/newsfirstlive-kannada/media/post_attachments/wp-content/uploads/2025/06/kamal-hasan3.jpg)
ಬೆಂಗಳೂರು: ಮಹಾಮೂರ್ಖ, ಅವಿವೇಕಿ ಕಮಲ್ ಹಾಸನ್ ಅಹಂಕಾರಕ್ಕೆ ಅಂತ್ಯ ಕಾಣಬೇಕು. ಇನ್ಮುಂದೆ ಕಮಲ್ ಹಾಸನ್ ಯಾವುದೇ ಸಿನಿಮಾ ಬಿಡುಗಡೆ ಆಗೋದಿಲ್ಲ, ಕರ್ನಾಟಕಕ್ಕೆ ಬರಬಾರದೆಂದು ಅಂತ ತೀರ್ಮಾನ ಮಾಡಿದ್ದೇವೆ ಅಂತ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾರ್ನಿಂಗ್ ಕೊಟ್ಟಿದ್ದಾರೆ.
ಫಿಲ್ಮ್ ಚೇಂಬರ್ಗೆ ಪ್ರತ ಬರೆದಿದ್ದ ಕಮಲ್ ಹಾಸನ್
ಕನ್ನಡ ನಾಡು, ನುಡಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಥಗ್ ಲೈಫ್ ಚಿತ್ರದ ಇವೆಂಟ್ನಲ್ಲಿ ನಾನು ಡಾ.ರಾಜ್ಕುಮಾರ್ ಕುಟುಂಬದ ಬಗ್ಗೆ ಗೌರವದಿಂದ ಮಾತನಾಡಿದ್ದೆ. ಆದ್ರೆ ನನ್ನ ಮಾತುಗಳನ್ನ ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಉದ್ದೇಶ ಆ ಕುಟುಂಬ ಮತ್ತು ಕನ್ನಡದ ಬಗ್ಗೆ ಪ್ರೀತಿ ವ್ಯಕ್ತಪಡಿಸಬಹುದಾಗಿತ್ತು. ತಮಿಳಿನಂತೆ ಕನ್ನಡ ಭಾಷೆಗೂ ಶ್ರೀಮಂತವಾದ ಇತಿಹಾಸ ಮತ್ತು ಸಾಂಸ್ಕ್ರತಿಕ ಹಿನ್ನೆಲೆ ಇದೆ. ಕನ್ನಡ ಭಾಷಿಕರ ಬಗ್ಗೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವ ಇದೆ. ಸಿನಿಮಾ ಜನರನ್ನು ಬೆಸೆಯುವ ಸೇತುವೆ ಆಗಬೇಕು ಆದ್ರೆ ಒಡೆಯಬಾರದು. ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ. ಕನ್ನಡಿಗರು ನನ್ನ ಅರ್ಥ ಮಾಡಿಕೊಳ್ಳುತಾರೆ ಎನ್ನುವ ನಂಬಿಕೆ ಇದೆ.
ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?
ಕಮಲ್ ಹಾಸನ್ ತಮ್ಮ ಸಿನಿಮಾ ಭದ್ರತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು, ಆದ್ರೆ ಕಮಲ್ ಹಾಸನ್ಗೆ ಕೋರ್ಟ್ ಜಡ್ಜ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾಷೆ ಆಧಾರದ ಮೇಲೆ ಒಂದು ರಾಜ್ಯ ಆಗಿದೆ. ಅಂತಹ ಭಾಷೆಗೆ ಅವಮಾನ ಮಾಡಿ, ಕ್ಷಮೆ ಕೇಳದೇ ದುರಹಂಕಾರದ ವರ್ತನೆ ತೋರಿ ಇಂದು ಹೈಕೋರ್ಟ್ಗೆ ಬಂದಿದ್ದೀರಾ ಅಲ್ವಾ ಅಂತ ತರಾಟೆ ತೆಗೆದುಕೊಂಡಿದೆ. ಅವರ ಪರವಾಗಿ ಹೈಕೋರ್ಟ್ ಹೋದವರಿಗೆ ಕನ್ನಡ ಪಾಠ ಆಗಿದೆ. ಅವಿವೇಕಿ ಕಮಲ್ ಹಾಸನ್ ಅಹಂಕಾರ ಅಂತ್ಯವಾಗಬೇಕು. ಹೈಕೋರ್ಟ್ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದೆ. ಅವ್ರು ಕರ್ನಾಟಕಕ್ಕೆ ಬರಬಾರದೆಂದು ತೀರ್ಮಾನ ಮಾಡಿದ್ದೇವೆ. ಹೈಕೋರ್ಟ್ ತೀರ್ಮಾನದಿಂದ ನಮಗೆ ಸಂತಸ ಸಿಕ್ಕಂತಾಗಿದೆ. ಕಮಲ್ ಹಾಸನ್ ಭಾಷಾ ತಜ್ಞರ? ಇತಿಹಾಸ ತಜ್ಞರ ಅಂತ ಪ್ರಶ್ನಿಸಿದೆ. ಈಗಲಾದರೂ ಕೋರ್ಟ್ ಹೋದವರು ಅಥವಾ ಮಹಾನ್ ಮೂರ್ಖ ಅವಿವೇಕಿ ಕಮಲ್ ಹಾಸನ್ ಕನ್ನಡ ಜ್ಞಾನ ಭಾಷಾ ಜ್ಞಾನ ಇಲ್ಲದ ದುಷ್ಠ ವ್ಯಕ್ತಿ, ಅವನ ಅಹಂಕಾರಕ್ಕೆ ಅಂತ್ಯ ಕಾಣಿಸ್ತಿವಿ. ಮಹಾಮೂರ್ಖ, ಅವಿವೇಕಿ ಕಮಲ್ ಹಾಸನ್ ಅಹಂಕಾರಕ್ಕೆ ಅಂತ್ಯ ಕಾಣಬೇಕು. ಕಮಲ್ ಹಾಸನ್ ಕರ್ನಾಟಕಕ್ಕೆ ಬರಬಾರದೆಂದು ತೀರ್ಮಾನ ಮಾಡಿದ್ದೇವೆ ಅಂತ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ