Advertisment

ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ

author-image
Bheemappa
Updated On
ಮುಂಗಾರುಗೆ ಮೊದಲೇ ಆರ್ಭಟಿಸ್ತಿರೋ ವರುಣ.. ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ, ಸಿಡಿಲಿಗೆ ಇಬ್ಬರು ಬಲಿ
Advertisment
  • ಮೃತ ಬಾಲಕನ ಕುಟುಂಬಸ್ಥರಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ
  • ಇಷ್ಟು ದಿನ ಬಿಸಿಲಿನಿಂದ ಬೇಸತ್ತಿದ್ದ ಜಿಲ್ಲೆಯ ಜನರಿಗೆ ತಂಪೆರೆದ ಮಳೆರಾಯ
  • ಸುರಿದ ಸಣ್ಣ ಮಳೆಗೆ 15ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿವೆ

ರಾಜ್ಯದ ಒಂದರ ನಂತರ ಒಂದು ಜಿಲ್ಲೆಗಳಿಗೆ ಮಳೆರಾಯ ತಂಪೆರೆಯುತ್ತಾ ಬರುತ್ತಿದ್ದಾನೆ. ಆದ್ರೆ ವರುಣನ ಅಬ್ಬರಕ್ಕೆ ಕೆಲ ಅವಘಡಗಳು ಸಂಭವಿಸಿವೆ. ಇಬ್ಬರು ಪ್ರಾಣ ಚೆಲ್ಲಿದ್ರೆ ವಾಹನ ಸವಾರರು ಜಾರಿ ರಸ್ತೆಯಲ್ಲಿ ಬೀಳುತ್ತಿದ್ದಾರೆ.

Advertisment

ಯುಗಾದಿ ಹಬ್ಬ ಅಂದ್ರೆ ಬೇವು ಬೆಲ್ಲ.. ಹೊಸತೊಡಕು.. ಅಂದರ್​ ಬಾಹರ್.. ಜೂಜು ಅಂತಿದ್ದ ಜನಕ್ಕೆ ಈ ಬಾರಿ ಬರಗಾಲ ಬಿಸಿಲಿನ ಆರ್ಭಟ ಸಂಕಷ್ಟಕ್ಕೆ ತಳ್ಳಿತ್ತು. ಉರಿ ಬಿಸಿಲಿನಲ್ಲಿ ಕರಗಿದ್ದ ಎನರ್ಜಿ ಮಳೆಯ ಆಗಮನದಿಂದ ಡಬಲ್​ ಆಗಿ ಚಾರ್ಜ್​ ಆಗಿದೆ. ಆದ್ರೆ ಇದೇ ಮಳೆಯಿಂದ ರಾಜ್ಯದಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.

publive-image

ವಿಜಯಪುರ

ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ದಾರುಣ ಸಾವು

ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ಸಿಡಿಲಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇಂಡಿ ಪಟ್ಟಣದ ಮಸಳಿ ಗ್ರಾಮದ 16 ವಯಸ್ಸಿನ ಯುವಕ ಬೀರಪ್ಪ ನಿಂಗಪ್ಪ ಅವರಾದಿ ಹಾಗೂ ಮಸಳಿ ಬಿ.ಕೆ.ಗ್ರಾಮದ 45 ವಯ್ಯಸ್ಸಿನ ರೈತ ಸೋಮಶೇಖರ ಪಟ್ಟಣಶೆಟ್ಟಿ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಮಾವಿನಹಳ್ಳಿ ರಸ್ತೆ ಜಲದಪ್ಪನ ಕೆರೆಯ ಜಮೀನಿನಲ್ಲಿ ಭೀರಪ್ಪ ನಿಂಗಪ್ಪ ಮೃತಪಟ್ಟಿದ್ದಾನೆ. ಮೃತ ಭೀರಪ್ಪ ಮನೆಗೆ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತ ಬಾಲಕನ ಕುಟುಂಬಸ್ಥರಿಗೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿ

ಬಿಸಿಲಿಗೆ ಬಸವಳಿದಿದ್ದ ಕಲಬುರಗಿ ಜನೆತೆಗೆ ತಂಪೆರೆದ ವರುಣ

ಕಲಬುರಗಿಯಲ್ಲಿ ಮಳೆ ಸಿಂಚನವಾಗಿದೆ. ಕಲಬುರಗಿ ಸೇರಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಬಿಸಿಲಿಗೆ ಕಂಗೆಟ್ಟಿದ್ದ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. 43-44 ಡಿಗ್ರಿ ಸೆಲ್ಸಿಯಸ್ ಸೂರ್ಯ ಶಾಖಕ್ಕೆ ಜನ ತತ್ತರಿಸಿದ್ದರು. ಈಗ ಮಳೆ ನೋಡಿ ಖುಷಿಯಾಗಿದ್ದಾರೆ. ಗುಡುಗು-ಮಿಂಚು-ಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು ಕಲಬುರಗಿ ಜಿಲ್ಲೆಯಾದ್ಯಂತ ಮೋಡ ಮುಸುಕಿನ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಲಬುರಗಿಯಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಕೆಲವೆಡೆ ಬಿರುಗಾಳಿ ಸಹಿತ ಬಂದ ವರುಣನ ಕೃಪೆಗೆ ಕಲಬುರಗಿ ಜನತೆ ಸಂತಸಗೊಂಡಿದೆ.

Advertisment

ಶಿವಮೊಗ್ಗ

ರಸ್ತೆಯಲ್ಲಿ ನಿಧಾನವಾಗಿ ಚಲಿಸುವಂತೆ ಸವಾರರಿಗೆ ಪೊಲೀಸ್ ಮನವಿ

ಅಮ್ಮ ನಿಧಾನವಾಗಿ ಹೋಗಿ ಬಿಳ್ತೀರಾ.. ರಸ್ತೆ ಸ್ಕಿಡ್ ಆಗ್ತಿದೆ ನಿಧಾನವಾಗಿ ಹೋಗಿ.. ಹೀಗೆ ಶಿವಮೊಗ್ಗ ಪೊಲೀಸರು ವಾಹನ ಸವಾರರ ಬಳಿ ಹೀಗಂತ ಮನವಿ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಕೆಲ ಕಾಲ ಮಳೆ ಸುರಿದಿದೆ.. ಸುರಿದ ಸಣ್ಣ ಮಳೆಗೆ 15 ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದೆ.. ತಕ್ಷಣವೇ ಎಚ್ಚೆತ್ತುಕೊಂಡ ಶಿವಮೊಗ್ಗ ಟ್ರಾಫಿಕ್ ಪೋಲಿಸರು.. ರಸ್ತೆ ಜಾರದಂತೆ ಮಣ್ಣು ಮತ್ತು ಮರದ ದೂಳನ್ನು ತಂದು ರಸ್ತೆ ಮೇಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ನಿಧಾನವಾಗಿ ಚಲಿಸುವಂತೆ ಮನವಿ ಮಾಡಿದ್ದಾರೆ. ಶಿವಮೊಗ್ಗ ಟ್ರಾಫಿಕ್ ಪಿಎಸ್​ಐ ತಿರುಮಲೇಶ್ ಹಾಗೂ ಪೊಲೀಸ್ ಸಿಬ್ಬಂದಿಯ ಸಾಮಾಜಿಕ ಕಳಕಳಿಗೆ ವಾಹನ ಸವಾರರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆ 3 ಕ್ಷೇತ್ರಗಳನ್ನ ಗೆದ್ದುಕೊಂಡು ಬರಲೇಬೇಕು.. ಕಾರಣ?

publive-image

ಇದನ್ನೂ ಓದಿ:ದಿನಕ್ಕೆ 2 ರಿಂದ 3 ಬಾಟಲ್​ ಲಾಫಿಂಗ್​ ಗ್ಯಾಸ್ ಸೇವನೆ.. ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ವಿದ್ಯಾರ್ಥಿನಿ

Advertisment

ಹಲವು ತಿಂಗಳಿನಿಂದ ಬಿಸಿಲ ತಾಪಕ್ಕೆ ಬಸವಳಿದಿದ್ದ ರಾಜ್ಯದ ಜನತೆಗೆ ಮಳೆರಾಯ ತಂಪೆರೆಯುತ್ತಾ ಬರುತ್ತಿದ್ದಾನೆ.. ಆದ್ರೆ ಮಳೆ ಗಾಲ ಆರಂಭಕ್ಕೂ ಮುನ್ನವೇ ಸಣ್ಣ ಮಳೆಗೆ ಇಬ್ಬರು ಬಲಿಯಾಗಿರೋದು ಬೇಸರ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment