newsfirstkannada.com

ಮಂಡ್ಯ, ಕೊಪ್ಪಳ, ಧಾರವಾಡ ಸೇರಿ ರಾಜ್ಯದ ಹಲವೆಡೆ ಭರ್ಜರಿ ಮಳೆ.. ಬಿರುಗಾಳಿಗೆ ಭಾರೀ ಅನಾಹುತ

Share :

Published April 18, 2024 at 7:00pm

  ಬಿಸಿಲು ಸಾಕಪ್ಪ ಸಾಕು ಎಂದಿದ್ದ ಜನರಿಗೆ ಮಳೆಯ ಹನಿಗಳ ಸಿಂಚನ

  ಈ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು ನಗರದಲ್ಲಿ ಆಲಿಕಲ್ಲು ಮಳೆ

  ಇಂದು ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಬಂದಿದೆ ಗೊತ್ತಾ..?

ರಾಜ್ಯದಲ್ಲಿ ಬಿಸಿಲಿನ ಜಳಕ್ಕೆ ರೋಸಿ ಹೋಗಿರುವ ಜನರಿಗೆ ವರುಣನು ತಥಸ್ತು ಎಂದಿದ್ದಾನೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಗರಗಳಲ್ಲಿ ಬೀದಿಬದಿ ವ್ಯಾಪಾರಿಗಳು, ಪ್ರಯಾಣಿಕರು ಮಳೆಯಿಂದ ಪರದಾಡಿದ್ದಾರೆ. ಕೆಲವು ಪ್ರದೇಶದಲ್ಲಿ ಆಲಿಕಲ್ಲು ಸಹಿತ ವರುಣ ಆರ್ಭಟಿಸಿದ್ದರಿಂದ ಜನರು ಬಿಸಿಲಿನ ಶೆಕೆ ತಪ್ಪಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಧಾರವಾಡ, ಗದಗ, ದಾವಣಗೆರೆ ಹಾಗೂ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಕೆಲ ಪ್ರದೇಶಗಳನ್ನ ಮಳೆ ತಂಪಾಗಿಸಿದೆ.

ಕೊಪ್ಪಳ
ಈ ಬಾರಿ ಬೇಸಿಗೆಯಲ್ಲೇ ಮಳೆ ಶುರುವಾಗಿದ್ದು ಕೊಪ್ಪಳದಲ್ಲಿ ಗಾಳಿ ಸಮೇತ ಮಳೆಯಾಗಿದೆ. ಬಿಸಿಲನ್ನು ಸಾಕಪ್ಪ ಸಾಕು.. ಸಾಕು ಎಂದಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಗುಡುಗು ಗಾಳಿ ಸಮೇತ ಮಳೆ ಸುರಿದಿದೆ.

ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ ಮಕ್ಕಳು ಸೇರಿ 19 ಸಾವು.. ಧಾರಾಕಾರ ಮಳೆಗೆ ಜನ, ಜಾನುವಾರಗಳು ಸುಸ್ತೋ, ಸುಸ್ತು! 

ಧಾರವಾಡ
ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ನಗರದಲ್ಲಿ ಮಧ್ಯಾಹ್ನದವರೆಗೆ ಉರಿ ಬಿಸಿಲು ಇತ್ತು. ಆದರೆ ಮಧ್ಯಾಹ್ನದ ನಂತರ ಸಂಪೂರ್ಣ ಮೋಡ ಕವಿದ ವಾತಾವರಣ ಉಂಟಾಗಿ ಬಿಸಿಲಿನಿಂದ ಕೆಂಗೆಟ್ಟಿದ್ದ ಜನರಿಗೆ ಮಳೆ ಕೂಲ್​.. ಕೂಲ್ ಮಾಡಿದೆ.

ಗದಗ
ಧಾರಾಕಾರವಾಗಿ ಗದಗದಲ್ಲಿ ಮಳೆ ಬಂದಿದ್ದು ರೈತರು ಫುಲ್ ಖುಷ್ ಆಗಿದ್ದಾರೆ. 40 ಡಿಗ್ರಿವರೆಗೂ ತಾಪಮಾನ ತಲುಪಿತ್ತು. ಮೊದಲೇ ಬರಗಾಲ ಎಲ್ಲರಿಗೂ ಬಿಸಿ ಮುಟ್ಟಿಸಿತ್ತು. ಆದರೆ ಮಳೆ ಬಂದಿದ್ದರಿಂದ ಜನರು ಮತ್ತು ರೈತರ ಮೊಗದಲ್ಲಿ ಮಂದಹಾಸ ಅರಳಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ನದಿಯಂತಾದ ಏರ್​ಪೋರ್ಟ್​.. ಶಾಪಿಂಗ್ ಮಾಲ್,​ ಮೆಟ್ರೋ ನಿಲ್ದಾಣದಲ್ಲೆಲ್ಲ ನೀರೋ ನೀರು!

ಶಿರಹಟ್ಟಿ ತಾಲೂಕಿ‌‌ನ ಪರಸಾಪೂರ ಬಳಿ ಬಿರುಗಾಳಿ ಸಮೇತ ಮಳೆಯಾಗಿದ್ದರಿಂದ ಬೃಹತ್ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ಸ್ಥಳೀಯರ ಸಹಾಯದಿಂದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ‌ ಅನುಕೂಲ ಮಾಡಿಕೊಡಲಾಗಿದೆ.

ರಾಮನಗರ
ರೇಷ್ಮೆನಗರಿಗೆ ವರುಣ ದೇವನ ಆಗಮನವಾಗಿದ್ದು ವರ್ಷದ ಮೊದಲ‌ ಮಳೆಯಿಂದ ಜಿಲ್ಲೆಯ ಜನರಿಗೆ ಸಂತಸವಾಗಿದೆ. ಕನಕಪುರದಲ್ಲಿ ವರುಣನ ಸಿಂಚನದಿಂದ ಜನರು ಖುಷಿ ಪಟ್ಟಿದ್ದಾರೆ. ಕೊಂಚ ಮಳೆಯಿಂದ ಮರಗಿಡಗಳು ನಿಟ್ಟುಸಿರು ಬಿಟ್ಟಿವೆ.

ಬಳ್ಳಾರಿ
ಬಳ್ಳಾರಿಯ ಹಲವೆಡೆ ಜೋರು ಮಳೆ ಬಂದಿದ್ದು ಜನರು ಆನಂದವಾಗಿದ್ದಾರೆ. ಜಿಲ್ಲೆಯ ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ತೋರಣಗಲ್ಲಿನಲ್ಲಿ ಗುಡುಗು ಸಮೇತ ವರುಣ ತಂಪೆರೆದಿದ್ದು ಅರ್ಧಗಂಟೆಗೂ ಹೆಚ್ಚುಕಾಲ ಸುರಿದಿದೆ.

ಇದನ್ನೂ ಓದಿ: 4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

ದಾವಣಗೆರೆ
ಮಳೆ ಜೊತೆಗೆ ಜೋರಾದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ, ಬೇವಿನ ಮರ ಮುರಿದು ಬಿದ್ದಿವೆ. ದಾವಣಗೆರೆಯ ಜಯದೇವ ಸರ್ಕಲ್ ಮುಂಭಾಗದ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು 3 ಸ್ಕೂಟಿಗಳ ಮೇಲೆ ಬಿದ್ದಿದ್ದರಿಂದ ಮೂರು ಸ್ಕೂಟಿಗಳು ಜಖಂ ಆಗಿವೆ. ಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಆಗಿತ್ತು. ಇನ್ನು ಮರ ಹಾಗೂ ವಿದ್ಯುತ್ ಕಂಬವನ್ನು ಬೆಸ್ಕಾಂ ಮತ್ತು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ RCB ಸೇರ್ತಾರಾ ಕೆ.ಎಲ್​​ ರಾಹುಲ್​​..? ಕನ್ನಡಿಗನ ಈ ಹೇಳಿಕೆ ಹಿಂದಿನ ಮರ್ಮವೇನು?

ಮಂಡ್ಯ
ಸಕ್ಕರೆ ನಗರಿ ಮಂಡ್ಯಕ್ಕೆ ವರುಣನ ಸಿಂಚನವಾಗಿದೆ. ಮಂಡ್ಯ ನಗರ, ಮಳವಳ್ಳಿ ತಾಲೂಕಿನ ಕೆಲವೆಡೆ 20 ನಿಮಿಷ ಮಳೆ ಸುರಿದಿದೆ. ಬಿಸಿಲಿಗೆ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆಯಿಂದ ರೈತರ‌ ಮೊಗದಲ್ಲಿ ಮಂದಹಾಸ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ, ಕೊಪ್ಪಳ, ಧಾರವಾಡ ಸೇರಿ ರಾಜ್ಯದ ಹಲವೆಡೆ ಭರ್ಜರಿ ಮಳೆ.. ಬಿರುಗಾಳಿಗೆ ಭಾರೀ ಅನಾಹುತ

https://newsfirstlive.com/wp-content/uploads/2024/04/RAIN_1-1.jpg

Load More