ಮಳೆಯ ರಣಾರ್ಭಟ.. ಇಂದು ಈ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

author-image
AS Harshith
Updated On
ಭಾರೀ ಮಳೆ.. ರಾಜ್ಯದ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Advertisment
  • ಗುಡ್ಡ ಕುಸಿತ ಪ್ರಕರಣ.. ಮುಂದುವರೆದ ಕಾರ್ಯಾಚರಣೆ
  • ಮಣ್ಣಿನಡಿ ಟಿಂಬರ್ ತುಂಬಿದ ಲಾರಿ ಮತ್ತು ಡ್ರೈವರ್​ ಇರೋ ಶಂಕೆ
  • ಒಳಹರಿವು ಹೆಚ್ಚಳ.. ಅಪಾಯದ ಮಟ್ಟ ಮೀರಿ ಹರಿಯುತ್ತಿದೆಯಾ ಈ ನದಿ?

ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆಯ ಅಬ್ಬರಕ್ಕೆ ಜನರ ಜೀವನ ಕೂಡ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಬೇಸಿಗೆಗೆ ಬೇಸತ್ತಿದ್ದ ಜನ, ಮಳೆ ಬಂದ್ರೆ ಸಾಕಪ್ಪಾ ಅಂತಿದ್ರು. ಇದೀಗ ಅದೇ ಜನ ಮಳೆ ನಿಂತರೆ ಸಾಕಪ್ಪಾ ಅಂತಾ ಕಾಯುವಂತಾಗಿದೆ.

ಶಿರೂರು ಗುಡ್ಡ ಕುಸಿತದಲ್ಲಿ ಮುಂದುವರೆದ ಕಾರ್ಯಾಚರಣೆ

ಉತ್ತರ ಕನ್ನಡ ಜಿಲ್ಲೆ ಗುಡ್ಡದ ಭೂತ ಈಗಾಗಲೇ 8 ಮಂದಿಯನ್ನು ಬಲಿ ಪಡೆದಿರುವ ಮಣ್ಣು ಮತ್ತೆ ಮತ್ತೆ ಜರಿದು ಆತಂಕ ಸೃಷ್ಟಿಸಿದೆ. ಮಳೆ ನಡುವೆಯೂ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆಯನ್ನು ಸಿಬ್ಬಂದಿ ಮುಂದುವರೆಸಿದ್ದಾರೆ. 14 ರಿಂದ 15 ಮಂದಿ ಮಣ್ಣಿನಡಿ ಸಿಲುಕಿದ್ದಾರೆಂದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಬೆಚ್ಚಿ ಬೀಳಿಸಿದೆ. ಈವರೆಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾಗಿದೆ. ಇತ್ತ SDRF, NDRF, ಪೊಲೀಸ್​, ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ ಓದಿ: ನೈಸ್​ ರೋಡಲ್ಲಿ ಹೋಗೋ ವಾಹನ ಮಾಲೀಕರಿಗೆ ಬಿಗ್​ ಶಾಕ್​​.. ಟೋಲ್​​ ಭಾರೀ ಹೆಚ್ಚಳ

publive-image

ಗುಡ್ಡದ ಭೂತಕ್ಕೆ ಟಿಂಬರ್ ತುಂಬಿದ ಲಾರಿ ಜೊತೆ ಚಾಲಕ ಕಣ್ಮರೆ

ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣ ವೇಳೆ ಲಾರಿ ಜಿಪಿಎಸ್ ಲೋಕೇಷನ್ ಪತ್ತೆಯಾಗಿದೆ. ಜೋಯಿಡಾ ರಾಮನಗರದ ಜಗಳಪೆಟ್​ದಿಂದ ಕಟ್ಟಿಗೆ ತುಂಬಿದ್ದ 12 ಚಕ್ರದ ಲಾರಿ ಕೇರಳಕ್ಕೆ ಪ್ರಯಾಣಿಸುತ್ತಿತ್ತು. ಶಿರೂರು ಲಕ್ಷ್ಮಣ ನಾಯ್ಕ್​ರ ಹೋಟೆಲ್​ನಲ್ಲಿ ಖಾಯಂ ಟೀ ಕುಡಿಯುತ್ತಿದ್ದ ಲಾರಿ ಚಾಲಕ ಅರ್ಜುನ್, ಮಂಗಳವಾರ ಬೆಳಗ್ಗೆ 4 ಗಂಟೆಗೆ ಗುಡ್ಡ ಕುಸಿತದ ಸ್ಥಳದಲ್ಲಿಯೇ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಲಾರಿ ಸಮೇತ ಅರ್ಜುನ್ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಷಯ ತಿಳಿದು ಅರ್ಜುನ್ ಕುಟುಂಬಸ್ಥರು ಕೂಡ ಸ್ಥಳಕ್ಕಾಗಮಿಸಿದ್ದಾರೆ. ತ್ವರಿತ ಕಾರ್ಯಾಚರಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಅರ್ಜುನ್ ಸಹೋದರ ಅಭಿಜಿತ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸುಕುಮಾರ್​​, ಅಲ್ಲು ಅರ್ಜುನ್​​ ಮಧ್ಯೆ ಬಿರುಕು.. ಅರ್ಧಕ್ಕೆ ನಿಂತು ಹೋಯ್ತಾ ಪುಷ್ಪಾ-2 ಸಿನಿಮಾ?

publive-image

ಕೃಷ್ಣಾ, ಹಿಪ್ಪರಗಿ, ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಹೆಚ್ಚಳ

ಮಹಾರಾಷ್ಟ್ರದಿಂದ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇತ್ತ ಹಿಪ್ಪರಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದ ಹೆಚ್ಚಾಗಿದೆ. 76 ಸಾವಿರದ 988 ಕ್ಯೂಸೆಕ್ಸ್​ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನ ಹೊರ ಬಿಡಲಾಗುತ್ತಿದೆ. ಹಿಪ್ಪರಗಿ ಜಲಾಶಯದ ಮೂಲಕ ಕೃಷ್ಣಾ ನದಿ ನೀರು ಶ್ರಮಬಿಂದು ಸಾಗರದ ತಲುಪಿ ಅಲ್ಲಿಂದ ಆಲಮಟ್ಟಿ ಜಲಾಶಯವನ್ನ ತಲುಪುತ್ತಿದೆ. ಸದ್ಯ ಆಲಮಟ್ಟಿ ಜಲಾಶಯದಲ್ಲಿ 98 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ; ಈ ರಾಶಿಯವರಿಗೆ ಉದ್ಯೋಗದಲ್ಲಿ ಭಾರೀ ಒತ್ತಡ; ಇಲ್ಲಿದೆ ಇಂದಿನ ಭವಿಷ್ಯ

publive-image

ಮನೆ ಗೋಡೆ ಕುಸಿತ, ಕ್ಷಣಾರ್ಧದಲ್ಲಿ ಬಚಾವ್ ಆದ ಕುಟುಂಬ

ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿನ ಗೋಲಿಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗೋಲಿಹಳ್ಳಿ ಗ್ರಾಮದ ಶಿವಪ್ಪಾ ನಿಂಗಪ್ಪಾ ಕಮತಗಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿತಕೊಂಡು, ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರು ತಕ್ಷಣವೇ ಮನೆಯಿಂದ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

publive-image

ಮಳೆಯ ಅಬ್ಬರ, 5 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜಿಗೆ ರಜೆ

ಉತ್ತರ ಕನ್ನಡದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಜಿಲ್ಲೆಯ ಹತ್ತು ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಾಗೆ ದಕ್ಷಿಣ ಕನ್ನಡದಲ್ಲೂ ರೆಡ್ ಅಲರ್ಟ್ ಇರುವ ಕಾರಣ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ಸೇರಿ 5 ತಾಲೂಕಿನ ವಿದ್ಯಾರ್ಥಿಗಳಿಗೆ ರಜೆಯನ್ನ ಸೂಚಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಸೇರಿ 5 ತಾಲೂಕಿನ ಶಿಕ್ಷಣ ಸಂಸ್ಥೆಗೆ ರಜೆ ಆದೇಶ ಹೊರಡಿಸಲಾಗಿದೆ. ಕೊಡಗಿನಲ್ಲಿ‌ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ, ಮಿಕ್ಕ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶಿಸಿದ್ದಾರೆ.

publive-image

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಅಘನಾಶಿನಿ, ವರದಾ ಹಾಗೂ ಬೇಡ್ತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಯಲ್ಲಾಪುರದ ಮಾಗೋಡು, ಸಾತೋಡ್ಡಿ, ಶಿರಸಿಯ ಮುರೇಗಾರ, ಶಿವಗಂಗಾ, ಬೆಣ್ಣೆಹೊಳೆ ಜಲಪಾತ, ಸಿದ್ದಾಪುರದ ಉಂಚಳ್ಳಿ, ಬುರುಡೆ ಜಲಪಾತ ಸೇರಿದಂತೆ ಹಲವು ಜಲಪಾತಗಳಿಗೆ ನಿರ್ಬಂಧ ಹೇರಲಾಗಿದೆ.

publive-image

ಒಟ್ಟಾರೆ, ರಾಜ್ಯದಲ್ಲಿ ಮಳೆ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ. ಹೀಗಾಗಿ ಜನರೇ ಬಿ. ಅಲರ್ಟ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment