Karnataka Rain: ಮಳೆಯಿಂದ ಸರಣಿ ಅಪಘಾತ.. ರಾಜ್ಯದಲ್ಲಿ ನಿನ್ನೆ ಏನೆಲ್ಲ ನಡೆಯಿತು..?

author-image
Ganesh
Updated On
Karnataka Rain: ಮಳೆಯಿಂದ ಸರಣಿ ಅಪಘಾತ.. ರಾಜ್ಯದಲ್ಲಿ ನಿನ್ನೆ ಏನೆಲ್ಲ ನಡೆಯಿತು..?
Advertisment
  • ಹಾಸನದಲ್ಲಿ ವರುಣನಾರ್ಭಟಕ್ಕೆ ಕಾರು ಪಲ್ಟಿ.. ಇಬ್ಬರು ಸಾವು!
  • ರೆಡ್ ಅಲರ್ಟ್.. ಶಾಲಾ ಕಾಲೇಜುಗಳಿಗೆ ಇಂದು, ನಾಳೆ ರಜೆ
  • ಮಳೆಗೆ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಮಗುಚಿ ಬಿದ್ದ ಲಾರಿ

ಎರಡೂವರೆ ದಶಕಗಳ ಬಳಿಕ ರಾಜ್ಯದಲ್ಲಿ ಮಾನ್ಸೂನ್​ ಅವಧಿಗೂ ಮುಂಚೆನೇ ಎಂಟ್ರಿ ಕೊಟ್ಟಿದೆ. ರಾಜ್ಯಕ್ಕೆ ಅವಧಿ ಪೂರ್ವಕ್ಕೂ ಮೊದಲೇ ಎಂಟ್ರಿ ಕೊಟ್ಟಿರೋ ಮುಂಗಾರು ತನ್ನ ಆಟ ಶುರು ಮಾಡಿದೆ. ಆರಂಭದಲ್ಲೇ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣ ಅವಾಂತರ ಸೃಷ್ಟಿಸ್ತಾ ಜನರನ್ನ ಹೈರಾಣಾಗಿಸಿದ್ದಾನೆ. ಕಾಲಿಟ್ಟ ಎರಡೇ ದಿನಕ್ಕೆ ಮುಂಗಾರು ಜನರನ್ನ ಕಂಗಾಲಾಗಿಸಿ ಬಿಟ್ಟಿದೆ.

ಕಾರು ಪಲ್ಟಿ.. ಇಬ್ಬರು ಸಾವು!

ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ರಸ್ತೆ ಕಾಣದಂತಾಗಿ ಸಕಲೇಶಪುರಕ್ಕೆ ಹೋಗುತ್ತಿದ್ದ ಕಾರು ಬಾಗೇ ಗ್ರಾಮದ ಬಳಿ ಡಿವೈಡರ್​ಗೆ ಡಿಕ್ಕಿ ಹೊಡೆದು ಅಭಿಷೇಕ್ ಮತ್ತು ದೀಪು ಎಂಬ ದುರ್ದೈವಿಗಳು ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಗಂಭೀರ ಗಾಯಗಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಲೇಜುಗಳಿಗೆ ಇಂದು, ನಾಳೆ ರಜೆ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮೇ 28 ರ ವರೆಗೆ ಭಾರೀ ಮಳೆಯಾಗುವ ಮುಸ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ‌ ಶಾಲಾ-ಕಾಲೇಜುಗಳಿಗೆ ಇಂದು ಮತ್ತೆ ನಾಳೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.

publive-image

ಮಳೆಗೆ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲಿ ಮಗುಚಿ ಬಿದ್ದ ಲಾರಿ

ಸುರಿದ ಮಳೆಗೆ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಗೊಬ್ಬರ ತುಂಬಿಸಿಕೊಂಡು ಕೊಡಗಿನ ಕಡೆಗೆ ಹೋಗುತ್ತಿದ್ದ ತಮಿಳುನಾಡು ಮೂಲದ ಲಾರಿ ಮುಗುಚಿ ಬಿದ್ದ ಘಟನೆ ಮೈಸೂರಿನ ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ನಡೆದಿದೆ.

publive-image

ಓವರ್ ಟೇಕ್ ಮಾಡೋ ಬರದಲ್ಲಿ ಪಲ್ಟಿಯಾದ ಖಾಸಗಿ ಬಸ್

ಸುರಿಯುತ್ತಿರೋ ಮಳೆಯ ನಡುವೆ ಕೆಎಸ್​ಆರ್​ಟಿಸಿ ಬಸ್​ ಅನ್ನ ಓವರ್​ ಟೇಕ್​ ಮಾಡೋ ಬರದಲ್ಲಿ ಖಸಗಿ ಬಸ್ ಪಲ್ಟಿಯಾದ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಇನ್ನೂ ಬಸ್​ನಲ್ಲಿದ್ದ ಪ್ರಯಾಣಿಕರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

publive-image

ಕಾಫಿನಾಡಲ್ಲಿ ದಾಖಲೆಯ ಮಳೆ.. 222 ಮಿ.ಮೀ ತೀವ್ರತೆ ದಾಖಲು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್.. ಕೊಟ್ಟಿಗೆಹಾರ ಭಾಗದಲ್ಲಿ 222 ಮಿಲ್ಲಿ ಮಿಟರ್​ನಷ್ಟು ದಾಖಲೆಯ ಮಳೆಯಾಗಿದ್ದು, ಇದು ರಾಜ್ಯದಲ್ಲೇ ಅತೀ ಹೆಚ್ಚು ಎಂದು ಹೇಳಲಾಗ್ತಿದೆ. ಇಂದು ಕೂಡ ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ಅನ್ನ ಘೋಷಣೆ ಮಾಡಲಾಗಿದ್ದು, ಚಾರ್ಮಾಡಿ, ಕೊಟ್ಟಿಗೆಹಾರ, ಬಣಕಲ್ ಭಾಗದಲ್ಲಿ ಎಚ್ಚರ ವಹಿಸಲಾಗಿದೆ.

ಮಳೆಗೆ ಜೀವ ಕಳೆ ಪಡೆದುಕೊಂಡ ಶಿವಮೊಗ್ಗದ ಜಲಾಶಯಗಳು

ಶಿವಮೊಗ್ಗದ ಶೃಂಗೇರಿ ಹಾಗೂ ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗ್ತಿದೆ. ಮಾನ್ಸೂನ್ ಆರಂಭದಲ್ಲೇ ತುಂಗಾ, ಭದ್ರಾ ಹಾಗೂ ಶರಾವತಿ ನದಿಯಲ್ಲಿ ಒಳ ಹರಿವು ಹೆಚ್ಚಳವಾಗಿದೆ. ಈಗಾಗ್ಲೇ ತುಂಗಾ ಡ್ಯಾಂ ಗರಿಷ್ಟ ಮಟ್ಟ ತಲುಪಿದ್ದು, 8 ಕ್ರಸ್ಟ್ ಗೇಟ್​ಗಳಿಂದ ನೀರು ನದಿಗೆ ಬಿಡುಗಡೆ ಮಾಡಲಾಗ್ತಿದೆ.

publive-image

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದ ಹಿನ್ನೆಲೆ ಕೆಆರ್‌ಎಸ್ ಡ್ಯಾಂನಲ್ಲಿ ಬೆಳಗ್ಗೆ 2 ಸಾವಿರ ಕ್ಯೂಸೆಕ್​ ಒಳ ಹರಿವಿದ್ದ ಪ್ರಮಾಣ ಇದೀಗ 8 ಸಾವಿರದ 869 ಕ್ಯೂಸೆಕ್​​ನಷ್ಟಾಗಿದೆ. ಜೂನ್​ಗೂ ಮೊದಲೇ ಒಳ ಹರಿವು ಹೆಚ್ಚಳದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಅಫಜಲಪುರ ಪಟ್ಟಣದಲ್ಲಿ ಭಾರೀ ಮಳೆ.. ರಸ್ತೆಗಳು ಜಲಾವೃತ

ಅಫಜಲಪುರ ಪಟ್ಟಣದಲ್ಲಿ ರಸ್ತೆಗಳು ಜಲಾವೃತವಾಗಿ.. ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ಮಿಶ್ರೀತ ಚರಂಡಿ ನೀರು ರಸ್ತೆಗೆ ಹರಿದು ಬಂದು ಈ ಅವಾಂತರ ಸೃಷ್ಟಿಯಾಗಿದೆ. ಧವಸ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಜ್ಞಾನ ಭಾರತಿ NGF ಲೇಔಟ್​ನಲ್ಲಿ ಧರೆಗುರುಳಿದ ಮರ

ರಾಜಧಾನಿ ಬೆಂಗಳೂರಿನ ಜ್ಞಾನ ಭಾರತಿಯ ಎನ್‌ಜಿಎಫ್ ಲೇಔಟ್​ನಲ್ಲಿ ಮತ್ತೊಂದು ಮರ ಧರೆಗುರುಳಿದೆ. ತಡರಾತ್ರಿ ಕಳೆದ್ರೂ ಬಿಬಿಎಂಪಿಯವರು ಮರ ತೆರವುಗೊಳಿಸಿಲ್ಲ.. ಫೋನ್ ಮಾಡಿದ್ರು ಸಂಪರ್ಕಕ್ಕೆ ಸಿಗುತ್ತಿಲ್ಲ ಅಂತಿದ್ದಾರೆ ಸ್ಥಳೀಯರು.

publive-image

ನಿಪ್ಪಾಣಿ ತಾಲೂಕಿನ ಮೂರು ಸೇತುವೆಗಳು ಜಲಾವೃತ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದೆ. ಬೆಳಗಾವಿಯ ನಿಪ್ಪಾಣಿಯ ವೇದಗಂಗಾ ನದಿಯ ಅಕ್ಕೋಳ-ಸಿದ್ನಾಳ, ಕುನ್ನೂರ-ಸಿದ್ನಾಳ ಸೇತುವೆ.. ದೂದಗಂಗಾ ನದಿಯ ಬಾರವಾಡ-ಕುನ್ನೂರ ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಇದಿಷ್ಟು ರಾಜ್ಯದಲ್ಲಿ ಮಳೆರಾಯ ತಂಡ ಅವಾಂತರಗಳು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment