೋ ಮಾಹಿತಿ ಇಲ್ಲಿದೆ.
ನೆರೆಯ ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುತ್ತಿದೆ. ಇದು ಕರ್ನಾಟಕದ ಜಲಾಶಯಗಳಲ್ಲಿ ಕಾಣುತ್ತಿದೆ. ಈಗಾಗಲೇ ಮೂರು ವಾರಗಳಿಂದ ಎಲ್ಲಾ ಜಲಾಶಯಗಳಿಗೆ ನೀರು ಯಥೇಚ್ಛವಾಗಿ ಹರಿದು ಬರುತ್ತಿದೆ. ಅದರಲ್ಲೂ ತುಂಗಾ, ಕಬಿನಿ ಸಹಿತ ಹಲವು ಜಲಾಶಯಗಳು ತುಂಬಿವೆ. ಈಗ ಹಾರಂಗಿ ಕೂಡ ಭರ್ತಿಯಾಗಿದೆ. ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಹತ್ತು ದಿನಗಳ ನಂತರ ಮತ್ತೆ ನೆರೆ ಸೃಷ್ಟಿ
ಉಡುಪಿ ಜಿಲ್ಲೆ ಮತ್ತು ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಕಾರಣ ಸುವರ್ಣ ನದಿ ತುಂಬಿ ಹರಿಯುತ್ತಿದೆ. ಉಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಲಾವೃತವಾಗಿದೆ. ಶಾಲಾ ಆವರಣದಲ್ಲಿರುವ ಅಂಗನವಾಡಿ ಕೇಂದ್ರ ಪಕ್ಕದಲ್ಲಿರುವ ಅಯ್ಯಪ್ಪ ಗುಡಿ, ಅಡುಗೆಮನೆ ಜಲಾವೃತವಾಗಿದೆ. ಬೇಳೂರು ದೇಲಟ್ಟು ಪರಿಸರದಲ್ಲಿನ ನೆರೆಯ ಪ್ರದೇಶದಿಂದ ಜನರನ್ನ ಎತ್ತರ ಪ್ರದೇಶಗಳಿಗೆ ಶಿಫ್ಟ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/rain-1.jpg)
ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಗಣನೀಯ ಏರಿಕೆ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಗಣನೀಯ ಏರಿಕೆಯಾಗಿದೆ. ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್​ನಿಂದ 65 ಸಾವಿರ ಕ್ಯೂಸೆಕ್ಸ್​ ಹೊರಗೆ ಬಿಡಲು ನಿರ್ಧರಿಸಲಾಗಿದೆ. ಜಲಾಶಯದ ಕೆಳಭಾಗದ ಗ್ರಾಮಸ್ಥರಿಗೆ ಹೈ ಅಲರ್ಟ್ ಸೂಚಿಸಲಾಗಿದೆ.
/newsfirstlive-kannada/media/post_attachments/wp-content/uploads/2024/07/Alamatti.jpg)
ತಡೆಗೋಡೆ ಕುಸಿತ, ₹56 ಕೋಟಿ ಕಾಮಗಾರಿ ನೀರಲ್ಲಿ ಹೋಮ
ಶಿವಮೊಗ್ಗದ ತೀರ್ಥಹಳ್ಳಿಯ ಕುರುವಳ್ಳಿ- ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 56 ಕೋಟಿ ರೂಪಾಯಿ ವೆಚ್ಚದ ತುಂಗಾ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಉದ್ಘಾಟನೆಗೊಂಡ ಕೆಲವೇ ತಿಂಗಳ ಬಳಿಕ ತಡೆಗೋಡೆ ಕುಸಿದು ಬಿದ್ದಿದ್ದು, ಖರ್ಚಾದ 56 ಕೋಟಿ ರೂಪಾಯಿ ನೀರಲ್ಲಿ ಹೋಮ ಮಾಡಿದಂತಾಗಿದೆ. ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ತಡೆಗೋಡೆ ಕುಸಿಯಲು ಕಾರಣ ಎಂದು ಹೇಳಲಾಗುತ್ತಿದೆ. ಡಿವೈಎಸ್​ಪಿ ಗಜಾನನ ವಾಮನ ಸುತಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/Shivmogga-1.jpg)
ಕಾವೇರಿ ಭಾಗದಲ್ಲಿ ವ್ಯಾಪಕ ಮಳೆ ಕೆಆರ್‌ಎಸ್ ಒಳಹರಿವು ಏರಿಕೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗ್ತಿದ್ದು, ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡಿದೆ. ನಿನ್ನೆ ಬೆಳಗ್ಗೆ 25 ಸಾವಿರದ 933 ಕ್ಯೂಸೆಕ್ ಇದ್ದ ಒಳಹರಿವು, ರಾತ್ರಿ 8 ಗಂಟೆವರೆಗೆ 35 ಸಾವಿರ 997 ಕ್ಯೂಸೆಕ್ಸ್​ ಒಳಹರಿವು ಏರಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 109.10 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 30.825 ಟಿಎಂಸಿ ನೀರು ತುಂಬಿದೆ.
/newsfirstlive-kannada/media/post_attachments/wp-content/uploads/2024/07/KRS-Dam-1-1.jpg)
ತುಂಬಿ ಹರಿಯುತ್ತಿದೆ ಹಾವೇರಿಯ ಜೀವನಾಡಿ ವರದಾ ನದಿ
ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಹಾವೇರಿ ಜಿಲ್ಲೆಯ ಜೀವನಾಡಿ ವರದಾ ನದಿ ತುಂಬಿ ಹರಿಯುತ್ತಿದೆ. ಹೀಗೆ ತುಂಬಿ ಹರಿಯುತ್ತರುವ ಬ್ರಿಜ್ಡ್ ಕಂ ಬ್ಯಾರೇಜ್ ಅನ್ನ ಜನರುಜೀವದ ಹಂಗು ತೊರೆದು ಬೈಕ್​ನಲ್ಲಿ ದಾಟುತ್ತಾ ಹುಚ್ಚಾಟ ಮೆರೆದಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದ ಸುತ್ತಮುತ್ತಲಿನ 5 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಒಟ್ಟಾರೆ ನದಿಗಳು ಉಕ್ಕಿ ಹರಿದು ನದಿ ಪಾತ್ರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ವರುಣನ ಅಬ್ಬರಕ್ಕೆ ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳ ಜನರು ಕಂಗೆಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us
/newsfirstlive-kannada/media/post_attachments/wp-content/uploads/2024/07/haveri-1.jpg)