newsfirstkannada.com

Karnataka Rain: ಪಶ್ಚಿಮಘಟ್ಟದಲ್ಲಿ ಭಾರೀ ಮಳೆ.. ಹೊಲ-ಗದ್ದೆ ತೋಟಗಳು ಜಲಾವೃತ.. ರೈತ ಕಂಗಾಲು

Share :

Published July 25, 2023 at 8:52am

Update July 25, 2023 at 10:10am

    ಚಿಕ್ಕಮಗಳೂರಲ್ಲಿ ಮಳೆಯಿಂದ ಭಾರೀ ಅನಾಹುತ

    ತುಂಬಿ ಹರಿದ ಐತಿಹಾಸಿಕ ಪ್ರಸಿದ್ಧ ಮದಗದ ಕೆರೆ

    ಅಧಿಕಾರಿಗಳು ಪ್ರವಾಸಿಗರಿಗೆ ಕೊಟ್ಟ ಎಚ್ಚರಿಕೆ ಏನು?

ಚಿಕ್ಕಮಗಳೂರು: ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯಾಗುತ್ತಿದ್ದು ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಸುತ್ತ-ಮುತ್ತ ಧಾರಾಕಾರ ಮಳೆಯಾದ ಪರಿಣಾಮ ಹೊಲ-ಗದ್ದೆಗಳು, ತೋಟಗಳು ಜಲಾವೃತಗೊಂಡಿವೆ.

ಇನ್ನು ಮದಗದ ಕೆರೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹೆಚ್ಚಳವಾಗಿದೆ. ಕಳೆದ 15 ದಿನಗಳ ಹಿಂದೆ ಕರೆ ಸಂಪೂರ್ಣ ಖಾಲಿಯಾಗಿತ್ತು. ಇದೀಗ 2000 ಎಕರೆ ವಿಸ್ತೀರ್ಣದ ಕೆರೆಯು ಸಂಪೂರ್ಣ ಭರ್ತಿ ಹೊಂದಿದೆ. ಈ ಮೂಲಕ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ. ಆದರೆ ಹೊಲ, ಗದ್ದೆಗಳಿಗೆ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ರೈತ ಕಂಗಾಲ್ ಆಗಿದ್ದಾನೆ.

ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಯಾರೂ ಬರಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮನವಿ ಮಾಡಿಕೊಂಡಿದ್ದಾರೆ. ನದಿಗಳು ಅಪಾಯ ಮಿರಿ ಹರಿಯುತ್ತಿವೆ. ಜಲಪಾತಗಳು ಡೇಂಜರಸ್ ಆಗಿ ಕಾಣುತ್ತಿವೆ. ಭೂ ಕುಸಿತದ ಪ್ರಕರಣಗಳು ಕೂಡ ಹೆಚ್ಚಾಗಿವೆ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಪ್ರವಾಸವನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Rain: ಪಶ್ಚಿಮಘಟ್ಟದಲ್ಲಿ ಭಾರೀ ಮಳೆ.. ಹೊಲ-ಗದ್ದೆ ತೋಟಗಳು ಜಲಾವೃತ.. ರೈತ ಕಂಗಾಲು

https://newsfirstlive.com/wp-content/uploads/2023/07/CKM_RAIN-1.jpg

Load More