KRS Dam: ಕಾವೇರಿ ಜಲಧಾರೆಗೆ ತುಂಬುತ್ತಿದೆ ಅಣೆಕಟ್ಟು.. ಇಂದು ಕೆಆರ್​ಎಸ್​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

author-image
AS Harshith
Updated On
ಕಾವೇರಿದ ಕಾವೇರಿ ಕಿಚ್ಚು; ನಾಳೆ ಬಂದ್​​; ಕಾಂಗ್ರೆಸ್​ ಸರ್ಕಾರದ ವಿರುದ್ಧ ಬೀದಿಗಿಳಿದ ಸುಮಲತಾ ಅಂಬರೀಶ್​
Advertisment
  • ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟು
  • ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಎಷ್ಟು ಅಡಿ ತಲುಪಿದೆ?
  • KRSನ ಒಳ ಹರಿವು, ಹೊರ ಹರಿವಿನ ಬಗ್ಗೆ ಮಾಹಿತಿ ಇಲ್ಲಿದೆ

ಮಂಡ್ಯ: ರಾಜ್ಯದಲ್ಲಿ ಹಲವೆಡೆ ಮಳೆ ಸುರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದೆ. ಹೀಗಾಗಿ ಕೆಆರ್​ಎಸ್​​ ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಹೆಚ್ಚುತ್ತಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಮಳೆ ನೀರು ಹರಿದುಬರುತ್ತಿದೆ. ಸದ್ಯ 104.30 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.

ಇದನ್ನೂ ಓದಿ: 10 ಲಕ್ಷ ಭಾರತದ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! ಶನಿ ದೇವರ ವಾಹನವನ್ನೇ ಹತ್ಯೆ ಮಾಡ್ತಿದ್ದಾರೆ ಇಲ್ಲಿ!

124.80 ಅಡಿ ಗರಿಷ್ಠ ಮಟ್ಟದ ಅಣೆಕಟ್ಟೆ ಇದಾಗಿದ್ದು, ಡ್ಯಾಂಗೆ 6,146 ಕ್ಯೂಸೆಕ್ ಒಳಹರಿವು ಬರುತ್ತಿದೆ. ಡ್ಯಾಂನಿಂದ ನಾಲೆ, ಕುಡಿಯುವ ನೀರಿಗಾಗಿ 1972 ಕ್ಯೂಸೆಕ್ ಹೊರಕ್ಕೆ ಹರಿಸಲಾಗುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 26.372 ಟಿಎಂಸಿ ನೀರು ಸಂಗ್ರಹವಾಗುತ್ತಿದೆ.

ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 104.30 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 26.372 ಟಿಎಂಸಿ
ಒಳ ಹರಿವು - 6,146 ಕ್ಯೂಸೆಕ್
ಹೊರ ಹರಿವು - 1,972 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment