/newsfirstlive-kannada/media/post_attachments/wp-content/uploads/2023/07/KRS-Dam-1.jpg)
ಮಂಡ್ಯ: ನಿರಂತರ ಮಳೆಯಿಂದಾಗಿ ಹಳ್ಳ, ನದಿಗಳು ತುಂಬುತ್ತಿವೆ. ಅತ್ತ ಕೃಷ್ಣರಾಜ ಸಾಗರದ ಸುತ್ತಲೂ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ಕಾವೇರಿ ಒಡಲು ಭರ್ತಿಯಾಗಿದೆ. ಇದರ ಪರಿಣಾಮವಾಗಿ ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಈಗಾಗಲೇ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 124.80 ಅಡಿಯಷ್ಟಿದ್ದು, ಇಂದು ಮಳೆಯಿಂದಾಗಿ 120.00 ಅಡಿಯಷ್ಟು ಏರಿಕೆ ಕಂಡಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಇಂದು 42.916 ಟಿಎಂಸಿ ಸಾಮರ್ಥ್ಯದಷ್ಟಿದೆ. ಇನ್ನು ಡ್ಯಾಂನ ಒಳಹರಿವು 51,374 ಕ್ಯೂಸೆಕ್ ಇದ್ದು, 4,714 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಇದನ್ನೂ ಓದಿ: ಅಮೆರಿಕಾಗೆ ಭಾರತದ ಹೊಸ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ ನೇಮಕ
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 120.00 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ.
ಇಂದಿನ ಸಾಮರ್ಥ್ಯ - 42.916 ಟಿಎಂಸಿ
ಒಳ ಹರಿವು - 51,374 ಕ್ಯೂಸೆಕ್
ಹೊರ ಹರಿವು - 4,714 ಕ್ಯೂಸೆಕ್
ರಂಗನತಿಟ್ಟು ದೋಣಿ ವಿಹಾರ ಬಂದ್
ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ರಂಗನತಿಟ್ಟು ಪಕ್ಷಿಧಾಮದ ದೋಣಿ ವಿಹಾರ ಬಂದ್ ಮಾಡಲಾಗಿದೆ.
ನದಿಯ ಸೆಳೆತ ಹೆಚ್ಚಿರುವ ಕಾರಣಕ್ಕೆ ದೋಣಿ ವಿಹಾರ ಬಂದ್ ಮಾಡಲಾಗಿದೆ. ಇಂದಿನಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ವೀಕ್ಷಣೆಗೆ ಮಾತ್ರ ಅವಕಾಶವಿದೆ.
ಇದನ್ನೂ ಓದಿ: ಖೈದಿಗಳ ಹಾಟ್ ಫೇವರೇಟಂತೆ ‘ಕರಿಯ’ನ ಈ ಹಾಡು! ರೌಡಿಗಳ ಆ್ಯಂಥಮ್ ಆಗ್ಬಿಟ್ಟಿದೆ ದರ್ಶನ್ ಸಿನಿಮಾ ಗೀತೆ!
ಡ್ಯಾಂನಿಂದ ನೀರು ಬಿಡುಗಡೆ ನಿಲ್ಲಿಸಿದ ಬಳಿಕವಷ್ಟೇ ದೋಣಿ ವಿಹಾರಕ್ಕೆ ಅವಕಾಶ ಮಾಡಲಾಗುತ್ತದೆ ಎಂದು ಮೈಸೂರು ವನ್ಯಜೀವಿ ವಿಭಾಗದಿಂದ ಪ್ರಕಟಣೆ ಹೊರಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ